Shivraj K.R. Pete acted new movie pooja started in Bande Mahakali Temple. ಬಂಡೆ ಮಹಾಕಾಳಿ ಸನ್ನಿಧಿಯಲ್ಲಿ ನಟ ಶಿವರಾಜ್ ಕೆ ಆರ್ ಪೇಟೆ ನಟಿಸಲಿರುವ ಹೊಸ ಚಿತ್ರಕ್ಕೆ ಮುಹೂರ್ತ

ನಟ ಶಿವರಾಜ್ ಕೆ ಆರ್ ಪೇಟೆ ನಟಿಸಲಿರುವ ಹೊಸ ಚಿತ್ರಕ್ಕೆ ಇಂದು ಸರಳವಾಗಿ ಮುಹೂರ್ತ ನೆರವೇರಿದೆ. ಶ್ರೀ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಚಿತ್ರ ತಂಡ ಸರಳವಾಗಿ ಪೂಜೆ ಸಲ್ಲಿಸಿ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ. ಉತ್ಸಾಹಿ ಯುವ ತಂಡದ ಈ ಪ್ರಯತ್ನಕ್ಕೆ ಶ್ರೇಯ ಪ್ರೊಡಕ್ಷನ್ಸ್ ಸಂಸ್ಥೆ ಬಂಡವಾಳ ಹೂಡಲಿದ್ದು, ನಿರ್ಮಾಣದ ಜವಬ್ದಾರಿ ಹೊತ್ತಿದೆ. ತಾಂತ್ರಿಕ ವರ್ಗ ಹಾಗೂ ಕಲಾವಿದರ ಪಟ್ಟಿಯನ್ನ ಇನ್ನೂ ಬಿಟ್ಟುಕೊಡದ ಚಿತ್ರತಂಡ ದೊಡ್ಡ ಪ್ರಯತ್ನಕ್ಕೆ ಕೈ ಹಾಕಿರುವುದಾಗಿ ತಿಳಿಸಿದೆ‌. ಚಿತ್ರಿಕರಣಕ್ಕಾಗಿ ಮಳೆಗಾಲವನ್ನ ಕಾಯುತ್ತಿದ್ದ ಚಿತ್ರತಂಡ ಮುಂದಿನ ವಾರದಿಂದ‌ ಚಿತ್ರಿಕರಣ ಆರಂಭಿಸಲಿದ್ದು, ಕನ್ನಡಿಗರ ಹಾಗೂ ಚಿತ್ರ ರಸಿಕರ ಆಶೀರ್ವಾದವನ್ನ ಬಯಸುತ್ತಿದೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor