ಕಬ್ಜ ಚಿತ್ರದ ಸುದೀಪ್ ರೆಟ್ರೋ ಗೆಟಪ್ ನಲ್ಲಿ ಫಸ್ಟ್ ಲುಕ್ ಅನಾವರಣ
ಪ್ಯಾನ್ ಇಂಡಿಯಾ ಸಿನಿಮಾ “ಕಬ್ಜ” ಚಿತ್ರೀಕರಣದಲ್ಲಿ ಕಿಚ್ಚ ಸುದೀಪ್ ಭಾಗಿಯಾಗಿದ್ದಾರೆ ಹಾಗೆಯೇ ಚಿತ್ರ ತಂಡ ಸುದೀಪ್ ರವರ ಹೊಸ ಗೆಟಪ್ ನ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಗೊಳಿಸಿದೆ.
ಖ್ಯಾತ ನಿರ್ದೇಶಕ ಆರ್ ಚಂದ್ರು ನಿರ್ಮಿಸಿ, ನಿರ್ದೇಶಿಸುತ್ತಿರುವ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಅವರು ನಾಯಕರಾಗಿ ನಟಿಸುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾ “ಕಬ್ಜ” . ಬಿಡುಗಡೆಗೂ ಪೂರ್ವದಲ್ಲೇ ಈ ಚಿತ್ರ ದೇಶಾದ್ಯಂತ ಸುದ್ದಿ ಮಾಡಿದೆ.
ಈ ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ವಿಶೇಷ ಪಾತ್ರದಲ್ಲಿ ಅಭಿನಯಿಸುತ್ತಿರುವುದು ಈಗಾಗಲೇ ಎಲ್ಲರಿಗೂ ತಿಳಿದಿದೆ.
ಮಿನರ್ವ ಮಿಲ್ ನಲ್ಲಿ ಗ್ಯಾಂಗ್ ಸ್ಟರ್ ಗಳ ಮೈ ನವಿರೇಳಿಸುವ ದೃಶ್ಯಗಳು ಚಿತ್ರಿತವಾಗಿವೆ ಹಾಗೂ ಈಗ ಸುದೀಪ್ ಅವರ ಅಭಿನಯದಲ್ಲಿ ದೃಶ್ಯಗಳ ಚಿತ್ರೀಕರಣ ಶುರುವಾಗಿದೆ.
ಆರ್. ಚಂದ್ರು ಏನಾದರು ಹೊಸ ಹೊಸ ಆವಿಷ್ಕಾರದೊಂದಿಗೆ, ಹೊಸ ವಿಷಯಗಳೊಂದಿಗೆ ಸದಾ ಸುದ್ದಿಯಲ್ಲಿರುತ್ತಾರೆ. ಈಗ ಪ್ಯಾನ್ ಇಂಡಿಯ 7 ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಚಿತ್ರ ಕಬ್ಜ ಚಿತ್ರದ ಮೂಲಕ ಪ್ರೇಕ್ಷಕರಿಗೆ ಕುತೂಹಲ ಮೂಡಿಸಿದ್ದಾರೆ.