sugar factories song trending ಶುಗರ್ ಫ್ಯಾಕ್ಟರಿ” ಗೆ ಜಯಂತ ಕಾಯ್ಕಿಣಿ ಬರೆದಿರುವ “ಜಹಾಪನಾ” ಹಾಡಿಗೆ ಮನಸೋತ ಸಿನಿಪ್ರಿಯರು.

“ಶುಗರ್ ಫ್ಯಾಕ್ಟರಿ” ಗೆ ಜಯಂತ ಕಾಯ್ಕಿಣಿ ಬರೆದರು “ಜಹಾಪನಾ” ಹಾಡು..

ಸುಮಧುರ ಪ್ರೇಮಗೀತೆಗೆ ಮನಸೋತ್ತ ಅಭಿಮಾನಿಗಳು

ದೀಪಕ್ ಅರಸ್ ನಿರ್ದೇಶನದಲ್ಲಿ ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸಿರುವ “ಶುಗರ್ ಫ್ಯಾಕ್ಟರಿ” ಚಿತ್ರಕ್ಕಾಗಿ ಖ್ಯಾತ ಗೀತರಚನೆಕಾರ ಜಯಂತ ಕಾಯ್ಕಿಣಿ ಅವರು “ಜಹಾಪನಾ” ಎಂಬ ಸುಮಧುರ ಪ್ರೇಮಗೀತೆ ಬರೆದಿದ್ದಾರೆ. ಇತ್ತೀಚೆಗೆ ಈ ಹಾಡು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ.

ನಿಹಾಲ್ ತಾವ್ರೊ ಹಾಗೂ ಅಮೃತಾ ನಾಯಕ್ ಅವರ ಕಂಠಸಿರಿಯಲ್ಲಿ ಈ ಹಾಡು ಮಧುರವಾಗಿ ಮೂಡಿಬಂದಿದೆ. ಧನಂಜಯ್ ಅವರ ನೃತ್ಯ ನಿರ್ದೇಶನದಲ್ಲಿ ಡಾರ್ಲಿಂಗ್ ಕೃಷ್ಣ ಹಾಗೂ ಸೋನಾಲ್ ಮೊಂತೆರೊ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಕಬೀರ್ ರಫಿ ಸಂಗೀತ ನೀಡಿದ್ದಾರೆ.

ಈಗಾಗಲೇ “ಶುಗರ್ ಫ್ಯಾಕ್ಟರಿ” ಟ್ರೇಲರ್ ಎಲ್ಲರ ಮನಗೆದ್ದು, ಆಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ನವೆಂಬರ್ 24 ರಂದು ಬಹು ನಿರೀಕ್ಷಿತ ಈ ಚಿತ್ರ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.

ಡಾರ್ಲಿಂಗ್ ಕೃಷ್ಣ ಅವರ ಸಿನಿಜರ್ನಿಯಲ್ಲೇ “ಶುಗರ್ ಫ್ಯಾಕ್ಟರಿ” ಬಿಗ್ ಬಜೆಟ್ ಚಿತ್ರವೆಂದು ಹೇಳಲಾಗುತ್ತಿದೆ. ಅಭಿಮಾನಿಗಳು ಸಹ ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡು, ಬಿಡುಗಡೆಗೆ ಕಾತುರದಿಂದ ಕಾಯುತ್ತಿದ್ದಾರೆ.

ಆರ್ ಗಿರೀಶ್ ನಿರ್ಮಿಸಿರುವ ಈ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಅವರಿಗೆ ನಾಯಕಿಯರಾಗಿ ಸೋನಾಲ್ ಮಾಂತೆರೊ, ಅದ್ವಿತಿ ಶೆಟ್ಟಿ, ರುಹಾನಿ ಶೆಟ್ಟಿ ಕೃಷ್ಣ ಅವರಿಗೆ ನಾಯಕಿಯರಾಗಿ ನಟಿಸಿದ್ದಾರೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor