Sri Raghavendra Chitrvaani 48th anniversary & 28th award event. ಚಿತ್ರರಂಗದ ಗಣ್ಯರ ಉಪಸ್ಥಿತಿಯಲ್ಲಿ ಅದ್ದೂರಿಯಾಗಿ ನಡೆಯಿತು ಶ್ರೀ ರಾಘವೇಂದ್ರ ಚಿತ್ರವಾಣಿ 48 ನೇ ವಾರ್ಷಿಕೋತ್ಸವ ಹಾಗೂ 23 ನೇ ಪ್ರಶಸ್ತಿ ಪ್ರದಾನ .

ಚಿತ್ರರಂಗದ ಗಣ್ಯರ ಉಪಸ್ಥಿತಿಯಲ್ಲಿ ಅದ್ದೂರಿಯಾಗಿ ನಡೆಯಿತು ಶ್ರೀ ರಾಘವೇಂದ್ರ ಚಿತ್ರವಾಣಿ 48 ನೇ ವಾರ್ಷಿಕೋತ್ಸವ ಹಾಗೂ 23 ನೇ ಪ್ರಶಸ್ತಿ ಪ್ರದಾನ .

ಕನ್ನಡ ಚಿತ್ರರಂಗದ ಪ್ರಥಮ ಪ್ರಚಾರಕರ್ತ ದಿವಂಗತ .ಡಿ.ವಿ ಸುಧೀಂದ್ರ ಅವರಿಂದ ಸ್ಥಾಪಿತವಾದ ಶ್ರೀರಾಘವೇಂದ್ರ ಚಿತ್ರವಾಣಿ ಸಂಸ್ಥೆಯ 48 ನೇ ವಾರ್ಷಿಕೋತ್ಸವ ಹಾಗೂ 23 ನೇ ಪ್ರಶಸ್ತಿ ಪ್ರದಾನ ಸಮಾರಂಭ ಇತ್ತೀಚಿಗೆ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಲ್ಲಿ ಅದ್ದೂರಿಯಾಗಿ ನಡೆಯಿತು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎನ್ ಎಂ ಸುರೇಶ್, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಉಮೇಶ್ ಬಣಕಾರ್ ಹಿರಿಯ ನಟ ಶಶಿಕುಮಾರ್, ತಾರಾ ಅನುರಾಧ, ಡಾ. ವಿಜಯಮ್ಮ, ಪೂರ್ಣಿಮ ರಾಮಕುಮಾರ್, ವಿನೋದ್ ಪ್ರಭಾಕರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಈ ಬಾರಿ ಶ್ರೀರಾಘವೇಂದ್ರ ಚಿತ್ರವಾಣಿಯಿಂದ ನೀಡಲಾಗುವ ನಿರ್ಮಾಪಕರ ಪ್ರಶಸ್ತಿಯನ್ನು ಮರಣೋತ್ತರವಾಗಿ ನಿರ್ಮಾಪಕ ರಾಮು ಅವರಿಗೆ ನೀಡಲಾಯಿತು. ರಾಮು ಅವರ ಪತ್ನಿ ಮಾಲಾಶ್ರೀ ಪ್ರಶಸ್ತಿ ಸ್ವೀಕರಿಸಿದರು. ಶ್ರೀರಾಘವೇಂದ್ರ ಚಿತ್ರವಾಣಿಯಿಂದ ಪತ್ರಕರ್ತರಿಗೆ ನೀಡುವ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತರಾದ ಮುರಳೀಧರ ಖಜಾನೆ ಅವರಿಗೆ ನೀಡಲಾಯಿತು.

ರಾಷ್ಟ್ರಪ್ರಶಸ್ತಿಗೆ ಭಾಜನರಾಗಿರುವ ಹಿರಿಯ ಪತ್ರಕರ್ತ ಬಿ.ಎನ್‍. ಸುಬ್ರಹ್ಮಣ್ಯ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ಮೂಲಕ ಅನೇಕ ಗಣ್ಯರು ವಿವಿಧ ಭಾಗಗಳಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ನೀಡುತ್ತಾ ಬಂದಿದ್ದಾರೆ. ಆ ಪೈಕಿ ಈ ಬಾರಿ ಭಾರತಿ ವಿಷ್ಣುವರ್ಧನ್ ಅವರು ನಿರ್ದೇಶಕರಿಗೆ ನೀಡುವ ದಿ.ಆರ್ ಶೇಷಾದ್ರಿ ಸ್ಮರಣಾರ್ಥ ಪ್ರಶಸ್ತಿಯನ್ನು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರಿಗೆ, ಡಾ||ರಾಜಕುಮಾರ್ ಅವರ ಕುಟುಂಬದಿಂದ ಗಾಯಕರಿಗೆ ನೀಡುವ ಪ್ರಶಸ್ತಿಯನ್ನು ನೀಡಲಾಯ್ತು.

ಹಾಗೂ ಹೇಮಂತ್ ಅವರಿಗೆ, ಎಂ.ಎಸ್.ರಾಮಯ್ಯ ಚಿತ್ರಾಲಯದಿಂದ ಪಟ್ಟಾಭಿರಾಮ್ ಅವರು ಸಂಗೀತ ನಿರ್ದೇಶಕರಿಗೆ ನೀಡುವ ಪ್ರಶಸ್ತಿಯನ್ನು “ಹೊಂದಿಸಿ ಬರೆಯಿರಿ” ಚಿತ್ರಕ್ಕಾಗಿ ಜೋಕೋಸ್ಟ ಅವರಿಗೆ, ಹಿರಿತೆರೆ, ಕಿರುತೆರೆ ಹಾಗೂ ರಂಗಭೂಮಿ ಕಲಾವಿದ ಬಿ.ಸುರೇಶ್ ಅವರು ಪ್ರಥಮ ಚಿತ್ರದ ನಿರ್ದೇಶಕರಿಗೆ ನೀಡುವ ಪ್ರಶಸ್ತಿಯನ್ನು “ಆಚಾರ್ & ಕೋ” ಚಿತ್ರದ ನಿರ್ದೇಶನಕ್ಕಾಗಿ ಸಿಂಧೂ ಶ್ರೀನಿವಾಸಮೂರ್ತಿ ಅವರಿಗೆ, ಖ್ಯಾತ ನಿರ್ಮಾಪಕ ಹಾಗೂ ನಿರ್ದೇಶಕ ದಿ.ಕೆ.ವಿ.ಜಯರಾಂ ಸ್ಮರಣಾರ್ಥ ಅವರ ಪತ್ನಿ ನರ್ಮಾಪಕಿ ಮೀನಾಕ್ಷಿ ಜಯರಾಂ ಅವರು ಉತ್ತಮ ಕಥಾಲೇಖಕರಿಗೆ ನೀಡುವ ಪ್ರಶಸ್ತಿಯನ್ನು “ಸಪ್ತಸಾಗರದಾಚೆ ಎಲ್ಲೋ” ಚಿತ್ರಕ್ಕಾಗಿ ಹೇಮಂತ್ ರಾವ್ ಅವರಿಗೆ ನೀಡಿ ಗೌರವಿಸಲಾಯ್ತು.

ಹಿರಿಯ ಚಿತ್ರಸಾಹಿತಿ ಹಾಗೂ ನಿರ್ದೇಶಕ ದಿ.ಹುಣಸೂರು ಕೃಷ್ಣಮೂರ್ತಿ ಅವರ ಸ್ಮರಣಾರ್ಥ ಅವರ ಮಗ ಎಸ್.ಕೆ ನರಹರಿ ಅವರು ಉತ್ತಮ ಸಂಭಾಷಣೆಗಾಗಿ ನೀಡುವ ಪ್ರಶಸ್ತಿಯನ್ನು “ವಿರಾಟಪುರದ ವಿರಾಗಿ” ಚಿತ್ರಕ್ಕಾಗಿ ಲಿಂಗದೇವರು ಹಾಗೂ ಶರಣು ಹುಲ್ಲೂರು ಅವರಿಗೆ ಹಾಗೂ ಪತ್ರಕರ್ತ ದಿ.ಸಿ.ಸೀತಾರಾಮ್ ಸ್ಮರಣಾರ್ಥ ಪೋಷಕನಟರಿಗೆ ನೀಡುವ ಪ್ರಶಸ್ತಿಯನ್ನು ಹಿರಿಯ ನಟ ಸುಂದರರಾಜ್ ಅವರಿಗೆ ನೀಡಿದರು.

ನಟಿ ಡಾ||ಜಯಮಾಲ ಹೆಚ್ ಎಂ ರಾಮಚಂದ್ರ ಅವರು ಪೋಷಕನಟಿ ಅವರಿಗೆ ನೀಡುವ ಪ್ರಶಸ್ತಿಯನ್ನು ಹಿರಿಯ ನಟಿ ದುಬೈ ಜಯಲಕ್ಷ್ಮಿ ಅವರಿಗೆ ಹಾಗೂ ಪತ್ರಕರ್ತ ವಿನಾಯಕರಾಮ್ ಅವರು ಹಿರಿಯ ಪತ್ರಕರ್ತ. ದಿ.ಪಿ.ಜಿ.ಶ್ರೀನಿವಾಸಮೂರ್ತಿ ಅವರ ಸ್ಮರಣಾರ್ಥ ಗೀತರಚನೆಕಾರಿಗೆ ನೀಡುವ ಪ್ರಶಸ್ತಿಯನ್ನು ನಟ ಡಾಲಿ ಧನಂಜಯ ಅವರಿಗೆ “ಟಗರು ಪಲ್ಯ” ಚಿತ್ರದ “ಸಂಬಂಜ ಅನ್ನೊದು ದೊಡ್ದು ಕನಾ” ಗೀತರಚನೆಗಾಗಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮಕ್ಕೂ ಮುನ್ನ ಗಾಯಕಿ ಜ್ಯೋತಿ ರವಿಪ್ರಕಾಶ್ ಅವರಿಂದ ಹಳೆಯ ಚಿತ್ರಗಳ ಗಾಯನ ಕಾರ್ಯಕ್ರಮವಿತ್ತು. ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ಸುಧೀಂದ್ರ ವೆಂಕಟೇಶ್ ಸ್ವಾಗತ ಭಾಷಣ ಮೂಲಕ ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿದರು.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor