Siran movie Review ಹೊಸಬರ ಪ್ರಯತ್ನಕ್ಕೆ ಸೈರನ್ ಸವಾಲ್
ಕ್ರೈಂ, ಸಸ್ಪೆನ್ಸ್, ಆಕ್ಷನ್ ಗೆ ಸೈರನ್ ಸದ್ದು
Rating 3/5
ಅದೊಂದು ಮದುವೆ, ತರಾತುರಿಯಲ್ಲಿ ಮುಗಿದು ಹೋಗುತ್ತೇ ಅಷ್ಟೇ ತರಾತುರಿಯಲ್ಲಿ ಅವಗಡಗಳು ನಡೆದು ಹೋಗುತ್ತೆ.
ಮತ್ತೊಂದು ಮದುವೆಗೆ ತಯಾರಿ ನಡೆಯುತ್ತಿರುತ್ತದೆ
ಆದರೆ ಮದುವೆಗೆ ಮುಂಚೆಯೇ ಆ ಸಂಬಂಧ ಮುರಿದು ಬಿದ್ದಿರುತ್ತದೆ.
ಮದುವೆ ಆಗ ಬೇಕಿದ್ದ ಗಂಡು ಮತ್ತು ಹೆಣ್ಣು ಬೇರೆ ಬೇರೆ ಕಡೆಯಲ್ಲಿ ಕೊಲೆಯಾಗಿದ್ದರು ಕೊಲೆ ಮಾಡಿದವರು ಮಾತ್ರ ಒಂದೇ ತಂಡ, ಕೊಲೆಯಾದದ್ದು ಒಂದೇ ವಿಷಯಕ್ಕೆ.
ಈ ಕೇಸ್ ಗೆ ಎಂಟ್ರಿ ಆಗುತ್ತಿದ್ದಂತೆ ಪೋಲೀಸ್ ಅಧಿಕಾರಿಯ ಹೆಣವೂ ಬೀಳುತ್ತದೆ
ಹಾಗಿದ್ದರೆ ಕೊಲೆಯಾದವರು ಯಾರು, ಕೊಲೆ ಮಾಡಿದವರು ಯಾರು ಎರಡು ಮದುವೆಗಳ ನಡೆದ ಅವಗಡಗಳು ಏನು, ಯಾರಿಗಾಗಿ ಕೊಲೆಗಳಾದವು, ಕೊಲೆ ಮಾಡುವ ವಿಷಯ ಅದೇನು ಎನ್ನುವುದೇ ಚಿತ್ರದ ಹೈಲೈಟ್, ಸಸ್ಪೆನ್ಸ್.
ಹೌದು ಇದು ಕೊಲೆಗಳ ಸುತ್ತ ತಿರುಗುವ ಪೋಲೀಸ್ ಸೈರನ್ ಕಥೆ.
ಇಲ್ಲಿ ಆಕ್ಷನ್, ಥ್ರಿಲ್ಲರ್, ಇನ್ವೆಸ್ಟಿಗೇಷನ್ ಗಳ ಟ್ವಿಷ್ಟ್ ಗಳು ಚಿತ್ರವನ್ನು ನೋಡಿಸಿಕೊಂಡು ಹೋಗುತ್ತೆ.
ಆಗಷ್ಟೇ ಹೊಸದಾಗಿ ಪೋಲಿಸ್ ಅಧಿಕಾರಿಯಾಗಿ ಕೆಲಸಕ್ಕೆ ಸೇರಿದ ನಾಯಕ ಸಿನಿಮಾಗೂ , ಖಾಕಿಗೂ ಹೊಸಬ ಎನ್ನಬಹುದು.
ಪ್ರವೀರ್ ಶೆಟ್ಟಿ ಮೊದಲ ಬಾರಿಗೆ ಸಿನಿಮಾದಲ್ಲಿ ನಾಯಕನಾಗಿ ಅಭಿನಯಿಸಿದ್ದರೂ ಬಹಳ ಶ್ರಮ ವಹಿಸಿ ನಿಷ್ಟೆಯಿಂದ ಪಾತ್ರ ನಿರ್ವಹಿಸಿದ್ದಾರೆ.
ನಿರ್ದೇಶಕ ರಾಜವೆಂಕಯ್ಯ ಮೊದಲ ಬಾರಿಗೆ ಕನ್ನಡದಲ್ಲಿ ನಿರ್ದೇಶನ ಮಾಡಿದ್ದಾರೆ.
ಈ ಚಿತ್ರ ಒಂದಷ್ಟು ಸತ್ಯ ಘಟನೆ ಆದರಿಸಿ ಕಥೆ ಎಣೆದಿದ್ದಾರೆ. ನಿರ್ದೇಶಕರು ನಿರ್ದೇಶನದಲ್ಲಿ ಇನ್ನೂ ಪರಿಪಕ್ವವಾಗಬೇಕು ಎನ್ನುವುದನ್ನು ಸೈರನ್ ಸದ್ದು ಹೇಳುತ್ತದೆ.
ಮೊದಲ ಬಾರಿಗೆ ಕನ್ನಡಕ್ಕೆ ಎಂಟ್ರಿ ಕೊಟ್ಟಿರುವ ಮಲಯಾಳಂ ನಟಿ ಲಾಸ್ಯ ಪೊಣ್ಣು ಆಸ್
ನಾಯಕನಿಗೆ ಪೋಲೀಸ್ ಸಹ ಅಧಿಕಾರಿಯಾಗಿ ಸಾಥ್ ನೀಡಿದ್ದಾರೆ.
ಇಲ್ಲಿ ಮರ ಸುತ್ತುವ, ಗ್ಲಾಮರ್, ಲವ್ ಇಂತಹದ್ದಕ್ಕೆಲ್ಲ ಕಥೆಯಲ್ಲಿ ಸ್ಥಳವಿಲ್ಲ ಇದೇನಿದ್ದರು ಪಕ್ಕಾ ಆಕ್ಷನ್ ಕಮರ್ಷಿಯಲ್ ಚಿತ್ರ.
ಸಿನಿಮಾ ನಿರ್ಮಾಣದಲ್ಲಿ ನಿರ್ಮಾಪಕರು ಮಿತಿ ಇಲ್ಲದೇ ಎಥೇಚ್ಚವಾಗಿ ಹಣ ಸುರಿದಿದ್ದಾರೆ ಅಷ್ಟೇ ಅಲ್ಲದೇ ಬೇರೆ ಭಾಷೆಯವರಾಗಿದ್ದರು ಮೊದಲ ಬಾರಿಗೆ ಕನ್ನಡ ಸಿನಿಮಾ ನಿರ್ಮಿಸಿರುವ ಹೆಗ್ಗಳಿಕೆ ಇವರದ್ದು
ಚಿತ್ರದಲ್ಲಿ ಅವಿನಾಶ್, ಅಚ್ಯುತ್, ಸ್ಪರ್ಶ ರೇಖಾ, ಪವಿತ್ರ ಲೋಕೇಶ್ ಹಾಗೂ ಶರತ್ ಲೋಹಿತಾಶ್ವ ಮುಂತಾದವರು ಅಭಿನಯಿಸಿದ್ದಾರೆ.
ಸ್ಪರ್ಶ ರೇಖಾ ಈ ವರೆಗೂ ಮಾಡಿರದಂತ ಪಾತ್ರವನ್ನು ನಿಭಾಯಿಸಿದ್ದಾರೆ. ಹಾಗೆ ಅಚ್ಯುತ್ ಕೂಡ ತಮ್ಮ ಇಮೇಜ್ ನಿಂದ ಹೊರ ಬಂದು ಚಿತ್ರದಲ್ಲಿ ಅಭಿನಯಿಸಿದ್ದಾರೆ ಎನ್ನಬಹುದು.
ಕನ್ನಡ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿಯವರ ಮಗ ಪ್ರವೀರ್ ಶೆಟ್ಟಿ ಮೊದಲ ಬಾರಿ ಪ್ರಾಮಾಣಿಕವಾಗಿ ತಮ್ಮ ಪಾತ್ರಕ್ಕೆ ಜೀವ ತುಂಬುವ ಪ್ರಯತ್ನ ಮಾಡಿದ್ದಾರೆ.
ಒಟ್ಟಿನಲ್ಲಿ ಆಕ್ಷನ್ ಪ್ರಿಯರು ಚಿತ್ರವನ್ನು ಕೂತು ನೋಡಬಹುದು