Shivaji suratkal 2 50 Days Completed ಶಿವಾಜಿ ಸುರತ್ಕಲ್ 2″ ಚಿತ್ರಕ್ಕೆ ಐವತ್ತನೇ ದಿನದ ಸಡಗರ

*”ಶಿವಾಜಿ ಸುರತ್ಕಲ್ 2″ ಚಿತ್ರಕ್ಕೆ ಐವತ್ತನೇ ದಿನದ ಸಡಗರ* …

ಅಂಜನಾದ್ರಿ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ರೇಖಾ ಕೆ.ಎನ್ ಹಾಗೂ ಅನೂಪ್ ಗೌಡ ನಿರ್ಮಿಸಿರುವ, ಆಕಾಶ್ ಶ್ರೀವತ್ಸ ನಿರ್ದೇಶನದ ಹಾಗೂ ರಮೇಶ್ ಅರವಿಂದ್ ನಾಯಕರಾಗಿ ನಟಿಸಿರುವ “ಶಿವಾಜಿ ಸುರತ್ಕಲ್ 2” ಚಿತ್ರ ಕರ್ನಾಟಕದ ಏಳು ಚಿತ್ರಮಂದಿರಗಳಲ್ಲಿ ಐವತ್ತು ದಿನಗಳ ಯಶಸ್ವಿ ಪ್ರದರ್ಶನ ಕಂಡಿದೆ. ಈ‌ ಸಂತೋಷವನ್ನು ಸಂಭ್ರಮಿಸಲು ನಿರ್ಮಾಪಕ ಅನೂಪ್ ಗೌಡ ಹಾಗೂ ನಿರ್ದೇಶಕ ಆಕಾಶ್ ಶ್ರೀವತ್ಸ ನಟ ರಮೇಶ್ ಅರವಿಂದ್ ಅವರಿಂದ ಐವತ್ತನೇ ದಿನದ ಪೋಸ್ಟರ್ ಬಿಡುಗಡೆ ಮಾಡಿಸಿದ್ದಾರೆ. ಚಿತ್ರದ ಯಶಸ್ಸಿಗೆ ಕಾರಣರಾದ ಕಲಾಭಿಮಾನಿಗಳಿಗೆ, ಮಾಧ್ಯಮ ಮಿತ್ರರಿಗೆ ಹಾಗೂ ತಮ್ಮ ಚಿತ್ರತಂಡಕ್ಕೆ ನಿರ್ದೇಶಕರು ಹಾಗೂ ನಿರ್ಮಾಪಕರು ಧನ್ಯವಾದ ತಿಳಿಸಿದ್ದಾರೆ.
ಪೋಸ್ಟರ್ ಬಿಡುಗಡೆ ಮಾಡಿ, ಮಾತನಾಡಿದ್ದ ನಟ ರಮೇಶ್ ಅರವಿಂದ್, ಈ ಸಂದರ್ಭದಲ್ಲಿ ಕನ್ನಡ ಚಿತ್ರವೊಂದು ಐವತ್ತು ದಿನಗಳನ್ನು ಪೂರೈಸಿರುವುದು ಖುಷಿಯ ಸಂಗತಿ. ಈ ಸಂದರ್ಭದಲ್ಲಿ ನಾನು ಅಭಿಮಾನಿಗಳಿಗೆ, ನಿರ್ಮಾಪಕರಿಗೆ, ನಿರ್ದೇಶಕರಿಗೆ, ತಂತ್ರಜ್ಞರಿಗೆ ಹಾಗೂ ಕಲಾವಿದರಿಗೆ ಅಭಿನಂದನೆ ತಿಳಿಸುತ್ತೇನೆ ಎಂದಿದ್ದಾರೆ.

ಚಿತ್ರ ಕಳೆದೆರೆಡು ದಿನಗಳ ಹಿಂದೆ ಐವತ್ತು ದಿನ ಪೂರೈಸಿದೆ. ಭಾನುವಾರ(ಜೂನ್ 4) 52ನೇ ದಿನ.‌‌ ಇಂದು ಮಧ್ಯಾಹ್ನದ ಶೋ ಕೂಡ ಹೌಸ್ ಫುಲ್ ಆಗಿರುವುದು ಚಿತ್ರತಂಡದ ಸಂತೋಷವನ್ನು ಮತ್ತಷ್ಟು ಹೆಚ್ಚಿಸಿದೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor