“Taekwondo girl” movie teaser released by Indrajeet Lankesh “ಟೇಕ್ವಾಂಡೋ ಗರ್ಲ್ ” ಇಂತಹ ಚಿತ್ರಗಳಿಗೆ ಸರ್ಕಾರ ಗಮನ ನೀಡಬೇಕು.ಈ ಚಿತ್ರಕ್ಕೆ ಇಂದ್ರಜಿತ್ ಲಂಕೇಶ್ ಸಾಥ್.

ಆಗಸ್ಟ್ 30ಕ್ಕೆ ಬರುತ್ತಿರುವ “ಟೇಕ್ವಾಂಡೋ ಗರ್ಲ್ ” ಚಿತ್ರದ ಟೀಸರ್ ಬಿಡುಗಡೆ ಮಾಡಿದ ಇಂದ್ರಜಿತ್ ಲಂಕೇಶ್ .

ಇವತ್ತಿನ ಸಮಾಜದಲ್ಲಿ ನಡೆಯುತ್ತಿರುವ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ , ಅತ್ಯಾಚಾರದ ನಿರಂತರವಾಗಿ ನಡೆಯುತ್ತಲೇ ಇದೆ ಇದಕೆಲ್ಲ ಕಡಿವಾಣ ಬಹಳ ಅಗತ್ಯ. ಹೆಣ್ಣು ಮಕ್ಕಳು ಸ್ಟ್ರಾಂಗ್ ಆಗಬೇಕು. ಕರಾಟೆ , ಸೆಲ್ಫ್ ಡಿಫೆನ್ಸ್ ಮಾಡಿಕೊಳ್ಳುವಂತಹ ಟೇಕ್ವಾಂಡೋ ಸಮರ ಕಲೆಯನ್ನ ಮಕ್ಕಳು ಕಲಿಯಬೇಕಾಗಿರುವುದು ಅನಿವಾರ್ಯವಾಗಿದೆ. ಇದರಿಂದ ಹೆಣ್ಣು ಮಕ್ಕಳು ತಮ್ಮನ ತಾವು ರಕ್ಷಿಸಿಕೊಳ್ಳುವುದಕ್ಕೆ ಒಂದು ದಾರಿ ಆಗುತ್ತದೆ. ಅಂತದ್ದೇ ಒಂದು ಸಮರಭ್ಯಾಸ ಕಲೆಯ ಚಿತ್ರವಾದ “ಟೇಕ್ವಾಂಡೋ ಗರ್ಲ್” ಎಂಬ ಚಿತ್ರ ಇದೆ ಆಗಸ್ಟ್ 30ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಈ ಚಿತ್ರದ ಹಾಡು ಹಾಗೂ ಟೀಸರ್ ಬಿಡುಗಡೆ ಕಾರ್ಯಕ್ರಮವನ್ನು ಕಲಾವಿದರ ಭವನದಲ್ಲಿ ಆಯೋಜಿಸಿದ್ದು, ಖ್ಯಾತ ನಿರ್ದೇಶಕ ಇಂದ್ರಜಿತ್ ಲಂಕೇಶ್ ಮುಖ್ಯ ಅತಿಥಿಯಾಗಿ ಆಗಮಿಸಿ ಟೀಸರ್ ಬಿಡುಗಡೆ ಮಾಡಿದರು. ನಂತರ ಮಾತನಾಡುತ್ತಾ ಇಂತಹ ಚಿಕ್ಕ ವಯಸ್ಸಿನಲ್ಲೇ ಇಷ್ಟೊಂದು ಶ್ರಮ ಪಟ್ಟು ಕಲ್ತಿರುವ ಋತುಸ್ಪರ್ಶಗೆ ಉಜ್ವಲ ಭವಿಷ್ಯವಿದೆ. ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಪಡೆದು ಈ ಸೆಲ್ಫ್ ಡಿಫೆನ್ಸ್ ಮೂಲಕ ತಮ್ಮನ್ನು ರಕ್ಷಿಸಿಕೊಳ್ಳುವ ಶಕ್ತಿಯನ್ನು ಹೊಂದಿರುವುದು ಬಹಳ ಮುಖ್ಯ. ಇಂತಹ ಚಿತ್ರಗಳು ಹೆಚ್ಚು ಹೆಚ್ಚಾಗಿ ಬರಬೇಕು. ಹೊಸ ಪ್ರತಿಭೆಗಳು ಆಗಮನವಾಗಬೇಕು , ನಿಂತ ನೀರಾಗದೆ ಹರಿಯುವ ನೀರಾಗಿ ಬೆಳೆಯಬೇಕು.

ತಾಯಿ-ತಂದೆ ಸಪೋರ್ಟ್ ನೀಡಿದ್ದಾರೆ. ಆಕ್ಟಿಂಗ್ , ಡ್ಯಾನ್ಸ್ , ಫೈಟ್ ಎಲ್ಲವೂ ಚೆನ್ನಾಗಿ ಮಾಡುತ್ತಿದ್ದಾಳೆ ಇವಳಿಗೆ ಒಳ್ಳೆಯದಾಗಲಿ ಎನ್ನುತ್ತಾ ವೇದಿಕೆ ಮೇಲೆ ಪುಟ್ಟ ಬಾಲಕಿಗೆ ಸನ್ಮಾನವನ್ನು ಇಂದ್ರಜಿತ್ ಲಂಕೇಶ್ ರವರು ಮಾಡಿದ್ದು ವಿಶೇಷವಾಗಿತ್ತು.


ನಟಿ ರೂಪಿಕಾ ಮಾತನಾಡುತ್ತಾ ಈ ಕಾರ್ಯಕ್ರಮಕ್ಕೆ ಬರಲು ಕಾರಣ ಚಿತ್ರದ ಟೀಸರ್ ಹಾಗೂ ಹಾಡುಗಳು. ಯಾಕಂದರೆ ಬೇಬಿ ಋತುಸ್ಪರ್ಶ ಬಹಳ ಸೊಗಸಾಗಿ ಅಭಿನಯಿಸಿದ್ದಾಳೆ. ನಾನು ಚಿತ್ರಂಗಕ್ಕೆ ಬಾಲ ನಟಿಯಾಗಿ ಬಂದಿದ್ದು , ಆಗ ಅದರ ಶ್ರಮ ಏನು ಅಂತ ನನಗೆ ಗೊತ್ತಿದೆ. ಹೆಣ್ಣು ಮಕ್ಕಳ ಸ್ವಯಂ ರಕ್ಷಣೆ ಬಹಳ ಅಗತ್ಯ. ಈ ಒಂದು ಕಲೆ ಬಗ್ಗೆ ಪಠ್ಯಪುಸ್ತಕ ಆಗುವುದು ಬಹಳ ಮುಖ್ಯ. ಇಡೀ ತಂಡಕ್ಕೆ ಶುಭವಾಗಲಿ ಎಂದು ಹಾರೈಸಿದರು.

ಈ ಕಾರ್ಯಕ್ರಮದ ನಿರೂಪಣೆಯನ್ನು ಹಿರಿಯ ನಟ ಗಣೇಶ್ ರಾವ್ ನಡೆಸಿಕೊಟ್ಟಿದ್ದು, ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ನಿರ್ದೇಶಕ ಕೆ . ಪುರುಷೋತ್ತಮ್ , ಚಿತ್ತಾರ ಪತ್ರಿಕೆಯ ಶಿವಕುಮಾರ್ , ಕೆ ಎಂ ಡಬ್ಲ್ಯೂ ಅಧ್ಯಕ್ಷ ಮನೋಜ್ ಕುಮಾರ್ , ಬೇಬಿ ಋತುಸ್ಪರ್ಶ ಶಾಲೆಯ ಪ್ರಿನ್ಸಿಪಲ್ ಮಂಜುಳಾ, ಟೇಕ್ವಾಂಡೋ ತರಬೇತಿದಾರ ವಿ. ರವಿ ಹಾಗೂ ಅನೇಕರು ಆಗಮಿಸಿ ಚಿತ್ರ ತಂಡಕ್ಕೆ ಶುಭವನ್ನು ಹಾರೈಸಿದರು.

ಈ ಚಿತ್ರದ ನಿರ್ದೇಶಕ ರವೀಂದ್ರ ವಂಶಿ ಮಾತನಾಡುತ್ತಾ ನಟಿ ಮಾಲಾಶ್ರೀ ಅಭಿನಯ ನೈಟ್ ಕರ್ಫ್ಯೂ ಚಿತ್ರದ ನಂತರ ಮಾಡಿರುವ ಮತ್ತೊಂದು ಚಿತ್ರ ಈ “ಟೇಕ್ವಾಂಡೋ ಗರ್ಲ್”. ಇವತ್ತಿನ ಚಿತ್ರಮಂದಿರಗಳ ಸಮಸ್ಯೆ ಎಲ್ಲರಿಗೂ ತಿಳಿದಿದೆ. ದೊಡ್ಡ ಸ್ಟಾರ್ ಚಿತ್ರಗಳ ನಡುವೆ ನಮ್ಮಂತ ಚಿತ್ರಗಳು ಬರುತ್ತಿದೆ. ಯಾವುದು ಗುಣಮಟ್ಟ , ಪ್ರಸ್ತುತ ಅಗತ್ಯ, ಎಂಬುದನ್ನು ಗಮನಿಸಿ ನಮ್ಮ ಚಿತ್ರವನ್ನು ನೋಡಿ ಪ್ರೋತ್ಸಾಹಿಸಬೇಕು, ಈ ಚಿತ್ರದಲ್ಲಿ ಒಂದು ಬಡ ಕುಟುಂಬದ ಹೆಣ್ಣು ಮಗಳು ಶಿಕ್ಷಣಕ್ಕಾಗಿ ಎಷ್ಟು ಕಷ್ಟ ಪಡುತ್ತಾಳೆ, ಓದುವುದೇ ಕಷ್ಟ ಇರುವಂತ ಸಮಯದಲ್ಲಿ ಇದರ ಮದ್ಯೆ ಟೇಕ್ವಾಂಡೋ ಸಮರ ಕಲೆ ಹೇಗೆ ಕಲಿಯುತ್ತಾಳೆ, ಈ ವಿದ್ಯೆಯ ಮುಖಾಂತರ ಸಮಾಜಕ್ಕೆ ಹೇಗೆ ಮಾದರಿಯಾಗುತ್ತಾಳೆ ಎನ್ನುವುದೇ ಈ ಚಿತ್ರದ ಮುಖ್ಯ ಸಾರಾಂಶ.

5ನೇ ತರಗತಿಯಲ್ಲಿ ಓದುತ್ತಿರುವ ಋತು ಸ್ಪರ್ಶ 3ನೇ ವಯಸ್ಸಿನಿಂದ ಈ ಕಲೆಯನ್ನು ಅಭ್ಯಾಸ ಮಾಡಿದ್ದಾಳೆ. ಒಟ್ಟು ಎಂಟು ಪರೀಕ್ಷೆಗಳನ್ನು ಎದುರಿಸಿ ಈಗ ಬ್ಲಾಕ್ ಬೆಲ್ಟ್ ಪಡೆದು 4 ಅಂತರಾಷ್ಟ್ರೀಯ ಚ್ಯಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿ ಹೆಮ್ಮೆಯ ಟೇಕ್ವಾಂಡೋ ಪಟು ಆಗಿದ್ದಾಳೆ. ನಮ್ಮ ಚಿತ್ರವು ಚಿನ್ನಾಗಿ ಬಂದಿದೆ. ನೀವೆಲ್ಲರೂ ಈ ಚಿತ್ರವನ್ನು ನೋಡಿ ಬೆಂಬಲಿಸಿ ಎಂದರು.

ಇನ್ನು ನಿರ್ಮಾಪಕಿ ಡಾ. ಸುಮೀತಾ ಪ್ರವೀಣ್ ಮಾತ್ತನಾಡುತ್ತಾ ನನ್ನ ಮಗಳು ಬೇಬಿ ಋತು ಸ್ಪರ್ಶ ಸಾಮರ್ಥ್ಯವನ್ನು ಗಮನಿಸಿ ಈ ಚಿತ್ರವನ್ನ ಮಾಡಿದೇನೆ. ಇದು ಮಗಳಿಗಷ್ಟೇ ಸೀಮಿತವಾಗಬಾರದು ಎಂದು ಒಂದು ಸಿನಿಮಾ ಮುಖಾಂತರ ಸಮಾಜಕ್ಕೆ ಈ ಸಮರ ಕಲೆಯ ಜೊತೆಗೆ ಹಣುಮಕ್ಕಳ ರಕ್ಷಣೆ ಬಗ್ಗೆ ಹೇಳಲು “ಟೇಕ್ವಾಂಡೋ ಗರ್ಲ್”
ಸಿನಿಮಾ ಮೂಲಕ ನಿರ್ಮಿಸಿದ್ದೇನೆ. ಈ ಚಿತ್ರಕ್ಕೆ ಪತಿ ಪ್ರವೀಣ್ ಭಾನು ಕೂಡ ಸಾಥ್ ನೀಡಿ ಮಗಳನ್ನು ಬೆಳ್ಳಿತೆರೆಗೆ ಪರಿಚಯಿಸಿದ್ದಾರೆ. ಈ ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದ್ದು , ಮಕ್ಕಳಿಗಾಗಿ ಚಿತ್ರವನ್ನ ತೋರಿಸಲು ಎಜುಕೇಶನ್ ಮಿನಿಸ್ಟರ್ ಸೇರಿದಂತೆ ಅಧಿಕಾರಿಗಳ ಜೊತೆ ಮಾತುಕತೆ ಮಾಡಿ ಫೈಲ್ ಅನ್ನ ಕೊಟ್ಟಿದ್ದೇವೆ. ಇನ್ನು ಯಾವುದೇ ಪ್ರತಿಕ್ರಿಯೆ ಬಂದಿಲ್ಲ , ಇದೇ 30 ರಂದು ನಮ್ಮ ಚಿತ್ರ ಬಿಡುಗಡೆ ಮಾಡುತ್ತಿದ್ದು, ವಿದ್ಯಾರ್ಥಿಗಳಿಗಾಗಿ ಟಿಕೆಟ್ ನಲ್ಲಿ 50 ಪರ್ಸೆಂಟ್ ಕಡಿಮೆ ಮಾಡಿ ಚಿತ್ರ ವೀಕ್ಷಿಸಲು ಅನುಕೂಲ ಮಾಡುತ್ತೇವೆ. ನಾನು ಈ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರ ಮಾಡಿದ್ದೇನೆ. ನನ್ನ ಪತಿಯು ಕೂಡ ಅಭಿನಯಿಸಿದ್ದಾರೆ, ನಿಮ್ಮೆಲ್ಲರ ಸಹಕಾರ , ಪ್ರೀತಿ ಇರಲಿ ಎಂದು ಕೇಳಿಕೊಂಡರು.

ಇನ್ನು ಬೇಬಿ ಋತು ಸ್ಪರ್ಶ ಮಾತನಾಡುತ್ತಾ ನನಗೆ ಬಾಲ್ಯದಿಂದಲೂ ಕ್ರೀಡೆ ಹಾಗೂ ಸಿನಿಮಾ ಬಗ್ಗೆ ಆಸಕ್ತಿ ಇತ್ತು. ನನಗೆ ನನ್ನ ತಾಯಿ ಹಾಗೂ ನನ್ನ ತಂದೆ ತುಂಬಾ ಸಪೋರ್ಟ್ ನೀಡಿದ್ದಾರೆ. ಹಾಗೆ ನಾನು ಬ್ಲಾಕ್ ಬಿಲ್ಟ್ ಪಡೆಯಲು ನನ್ನ ಗುರುಗಳು ತುಂಬಾ ಟ್ರೈನಿಂಗ್ ನೀಡಿದ್ದಾರೆ. ಹಾಗೆಯೇ ಶಾಲೆಯಲ್ಲಿ ನನ್ನ ಪ್ರಿನ್ಸಿಪಾಲ್ ಕೂಡ ಸಪೋರ್ಟ್ ಮಾಡುತ್ತಿದ್ದು , ಶಾಲೆ ಹಾಗೂ ಸಿನಿಮಾಗೆ ಯಾವುದೇ ತೊಂದರೆ ಮಾಡಿಕೊಳ್ಳದೆ ಎರಡನ್ನು ನಿಭಾಯಿಸುತ್ತಿದ್ದೇನೆ.
ಈ ಚಿತ್ರದ ನಂತರ ಐದು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ನನ್ನ ಫ್ರೆಂಡ್ಸ್ ಈ ಟೀಸರ್ ಅನ್ನು ನೋಡಿ ಚೆನ್ನಾಗಿ ಮಾಡಿದ್ದೀಯಾ ಎಂದು ಹೇಳಿದ್ದಾರೆ.

ಚಿತ್ರಕ್ಕೆ ಸುಮಾರು ನೂರೈವತ್ತು ಚಿತ್ರಗಳಿಗೆ ರಾಗ ಸಂಯೋಜನೆ ಮಾಡಿರುವ ಸಂಗೀತ ನಿರ್ದೇಶಕ M.S. ತ್ಯಾಗರಾಜ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಚಿತ್ರ ಇದೇ ತಿಂಗಳು 30ರಂದು ತೆರೆಗೆ ಬರುತ್ತಿದೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor