Taj movie trailer released. ಎರಡು ಜಾತಿ,ಧರ್ಮಗಳ ನಡುವಿನ ಪ್ರೇಮಕಥೆಯ ತಾಜಾತನ
ಇದು ಎರಡು ಧರ್ಮಗಳ ನಡುವೆ ನಡೆಯುವ ಪ್ರೇಮ ಕಥೆಗೆ. ಆಗಾಗ ಸಿನಿಮಾ ಪರದೆಗಳು ಸಜ್ಜಾಗುತ್ತಲೇ ಇವೆ.
ಈಗ ಮತ್ತೊಂದು ಚಿತ್ರ “ತಾಜ್” ಇಂತದ್ದೇ ಪ್ರೇಮ ಕಥೆಯನ್ನು ವಿಭಿನ್ನ ರೀತಿಯಲ್ಲಿ ಹೇಳ ಹೊರಟಿದೆ. ಸಹಜವಾಗಿ ಎರಡು ಧರ್ಮದ , ಎರಡು ಜಾತಿಗಳ ಪ್ರೇಮಿಗಳು ಒಂದಾದರೆ ಸಮಾಜದ ವಿರೋಧ ಎದುರಾಗುತ್ತದೆ.
ಅದನ್ನು ಮೀರಿ ಚಿತ್ರವು ಮನರಂಜನೆ ನೀಡುತ್ತದೆ ಎನ್ನುವುದು ನಿರ್ದೇಶಕ ಬಿ.ರಾಜರತ್ನ ರವರ ಅಂಬೋಣ.

ಮುಖ್ಯ ಪಾತ್ರದಲ್ಲಿರುವ ಷಣ್ಮಖ ಜೈ ಅವರು ನಟಿಸಿದ್ದಾರೆ ಹಾಗೆ ಸಾಹಸ ದೃಶ್ಯಗಳಲ್ಲಿ ಚನ್ನಾಗಿ ನಟಿಸಿದ್ದಾರೆ ಎನ್ನುವುದು ಟ್ರೇಲರ್ ನಲ್ಲಿ ತೋರಿಸಿದ್ದಾರೆ. ಕನ್ನಡಿಗರ ಆರಾಧ್ಯದೈವ ಡಾ, ರಾಜಕುಮಾರ್ ರವರ ಪ್ರೇರಣೆಯಿಂದ ಯೋಗವನ್ನೂ ಮಾಡಿದ್ದಾರೆ ಇದು ಹೊಸ ತಂಡದ ತಾಜಾ ಕಥೆಯ
ಸವಿಯನ್ನು ಇಟ್ಟುಕೊಂಡು ಮಾಡಿರುವ ಕಥೆ
ಇತ್ತೀಚೆಗೆ ಚಿತ್ರದ ಟ್ರೈಲರ್ ಬಿಡುಗಡೆಯಲ್ಲಿ ಚಿತ್ರದ ಬಗ್ಗೆ ವಿವರಗಳನ್ನು ಚಿತ್ರತಂಡ ನೀಡಿತು.
ಷಣ್ಮಖ ಜೈ ತಮ್ಮ ಪತ್ನಿ ಲಕ್ಷ್ಮಿ ಅವರ ಹೆಸರಿನಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಸಾಹಸ ದೃಶ್ಯಗಳು ನೈಜವಾಗಿ ಬರಬೇಕಾದರೆ ನೈಜವಾಗಿಯೇ ಸಾಕಷ್ಟು ಹೊಡೆತ ತಿಂದಿದ್ದಾರೆ ಷಣ್ಮುಖ ಜೈ ಎಂದು ಚಿತ್ರ ತಂಡ ಹೇಳಿಕೊಂಡಿತು.
ದಕ್ಷಿಣ ಆಫ್ರಿಕಾ ಮೂಲದ ನಟ ರೋಬೋ, ನಟ ಕಡ್ಡಿ ವಿಶ್ವ, ಕಾಶಿನಾಥ್ ನೆಲ ಮಂಗಲ, ಉದ್ಯಮಿ, ನಿರ್ಮಾಪಕ ರವಿ ಹಾಜರಿದ್ದರು.
ಈ ಚಿತ್ರದಲ್ಲಿ ನಟಿಸಿರುವ ನಾಯಕ ನಟಿ ಅಪ್ಸರಾ
ಇಹಲೋಕ ತ್ಯಜಿಸಿದ್ದಾರೆ ಎಂಬುದು ನೋವಿನ ಸಂಗತಿ. ಆಕೆಯ ತಂದೆ ರಾಮಕೃಷ್ಣ ಅವರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದು ಮಗಳ ಬಗ್ಗೆ ಒಂದಷ್ಟು ನೋವಿನಿಂದಲೇ ವಿವರಗಳನ್ನು ನೀಡಿದರು.

ನಟ ವರ್ಧನ್ ಚಿತ್ರದಲ್ಲಿ ಒಬ್ಬ ಮುಸ್ಲಿಂ ಯುವಕನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ತಮ್ಮ ಪಾತ್ರದ ಬಗ್ಗೆ ವರ್ಧನ್ ವಿವರ ನೀಡಿದರು.
ಛಾಯಾಗ್ರಾಹಕ ದೀಪಕ್ ಕುಮಾರ್ ಚಿತ್ರದ ದೃಶ್ಯಗಳನ್ನು ಲಡ್ಡು ರೀತಿಯಲ್ಲಿ ಚಿತ್ರಿಸಿದ್ದಾರಂತೆ.

ಚಿತ್ರದ ಬಿಡುಗಡೆಯ ಜವಾಬ್ದಾರಿಯನ್ನು ಹಂಚಿಕೆದಾರ ವೆಂಕಟ್ ಗೌಡ ವಹಿಸಿಕೊಂಡಿದ್ದಾರೆ. ಚಿತ್ರ ಜುಲೈ ತಿಂಗಳಲ್ಲಿ ತೆರೆಗೆ ಬರುವ ಸಿದ್ಧತೆಯಲ್ಲಿದೆ.