Shivaji suratkal 2 movie watched Mysuru Maharaja “ಶಿವಾಜಿ ಸುರತ್ಕಲ್ 2″ ಚಿತ್ರಕ್ಕೆ ಮೈಸೂರು ಮಹಾರಾಜರ ಮೆಚ್ಚುಗೆ”
*”ಶಿವಾಜಿ ಸುರತ್ಕಲ್ 2″ ಚಿತ್ರಕ್ಕೆ ಮೈಸೂರು ಮಹಾರಾಜರ ಮೆಚ್ಚುಗೆ* .
ಅಂಜನಾದ್ರಿ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ರೇಖಾ ಕೆ.ಎನ್ ಹಾಗೂ ಅನೂಪ್ ಗೌಡ ನಿರ್ಮಿಸಿರುವ, ಆಕಾಶ್ ಶ್ರೀವತ್ಸ ನಿರ್ದೇಶನದಲ್ಲಿ ರಮೇಶ್ ಅರವಿಂದ್ ನಾಯಕರಾಗಿ ನಟಿಸಿರುವ “ಶಿವಾಜಿ ಸುರತ್ಕಲ್ 2” ಚಿತ್ರವನ್ನು ಇತ್ತೀಚೆಗೆ ಮೈಸೂರು ಮಹಾರಾಜರಾದ ಶ್ರೀಯದುವೀರ ಒಡೆಯರ್ ಅವರು ವೀಕ್ಷೀಸಿದರು. ನಾಯಕ ರಮೇಶ್ ಅರವಿಂದ್ ಸಹ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
“ನನಗೆ ಪತ್ತೆಧಾರಿ ಸಿನಿಮಾಗಳು ಬಹಳ ಇಷ್ಟ. ಶಿವಾಜಿ ಸುರತ್ಕಲ್ 2 ಚಿತ್ರ ತುಂಬಾ ಚೆನ್ನಾಗಿದೆ. ಈ ಚಿತ್ರದ ಮುಂದುವರಿದ ಭಾಗಗಳು ಇನ್ನು ಹೆಚ್ಚಾಗಿ ಬರಲಿ ಎಂದು ಮಹಾರಾಜರು ಮನತುಂಬಿ ಹಾರೈಸಿದರು.
ಈಗಾಗಲೇ ಜನಮನಸೂರೆಗೊಂಡಿರುವ ಈಚಿತ್ರ ಚಿತ್ರಮಂದಿರಗಳಲ್ಲಿ ಯಶಸ್ವಿ 41 ದಿನಗಳನ್ನು ಪೂರೈಸಿ, 50ನೇ ದಿನದತ್ತ ಹೆಜ್ಜೆ ಹಾಕುತ್ತಿದೆ.