ದುಬೈಗೆ ಹೊರಟುನಿಂತ ಸುಕನ್ಯದ್ವೀಪ
ಪಕ್ಕಾ ಫ್ಯಾಮಿಲಿ ಕಮ್ ಲವ್ ಕಾಮಿಡಿ ಎಂಟರ್ಟೈನರ್ ಕಥಾಹಂದರ ಹೊಂದಿರುವ ಸುಕನ್ಯ ದ್ವೀಪ. ಈಗಾಗಲೇ ಚಿತ್ರದ ಮೊದಲನೇ ಹಂತದ ಚಿತ್ರೀಕರಣ ಮುಗಿದಿದ್ದು ಕಳಸ, ಚಿಕ್ಕಮಗಳೂರು,ದೇವರಮನೆ ಹಾಗೂ ಮೂಡಿಗೆರೆ, ಸುತ್ತಮುತ್ತ ಎರಡನೇ ಹಂತದ ಚಿತ್ರೀಕರಣ ನಡೆಸಲಾಗುವುದು. ಉಳಿದಂತೆ ೨ ಹಾಡುಗಳ ಚಿತ್ರೀಕರಣಕ್ಕಾಗಿ ಚಿತ್ರತಂಡ ಮುಂದಿನವಾರ ದುಬೈಗೆ ಪ್ರಯಾಣ ಬೆಳೆಸಲಿದೆ. ನಾಯಕ ರಾಜ್ ಪ್ರಭು, ಶ್ರೇಯಾವಸಂತ್ ಹಾಗೂ ಡ್ಯಾನ್ಸ್ ಮಾಸ್ಟರ್ ಜಗ್ಗು ತೆರಳಲಿದ್ದಾರೆ. ಉಳಿದೆರಡು ಹಾಡುಗಳನ್ನು ಶಿಮ್ಲಾದಲ್ಲಿ ಶೂಟ್ ಮಾಡೋ ಪ್ಲಾನ್ ಇದೆ.ನಿರ್ಮಾಣದ ಜವಾಬ್ದಾರಿಯನ್ನು ರಾಜ್ ಪ್ರಭು ವಹಿಸಿಕೊಂಡಿದ್ದಾರೆ ಮೂವರು ಅಕ್ಕ-ತಂಗಿಯರ ಸುತ್ತ ನಡೆಯುವ ಕಥೆ ಹೇಳಹೊರಟಿದ್ದಾರೆ, ನಾಯಕನ ಪಾತ್ರದಲ್ಲಿ ರಾಜ್‌ಪ್ರಭು ಕಾಣಿಸಿಕೊಂಡಿದ್ದಾರೆ. ಫ್ಯಾಮಿಲಿ, ಲವ್‌ಸ್ಟೋರಿ ಇರೋ ಈ ಚಿತ್ರದಲ್ಲಿ ಕಾಮಿಡಿಗೆ ಹೆಚ್ಚು ಒತ್ತು ನೀಡಲಾಗಿದೆ, ಸುಕನ್ಯ ಎಂದರೆ ಹೆಣ್ಣು, ದ್ವೀಪ ಎಂದರೆ ಅವರಿರುವ ಮನೆಗೆ ಹೋಲಿಸಲಾಗಿದೆ.

ವೀರಬಾಹು ಈ ಚಿತ್ರದ ನಿರ್ಮಾಪಕರು. ಈ ಚಿತ್ರಕ್ಕೆ ಸಂಗೀತ ನಿರ್ದೇಶಕನಾಗಿ ಕೌಶಿಕ್ ಹರ್ಷ ಕೆಲಸಮಾಡಿದ್ದು. ೫ ಹಾಡುಗಳನ್ನು ಕಂಪೋಜ್ ಮಾಡಿದ್ದಾರೆ. ವಿಘ್ನೇಶ್ ನಾಗೇಂದ್ರ ಚಿತ್ರದ ಕ್ಯಾಮೆರಾ ವರ್ಕ್ ನಿಭಾಯಿಸಿದ್ದಾರೆ. ರಾಜ್ ಪ್ರಭು, ಸಚಿನ್ ಪುರೋಹಿತ್,ರಘು ರಂಜನ್,ನಾಯಕರು. ಶ್ರೇಯ ವಸಂತ್, ಅಕ್ಷಿತ ನಾಗರಾಜ್, ಚುಂಬಿತ ನಾಯಕಿಯರು. ಹಿರಿಯನಟ ಎಂಡಿ ಕೌಶಿಕ ಕುಟುಂಬದ ಹಿರಿಯನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.