ಶ್ರೀ ರಂಗ – ವೆಂಕಟ್ ಭರದ್ವಾಜ ರವರಿಂದ ವಿನೂತನ ಕಾಮೆಡಿ ಚಿತ್ರ
ಶ್ರೀ ರಂಗ ಚಿತ್ರದ ಶೀರ್ಷಿಕೆ ಇತ್ತೀಚಿಗೆ ಬಿಡುಗಡೆ ಗೊಂಡಿದೆ , ಭಾರತದ ಉದಯೋನ್ಮುಖ ನಿರ್ಮಾಪಕರಾದ ಶ್ರೇ ಧೀರ rockline ವೆಂಕಟೇಶ್ ರವರು ತಮ್ಮ ಅಮೃತ ಹಸ್ತದಿಂದ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘ ,ಡಾ ಅಂಬರೀಷ್ ಆಡಿಟೊರಿಯಂ ನಲ್ಲಿ ಬಿಡುಗಡೆ ಮಾಡಿದ್ದಾರೆ ಚಿತ್ರ ತಂಡಕ್ಕೆ ಶುಭ ಕೋರಿದ ವೆಂಕಟೇಶ್ ರವರು “ಶ್ರೀ ರಂಗ” ಕಾಮಿಡಿ ಚಿತ್ರ ಆಗಿತ್ತು ಈಗಿನ ಪೋಸ್ಟ್ ಕೋವಿಡ್ ಸಮಯಕ್ಕೆ ಸರಿಯಾದ ಮನರಂಜನಾ ಚಿತ್ರ ಎಂದು ಹೇಳಿದ್ದಾರೆ , ನಿರ್ಮಾಪಕರಾದ ಶ್ರೀಮತಿ ಸುಮಾ ದಿಲೀಪ ಮತ್ತು ದಿಲೀಪ ಈ ಸಂದರ್ಭದಲ್ಲಿ ಹಾಜರಿದ್ದರು , ತಮಿಳು ಚಿತ್ರದ ನಿರ್ಮಾಪಕರಾದ ಶೇಖರ್ ಜಯರಾಮ್ ಕೂಡ ಈ ಸಂದರ್ಭದಲ್ಲಿ ಹಾಜರಿದ್ದರು.
ಶ್ರೀ ರಂಗ ಚಿತ್ರೀಕರಣ ಪೂರ್ಣಗೊಂಡಿದ್ದು ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿದೆ , ಚಿತ್ರವೂ ಸಂಪೂರ್ಣವಾಗಿ ಬೆಂಗಳೂರು ಮತ್ತು ಸುತ್ತಮುತ್ತ ಚಿತ್ರೀಕರಣಗೊಂಡಿದ್ದು ಚಿತ್ರದಲ್ಲಿ ೩ ಕಾಮಿಡಿ ಹಾಡುಗಳು ಇದ್ದು ಅದಕ್ಕೆ ಸಮೀರ್ ಕುಲಕರ್ಣಿ ಯವರ ಸಂಗೀತವಿದೆ , ಮಿಥುನ್ ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ , ಚಂದನ್ ರವರ ಸಂಕಲನ ವಿದೆ , ಕನ್ನಡ rap star ವಿರಾಜ್ ಕನ್ನಡಿಗ ಈ ಚಿತ್ರಕ್ಕೆ ಇಂಟ್ರೊಡಕ್ಷನ್ ಸಾಂಗ್ ಹಾಡು ಬರೆದು ಹಾಡಿದ್ದಾರೆ.
ತಾರಾಗಣದಲ್ಲಿ ಗುರುರಾಜ್ ಹೊಸಕೋಟೆ , ಯಮುನಾ ಶ್ರೀನಿಧಿ , ಶಿನವ , ರಚನಾ ರೈ , ಮಾಸ್ಟರ್ ಚಿರಾಯು ಚಕ್ರವರ್ತಿ ರೂಪ ರಾಯಪ್ಪ (kgf ಖ್ಯಾತಿ ), ವಂದನಾ ಶೆಟ್ಟಿ , ಸಾಗರ್ ಜಯರಾಮ್ , ಸೂಪರ್ ದೇವು , ರಾಮಕೃಷ್ಣ , ಜ್ಯೋತಿ ಮರುರ್, ಶಂಕರ್ ರಾಮನ್ ರವರ ಸಂಭಾಷಣೆ , ಸಂದೀಪ್ ರವರ ಕಲೆ , ಮತ್ತು ಲಾರೆನ್ಸ್ ಪ್ರೀತಮ್ ರವರ ಸಹ ನಿರ್ದೇಶನ ವಿದೇ ಚಿತ್ರವೂ ಆಗಸ್ಟ್ ೨೦೨೧ ತೆರೆಕಾಣಲಿದೆ ಎಂದು ನಿರ್ಮಾಪಕರಾದ ಶ್ರೀಮತಿ ಸುಮಾ ದಿಲೀಪ್ ಹೇಳಿದ್ದಾರೆ . ಕಥೆ ಚಿತ್ರ ಕಥೆ ವೆಂಕಟ್ ಭರದ್ವಾಜ ರವರದಾಗಿದ್ದು ಶ್ರೀ ರಂಗ ಚಿತ್ರದಲ್ಲಿ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ