Sri Raghavendra Chitravani 48th Anniversary & 23rd. Award Event on 27th. January. ಜನವರಿ 27ರಂದು ಕನ್ನಡ ಚಿತ್ರರಂಗದ ಅಂಗಳದಲ್ಲೊಂದು ಶ್ರೀ ರಾಘವೇಂದ್ರ ಚಿತ್ರವಾಣಿಯ ಪ್ರಶಸ್ತಿಗಳ ಸಂಭ್ರಮ ಮೂಡಿ ಬರಲಿದೆ.
ಜನವರಿ 27ರಂದು ಕನ್ನಡ ಚಿತ್ರರಂಗದ ಅಂಗಳದಲ್ಲೊಂದು ಶ್ರೀ ರಾಘವೇಂದ್ರ ಚಿತ್ರವಾಣಿಯ ಪ್ರಶಸ್ತಿಗಳ ಸಂಭ್ರಮ ಮೂಡಿ ಬರಲಿದೆ. ಶ್ರೀ ರಾಘವೇಂದ್ರ ಚಿತ್ರವಾಣಿ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಒಂದು ಮೈಲಿಗಲ್ಕು ಎಂದರೆ ತಪ್ಪಾಗಲಾರದು.
ಕನ್ನಡ ಸಿನಿಮಾಗಳನ್ನು ಪ್ರಚಾರ ಮಾಡುವ ಮೂಲಕ 48 ವರ್ಷಗಳ ಸುಧೀರ್ಘ ಸೇವೆಯನ್ನು ಸಲ್ಲಿಸಿದ ಹೆಗ್ಗಳಿಕೆ ಈ ಸಂಸ್ಥೆಗೆ ಸಲ್ಲುತ್ತದೆ. ಪ್ರೇಕ್ಷಕರಿಗೆ ಸಿನಿಮಾಗಳ ಸುದ್ದಿಗಳನ್ನು ಸಮೂಹ ಮಾಧ್ಯಮಗಳ ಮುಖಾಂತರ ಮುಟ್ಟಿಸುವ ಮಹತ್ತರವಾದ ಕಾರ್ಯಗಳಲ್ಲಿ ಶ್ರೀ ರಾಘವೇಂದ್ರ ಚಿತ್ರವಾಣಿ ಅಗ್ರಸ್ಥಾನವನ್ನು ಅಲಂಕರಿಸಿದೆ.

ಡಿ.ವಿ. ಸುಧೀಂದ್ರ ಹುಟ್ಟುಹಾಕಿದ ಸಿನಿಮಾ ಪ್ರಚಾರದ ( PRO) ಹುದ್ದೆ ಇಂದು ಹಲವಾರು ಜನರಿಗೆ ಬದುಕನ್ನು ಕಟ್ಟಿಕೊಟ್ಟಿದೆ. ಈ ಹುದ್ದೆಯ ಸಲುವಾಗಿ ಹುಟ್ಟಿಕೊಂಡ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಗೆ ಈಗ ಬರೋಬ್ಬರಿ 48 ವರ್ಷಗಳ ಸಂಭ್ರಮ. ಈ ಸಂಸ್ಥೆಯ ಮೂಲಕ ಸಿನಿಮಾ ಹಾಗೂ ಪತ್ರಕರ್ತರನ್ನು ಗೌರವಿಸುವ ಹಾಗೂ ಕಾರ್ಯಪರತೆಗೆ ಉತ್ತೇಜಿಸುವ ಸಲುವಾಗಿ ಹುಟ್ಟಿಕೊಂಡಿದ್ದೇ ಶ್ರೀ ರಾಘವೇಂದ್ರ ಚಿತ್ರವಾಣಿಯ ಪ್ರಶಸ್ತಿ ಪ್ರದಾನ.

ಈ ಪ್ರಶಸ್ತಿಗೆ 23ನೇ ಸಂಭ್ರಮ. ಕನ್ನಡ ಚಿತ್ರರಂಗದಲ್ಲಿ ಯಾವುದೇ ಅಪೇಕ್ಷೆ ಇಲ್ಲದೇ, ಯಾವುದೇ ದೇಣಿಗೆಗಾಗಿ (ಹಣಕ್ಕಾಗಿ) ಯಾರ ಬಳಿಯೂ ಕೈ ಚಾಚದೆ, ಯಾವುದೇ ವಿವಾದಗಳಿಗೆ ಸಿಲುಕದೇ ನಿರಂತರವಾಗಿ ಪ್ರಶಸ್ತಿ ನೀಡುತ್ತಾಬಂದಿದೆ.

ಇವತ್ತು ಪ್ರಶಸ್ತಿಗಳನ್ನು ಹಣ ನೀಡಿದರೆ ಯಾರು ಬೇಕಾದರು ಪಡೆಯ ಬಹುದು, ನಿರ್ಮಾಪಕರಿಂದ ಹಣ ಪಡೆದು ಅವರ ಚಿತ್ರಗಳಿಗೆ ಪ್ರಶಸ್ತಿ ನೀಡಿ, ತಿಂದು ತೇಗಿ ಬೆರಳು ಚೀಪಿ ತೇಗುವ ನಯ ವಂಚಕರು ಸಾಕಷ್ಟಿದ್ದಾರೆ. ಆದರೆ ಪ್ರಾಮಾಣಿಕವಾಗಿ ಯಾರ ಹಂಗಿಲ್ಲದೆ ನಡೆಯುತ್ತಿರುವ ಪ್ರಾಮಾಣಿಕ ಸೇವೆಗೆ ಹಾಗೂ ಕಾರ್ಯಕ್ಕೆ ಎಲ್ಲರೂ ಬೆನ್ತಟ್ಟಬೇಕು. ಡಿ.ವಿ. ಸುಧೀಂದ್ರ ರವರ ಹೆಸರಿಗೆ ಹಾಗೂ ಸಂಸ್ಥೆಗೆ ಚುತಿ ಬಾರದಂತೆ ನಡೆಸಿಕೊಂಡು ಬರುತ್ತಿರುವ ವ್ಯಕ್ತಿ. ಸುಧೀಂದ್ರ ವೆಂಕಟೇಶ್ ಹಾಗೂ ಸಹೋದರರಾದ ಸುನೀಲ್ ಮತ್ತು ವಾಸು ಈ ಮೂವರು ಸೇರಿ ಈ ಸಂಸ್ಥೆಯನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಬರುತ್ತಿದ್ದಾರೆ

ಜನವರಿ 27ರ ಶುಭ ಸಂಜೆಯಲ್ಲಿ ಹಲವಾರು ಗಣ್ಯರ ಸಮ್ಮುಖದಲ್ಲಿ ಪತ್ರಕರ್ತರು ಹಾಗೂ ಪ್ರಚಾರಕರ್ತರು ಒಟ್ಟಿಗೆ ಸೇರಿ ವಿಮರ್ಶೆ ಮಾಡಿ ನೀಡುವ ಏಕೈಕ ಪ್ರಶಸ್ತಿ ಸಮಾರಂಭಕ್ಕೆ ಶುಭ ಕೋರೋಣ.