“Sidlingu 2” movie review. ಸಿದ್ಲಿಂಗು2 ಚಿತ್ರ ವಿಮರ್ಶೆ. “ರಮ್ಯಾ ನೆರಳಿನಲ್ಲಿ ಸಿದ್ಲಿಂಗು ಕಾರುಬಾರು”
ಚಿತ್ರ ವಿಮರ್ಶೆ – ಸಿದ್ಲಿಂಗು 2
Rating – 3/5.
ಚಿತ್ರ: ಸಿದ್ಲಿಂಗು2
ನಿರ್ಮಾಣ: ಶ್ರೀ ಹರಿ, ರಾಜು ಶ್ರೀಗರ್
ನಿರ್ದೇಶನ: ವಿಜಯಪ್ರಸಾದ್
ಸಂಗೀತ : ಅನೂಪ್ ಸೀಳಿನ್
ಛಾಯಾಗ್ರಹಣ : ಪ್ರಸನ್ನ ಗುರಲಕೆರೆ
ಸಂಕಲನ : ಅಕ್ಷಯ್ ಪಿ. ರಾವ್
ತಾರಾಗಣ : ಯೋಗಿ ಲೂಸ್ ಮಾಧ, ರಮ್ಯ, ಸೋನುಗೌಡ, ಸುಮನ್ ರಂಗನಾಥ್, ಪದ್ಮಜಾ ರಾವ್, ಮಂಜುನಾಥ್ ಹೆಗಡೆ, ಸೀತಾ ಕೋಟೆ, ಮಂಜುನಾಥ್ ರಾಧಾಕೃಷ್ಣ, ಬಿ. ಸುರೇಶ್, ವಿಜಯ್ ಪ್ರಸಾದ್, ಮುಂತಾದವರು
ಸ್ವಾಮಿ ಪಾದಂ ಅಯ್ಯಪ್ಪ ಪಾದಂ
ರಮ್ಯಾ ನೆರಳಿನಲ್ಲಿ ಸಿದ್ಲಿಂಗು ಕಾರುಬಾರು

ಮೊದಲ ಬಾರಿಗೆ ಸಿದ್ಲಿಂಗು ಬಿಡುಗಡೆಯಾಗಿದ್ದು 2012 ಜನವರಿ 13ರಂದು. ತೆರೆ ಕಂಡಿತ್ತು. ಇದೇ ವಿಜಯ್ ಪ್ರಸಾದ್ ನಿರ್ದೇಶನದಲ್ಲಿ ಲೂಸ್ ಮಾದ ಯೋಗಿ, ಮೋಹಕತಾರೆ ರಮ್ಯ , ಮತ್ತು ಸುಮನ್ ರಂಗನಾಥ್ ಮುಖ್ಯ ಭೂಮಿಕೆಯಲ್ಲಿ ಹೊರ ಬಂದ ಚಿತ್ರ ಅಂದು ಲೂಸ್ ಮಾದಯೋಗಿಗೆ ಒಂದು ಹೊಸ ಸಂಚಲನ ಮೂಡಿಸಿತ್ತು. ನಮ್ಮತ್ರನೂ ಕಡ್ಲೆ – ಬೀಜ ಇದೆ ಅನ್ನುವ ಡೈಲಾಗ್ ಮೂಲಕ ರಮ್ಯ ಟ್ರೆಂಡ್ ಆಗಿದ್ರು. ಆದರೆ ಅಂದು ಇಂದಿನ ತರ ಸೋಷಿಯಲ್ ಮೀಡಿಯಾಗಳು ಇರಲಿಲ್ಲ. ಇದ್ದಿದ್ದರೆ ರಮ್ಯ ವೈರಲ್ ಆಗ್ತಿದ್ರು.

ಈಗ 13 ವರ್ಷ, 32 ದಿನಗಳ ನಂತರ ಮತ್ತೆ ಸಿದ್ಲಿಂಗುವಿನ ಎರಡನೇ ಅವತರಣಿಕೆ ತೆರೆ ಕಂಡಿದೆ.
ಇಲ್ಲಿ ಸಿದ್ಲಿಂಗು ಮೆಚ್ಯೂರ್ ಆಗಿದ್ದಾನೆ. ಅವನ ಭಾವನೆಗಳು , ಚಿಂತನೆಗಳು, ಪ್ರಭುದ್ಧವಾಗಿವೆ. ಅವನ ಕುತ್ತಿಗೆಗೆ ಬ್ಯಾಂಡ್ ಬಂದಿದೆ. ಆದರೆ ಚಿತ್ರದ ಪ್ರಾರಂಭದಲ್ಲಿ ಮೊದಲ ಭಾಗದ ಕೊನೆಯ ದೃಶ್ಯಗಳಿಂದ ಕಥೆ ಮುಂದುವರಿಯುತ್ತದೆ. ಸ್ಕೂಲ್ ಟೀಚರ್ ಆಗಿದ್ದ ರಮ್ಯಾ ಸಾವಿನಿಂದ ಚಿತ್ರ ಕೊನೆಯಾಗಿದ್ದು, ಅದೇ ಸಾವಿನ ಕೊನೆಯ ದೃಶ್ಯ, ಸಿದ್ಲಿಂಗು2 ರ ಪ್ರಾರಂಭಕ್ಕೆ ಬುನಾದಿಯಾಗಿದೆ. ಹಾಗೆಯೇ ಮತ್ತೊಬ್ಬ ನಟಿ ಸುಮನ್ ರಂಗನಾಥ್ ಕೂಡ ಚಿತ್ರದ ಪಯಣದ ನೆನಪುಗಳಿಗೆ ತೆರೆಯ ಮೇಲೆ ಕಾಣಿಸಿಕೊಂಡಿರುವ ಮೂಲಕ ಸಾಥ್ ನೀಡಿದ್ದಾರೆ.

ನಿರ್ದೇಶಕ ವಿಜಯ್ ಪ್ರಸಾದ್ ಮಾಮೂಲಿಯ ಅಪ್ಪಾಪೋಲಿ ಚೇಷ್ಟೆ ಮಾತುಗಳಿಗೆ ಬೀಗ ಹಾಕಿದ್ದಾರೆ. ಅದರ ಬದಲಾಗಿ ಚಿತ್ರದಲ್ಲಿ ಡೈಲಾಗ್ ಮೂಲಕ ಸಿಕ್ಕ ಸಿಕ್ಕವರ ಕಾಲೆಳೆದು ಪ್ರೇಕ್ಷಕರನ್ನು ನಗಿಸುವ ಪ್ರಯತ್ನ ಮಾಡಿದ್ದಾರೆ. ಸೋಷಿಯಲ್ ಮೀಡಿಯಾಗಳ್ಲಿ ವೈರಲ್ ಆದ ವಿಷಯ, ಘಟನೆಗಳಿಗೆ ಮರು ಜೀವ ನೀಡಿ ನಗೆಯ ಬುಗ್ಗೆಗೆ ಕಾರಣವಾಗಿದ್ದಾರೆ. ಅವರ ಹಿಂದಿನ ಸಿನಿಮಾಗಳಿಗೆ ಹೋಲಿಸಿಕೊಂಡರೆ ಮಾನವಂತರು ನಿರಾತಂಕವಾಗಿ ಚಿತ್ರ ನೋಡಬಹುದು.
ಲೂಸ್ ಮಾದ ಯೋಗಿ ಸಹಜ ಅಭಿನಯದೊಂದಿಗೆ ಪ್ರೇಕ್ಷಕರಿಗೆ ಇಷ್ಟವಾಗುತ್ತಾರೆ.
ಹಾಗೂ ಯೋಗಿ ಅಭಿನಯದಲ್ಲಿ ಪ್ರಭುದ್ದತೆಯನ್ನು ಕಾಯ್ದಿರಿಸಿಕೊಂಡಿದ್ದಾರೆ. ಮೊದಲ ಭಾಗದ ಪಯಣವನ್ನು ಎರಡನೇ ಭಾಗದಲ್ಲಿ ವಿಭಿನ್ನ ಮ್ಯಾನರಿಸಂ ಜೊತೆಗೆ ವಿಭಿನ್ನ ಗೆಟಪ್ ನಲ್ಲಿ ತೆರೆಯಲ್ಲಿ ಮಿಂಚಿದ್ದಾರೆ.

ಸವೆದು ಹೋದ ದಾರಿಯ ನೆನಪುಗಳ ಜೊತೆಗೆ ಹೊಸದಾಗಿ ಬೆಸೆದುಕೊಳ್ಳುವ ಪಾತ್ರ. ಸ್ಮಶಾನದಲ್ಲಿ ಗುಂಡಿ ಅಗೆಯುವ ಪದ್ಮಜಾರಾವ್. ಇವರ ಅಭಿನಯ ಚಿತ್ರದ ಎಲ್ಲಾ ಪಾತ್ರಗಳಿಗಿಂತ ಚನ್ನಾಗಿದೆ. ಸತ್ತವರಿಗಾಗಿ ಗುಂಡಿ ಅಗೆಯುತ್ತಾ, ಬಿಡುವು ಸಿಕ್ಕಾಗ ತನಗಾಗಿ ಗುಂಡಿ ತೋಡಿ ಕೊಳ್ಳುವ ಅವರ ಅಭಿನಯ ಮತ್ತು ಪಾತ್ರ ಸಮಾಜಕ್ಕೆ ಒಂದು ಮಾದರಿಯ ಸಂದೇಶ.
ನಿರ್ದೇಶಕರು ಮೊದಲೇ ಹೇಳಿದಂತೆ ಡೈಲಾಗ್ ಮೂಲಕವೇ ಚಿತ್ರವನ್ನು ಕಟ್ಟಿ ಕೊಡುವ ಪ್ರಯತ್ನ ಮಾಡಿದ್ದಾರೆ. ಜೊತೆಗೆ ಚಿತ್ರದಲ್ಲಿ ಪವಾಡ ಪುರುಷನಂತೆ, ಅಯ್ಯಪ್ಪ ಸ್ವಾಮಿ ಮಾಲೆ ಹಾಕಿರುವ ಭಕ್ತನ ಗೆಟಪ್ಪನಲ್ಲಿ ಬಂದು ಮುಂದೇನಾಗುತ್ತದೆ ಎನ್ನುವುದನ್ನು ಪ್ರತಿಬಾರಿ ನಾಯಕನಿಗೆ ಹೇಳುತ್ತಲೇ ಪ್ರತೀ ದೃಶ್ಯದಲ್ಲೂ ಕುತೂಹಲ ಮೂಡಿಸಿದ್ದಾರೆ. ನೀವ್ಯಾರು ಸ್ವಾಮಿ ಎನ್ನುವ ನಾಯಕನ ಪ್ರಶ್ನೆಗೆ ಮಕರಜ್ಯೋತಿಯ ದಿನ ಹೇಳುತ್ತೇನೆ ಅನ್ನುತ್ತಲೆ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಅಚ್ಚರಿಯನ್ನು ಕಾಯ್ದಿರಿಸಿಕೊಂಡಿದ್ದಾರೆ.

ಚಿತ್ರದ ಕಥೆ ಸಾಗುವುದೇ ಕಾರಿನ ಸುತ್ತಾ. ಭಾಗ1 ರಲ್ಲಿ ಹಳೇಯ ಕಾಲದ ಕಾರನ್ನು ತನ್ನದಾಗಿಸಿ ಕೊಳ್ಳಬೇಕೆನ್ನುವ ನಾಯಕನ ಕನಸ್ಸು ಭಾಗ2 ರಲ್ಲೂ ಮುಂದುವರೆದಿದೆ. ಇದೆಲ್ಲದಕ್ಕೂ ಚಿತ್ರದ ಕ್ಲೈಮ್ಯಾಕ್ಸ್ ಉತ್ತರವಾಗಿದೆ.

ಸೋನುಗೌಡ ಸಿದ್ಲಿಂಗು ಕನಸ್ಸಿನ ಕನ್ಯೆ ರಮ್ಯಾ ಜಾಗವನ್ನು ಅದೇ ಸ್ಕೂಲ್ ಟೀಚರ್ ಪಾತ್ರದಲ್ಲಿ ಅರಳಿದ್ದಾರೆ,
ಮಂಜುನಾಥ್ ಹೆಗಡೆ LLB ಓದಿದ್ದರು ಬೇಜಬ್ದಾರಿಯಿಂದ, ಸ್ಮಶಾನದಲ್ಲಿ ಸದಾ ಕುಡಿದು ಬಿದ್ದಿರುವ ನಾಲಾಯಾಕ್ ಗಂಡನಾಗಿ ಚನ್ನಾಗಿ ಅಭಿನಯಿಸಿದ್ದಾರೆ. ಹಾಗೆಯೇ ಮತ್ತೊಬ ನಟ ಮಂಜುನಾಥ್ ರಾಧಕೃಷ್ಣ ವಿಲಕ್ಷಣವಾಗಿ ತಾಯಿ ಸಂಪಾದನೆಯಲ್ಲಿ ಬದುಕುವ, ಸದಾ ಸುಳ್ಳು ಹೇಳುತ್ತಾ ಅಲ್ಲಲ್ಲಿ ಮಾರ್ವಿಕವಾಗಿ ಡೈಲಾಗ್ ಮೂಲಕ ಕುಟುಕುತ್ತಾರೆ, ಹಾಗೂ ಪ್ರೇಕ್ಷಕರಿಗೆ ಹತ್ತಿರವಾಗುತ್ತಾರೆ.

ಚಿತ್ರದಲ್ಲಿ ಕಥೆಗಿಂತ ಸಂಭಾಷಣೆ ಸದ್ದು ಮಾಡಿದೆ, ಚಿತ್ರದಲ್ಲಿ ಅನೂಪ್ ಸೀಳಿನ್ ಸಂಗೀತದಲ್ಲಿ ಹಾಡುಗಳು ಚನ್ನಾಗಿದ್ದೆ ಆದರೆ ಹಾಡುಗಾರನಾಗು ಅನೂಪ್ ಸೀಳಿನ್ ಕಿರಿಕಿರಿ ಹುಟ್ಟಿಸುತ್ತಾರೆ. ಬೇರೆಯವಿಂದ ಹಾಡಿಸಬಹುದಿತ್ತು. ಆದರೆ ಯಾಕೋ ಹಠಕ್ಕೆ ಬಿದ್ದು ಹಾಡಿದ್ದಾರೆ ಅನಿಸುತ್ತದೆ. ಪ್ರಸನ್ನ ಗುರುಲಕೆರೆ ತಮ್ಮ ಹೆಸರಿನಷ್ಟೇ ವಿಸ್ತಾರವಾಗಿ ಕ್ಯಾಮರಾ ಕೆಲಸ ಮಾಡಿದ್ದಾರೆ.
ಸ್ಮಶಾನ, ಮಾರುಕಟ್ಟೆ, ದೇವಸ್ಥಾನ, ಸ್ಕೂಲು, ಕೋರ್ಟ್ ಇಂತಹ ಕೆಲವೇ ಜಾಗಗಳಲ್ಲಿ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ.

ಬಿ. ಸುರೇಶ್ ನಾಯಕಿ ನಟಿ ಸೋನುಗೌಡ ರವರ ದುರಾಂಹಕಾರಿ ತಂದೆಯಾಗಿ ಅಭಿನಯಿಸಿದ್ದಾರೆ.
ಶ್ರೀಹರಿ ರಾಜುರವರು ಚಿತ್ರದ ನಿರ್ಮಾಪಕರಾಗಿ ಸಿದ್ಲಿಂಗುವಿನ ಮೆರವಣಿಗೆಗೆ ಹಣ ಸುರಿದು ಸಾರ್ಥಕರಾಗಿದ್ದಾರೆ.
ಚಿತ್ರದ ಕಥೆಯ ತಾತ್ಪರ್ಯ ಹೆಣ್ಣಿಗೆ ಗೌರವ ಕೊಡಬೇಕು ಎನ್ನುವುದು. ಅದೇ ಧಾವಂತದಲ್ಲಿ ನಿರ್ದೇಶಕರು ತಂದೆಯರನ್ನು ಮಗಳ ಕಾಲಿಗೆ ಬೀಳಿಸಿದ್ದಾರೆ. ಎಲ್ಲಾ ಸ್ವಾಮಿ ಪಾದಂ ದೇವಂ ಪಾದಮ್.
ಒಟ್ಟಿನಲ್ಲಿ ಸಿದ್ಲಿಂಗು ಎರಡನೇ ಭಾಗ ಚನ್ನಾಗಿ ಮೂಡಿಬಂದಿದೆ. ಪ್ರೇಕ್ಷಕರು ಕಸಿವಿಸಿ ಇಲ್ಲದೇ ನೋಡಬಹುದು.