Survey number 45 movie moharta. ಬಂಡೆ ಮಹಾಕಾಳಿ ಅಮ್ಮನ ಸನ್ನಿದಿಯಲ್ಲಿ “ಸರ್ವೇ ನಂಬರ್ 45” ಚಿತ್ರಕ್ಕೆ ಮುಹೂರ್ತ

ಅಮ್ಮನ ಸನ್ನಿದಿಯಲ್ಲಿ ಸರ್ವೇ ನಂಬರ್ 45 ಮುಹೂರ್ತ

ಹೊಸಬರೇ ಸೇರಿಕೊಂಡು ಸಿದ್ದಪಡಿಸುತ್ತಿರುವ ’ಸರ್ವೇ ನಂಬರ್ 45’ ಚಿತ್ರದ ಮುಹೂರ್ತ ಸಮಾರಂಭವು ಶ್ರೀ ಬಂಡಿ ಮಹಾಂಕಾಳಿ ಅಮ್ಮನ ಸನ್ನಿದಿಯಲ್ಲಿ ಅದ್ದೂರಿಯಾಗಿ ನಡೆಯಿತು. ಪ್ರಥಮ ದೃಶ್ಯಕ್ಕೆ ಹಿರಿಯ ನಿರ್ದೇಶಕ ಹೆಚ್.ವಾಸು ಕ್ಲಾಪ್ ಮಾಡಿದರೆ, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್‌ಬಣಕಾರ್ ಕ್ಯಾಮಾರ ಆನ್ ಮಾಡಿ ತಂಡಕ್ಕೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಶರವಣ ಉಪಸ್ತಿತರಿದ್ದರು. ವರನಂದಿ ಸಿನಿ ಸಂಸ್ಥೆಯು ನಿರ್ಮಾಣದ ಜವಬ್ದಾರಿಯನ್ನು ಹೊತ್ತುಕೊಂಡಿದೆ. ಹಿರಿಯ ನಿರ್ದೇಶಕರುಗಳಾದ ಹೆಚ್.ವಾಸು ಮತ್ತು ಕೆ.ರಾಘವ ಅವರಲ್ಲಿ ಕೆಲಸ ಕಲಿತಿರುವ ಪಿರಿಯಾಪಟ್ಟಣದ ಶಿವಕುಮಾರ್.ಎಂ.ಶೆಟ್ಟಿಹಳ್ಳಿ ಈ ಹಿಂದೆ ಮಹದೇಶ್ವರ ಭಕ್ತಿ ಗೀತೆಗಳಿಗೆ ಸಾಹಿತ್ಯ ಬರೆದಿದ್ದಾರೆ. ಇದರ ಅನುಭವದಿಂದಲೇ ಸಿನಿಮಾಕ್ಕೆ ರಚನೆ,ಚಿತ್ರಕಥೆ, ಮೂರು ಹಾಡುಗಳನ್ನು ಬರೆದು ನಿರ್ದೇಶನ ಮಾಡುತ್ತಿದ್ದಾರೆ.

  ಗ್ರಾಮೀಣ ಭಾಗದಲ್ಲಿ ಅದರಲ್ಲೂ ರೈತ ತನ್ನ ಜಮೀನಿನಲ್ಲಿ ಕೃಷಿ ಮಾಡುವ ಜಾಗಕ್ಕೆ ಸರ್ವೇ ನಂಬರ್ ಎಂದು ಸರ್ಕಾರವು ನೀಡಿರುತ್ತದೆ. ಇದರ ಮಧ್ಯೆ ಆತನಿಗೆ ಒಂದಲ್ಲ ಒಂದು ಕಷ್ಟ ಬರುತ್ತಲೇ ಇರುತ್ತದೆ. ಅದನ್ನು ಚಾಣಾಕ್ಷತನದಿಂದ ಒಳ್ಳೆತನದಲ್ಲಿ ಹೇಗೆ ಬಗೆ ಹರಿಸಿಕೊಳ್ಳುತ್ತಾನೆ. ಕೆಟ್ಟದ್ದನ್ನು ಮಾಡಲು ಮುಂದಾದರೆ ಅನಾಹುತಗಳು ಕಟ್ಟಿಟ್ಟ ಬುತ್ತಿ. 
ನಿರ್ದೇಶಕರು ತಾವು ನೋಡಿದಂತ ಒಂದಷ್ಟು ಘಟನೆಗಳು ಜತೆಗೆ ಕಾಲ್ಪನಿಕ ಟಚ್ ಕೊಟ್ಟು ಸನ್ನಿವೇಶಗಳನ್ನು ಸೃಷ್ಟಿಸಿದ್ದಾರೆ. ನಾವುಗಳು ಒಳಿತನ್ನು ಬಯಸಿದರೆ ಒಳ್ಳೆಯದೇ ನಡೆಯುತ್ರದೆ. ಕೆಟ್ಟತನವನ್ನು ಆಯ್ಕೆ ಮಾಡಿಕೊಂಡರೆ ಅದೇ ಆಗುತ್ತದೆ’ ಎಂಬ ತೂಕದ ಸಂದೇಶವನ್ನು ಹೇಳಲಾಗುತ್ತಿದೆ.

’ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಗಿಲ್ಲಿನಟ, ಸಂತೋಷ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಾಲನಟಿಯಾಗಿದ್ದ ರೀಯಾಭಾಸ್ಕರ್ ಗೌಡರ ಮಗಳ ಪಾತ್ರದಲ್ಲಿ ನಾಲ್ಕನೇ ಚಿತ್ರಕ್ಕೆ ನಾಯಕಿ. ಇವರೊಂದಿಗೆ ಮುನಿ, ಜಗದೀಶ್ ಕೊಪ್ಪ, ಸಂಜಯ್ ಪಾಟೀಲ್, ಮೈತ್ರಿ, ಟೋನಿತಾ, ರಾಜವ್ ಬಾಲೆ, ಪ್ರಕಾಶ್ ಬಾನಾಳು, ತೇಜು ಮೈಸೂರು, ಸುರೇಶ್ ಕೋಲಾರ, ರಂಗರಾಜು ಹುಲಿದುರ್ಗ ಮುಂತಾದವರು ನಟಿಸುತ್ತಿದ್ದಾರೆ.  ಸಂಭಾಷಣೆ ಚಕ್ರಿ ಕಿರಿಸಾವೆ, ಸಂಗೀತ ವಿಶಾಲ್ ಅಲಾಪ್, ಛಾಯಾಗ್ರಹಣ ದೀಪಕ್ ಕುಮಾರ್.ಜಿ.ಕೆ ಅವರದಾಗಿದೆ. ಮೈಸೂರು, ಹಾಸನ, ಮಂಡ್ಯ ಸುಂದರ ತಾಣಗಳಲ್ಲಿ ಎರಡು ಹಂತಗಳಂತೆ ಸೆಪ್ಟಂಬರ್ ಮೊದಲ ವಾರದಿಂದ ಚಿತ್ರೀಕರಣ ನಡೆಸಲು ತಂಡವು ಯೋಜನೆ ರೂಪಿಸಿಕೊಂಡಿದೆ.


 

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor