Shiva sharana molige maraya movie shooting started. ಅಕ್ಷಯ ತೃತೀಯದಂದು ಆರಂಭವಾಯಿತು “ಶಿವಶರಣ ಮೋಳಿಗೆ ಮಾರಯ್ಯ” ಚಿತ್ರ .

ಅಕ್ಷಯ ತೃತೀಯದಂದು ಆರಂಭವಾಯಿತು “ಶಿವಶರಣ ಮೋಳಿಗೆ ಮಾರಯ್ಯ” ಚಿತ್ರ .

ಭಕ್ತಿಪ್ರಧಾನ ಈ ಚಿತ್ರಕ್ಕೆ ಕೊಪ್ಪಳದ ಗವಿಮಠದ ಶ್ರೀಗಳಿಂದ ಚಾಲನೆ .

ಹೆಸರಾಂತ ಶಿವಶರಣ ಮೋಳಿಗೆ ಮಾರಯ್ಯ ಚಿತ್ರ ಅಕ್ಷಯ ತೃತೀಯ ಹಾಗೂ ಬಸವ ಜಯಂತಿ ಶುಭದಿನದಂದು ಕೊಪ್ಪಳದ ಶ್ರೀಗವಿ ಸಿದ್ದೇಶ್ವರ ಮಠದಲ್ಲಿ ಆರಂಭವಾಗಿದೆ. ಪೂಜ್ಯ ಗವಿ ಸಿದ್ದೇಶ್ವರ ಮಠದ ಶ್ರೀಗಳು ಚಿತ್ರಕ್ಕೆ ಚಾಲನೆ ನೀಡಿದ್ದಾರೆ.

“ಶ್ರೀ ಜಗನ್ನಾಥದಾಸರು”, ” ಶ್ರೀಪ್ರಸನ್ನವೆಂಕಟದಾಸರು” ಹಾಗೂ ಇತ್ತೀಚಿಗೆ ತೆರೆಕಂಡ “ದಾಸವರೇಣ್ಯ ಶ್ರೀ ವಿಜಯದಾಸರು” ಸೇರಿದಂತೆ ನಾಡಿನ ಹೆಸರಾಂತ ಹರಿದಾಸರ ಚಿತ್ರಗಳ ನಿರ್ದೇಶಕ ಮಧುಸೂದನ್ ಹವಾಲ್ದಾರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಮಾತಾಂಬುಜ ಮೂವೀಸ್ ಅರ್ಪಿಸುವ ಹಾಗೂ ಹವಾಲ್ದಾರ್ ಫಿಲಂಸ್ ನ ಮೂಲಕ ಮಧುಸೂದನ್ ಹವಾಲ್ದಾರ್ ಅವರೆ ಈ ಚಿತ್ರವನ್ನು ನಿರ್ಮಿಸುತ್ತಿರುವುದಲ್ಲದೆ, ಸಂಗೀತ ನಿರ್ದೇಶನವನ್ನು ಮಾಡುತ್ತಿದ್ದಾರೆ. ಆರು ಹಾಡುಗಳು ಹಾಗೂ ವಚನಗಳು ಈ ಚಿತ್ರದಲ್ಲಿರುತ್ತದೆ. ಆನೆಗುಂದಿ, ಕೊಪ್ಪಳ, ಬಾಗಲಕೋಟೆ ಹಾಗೂ ಹಂಪಿಯ ಆಸುಪಾಸಿನಲ್ಲಿ ಚಿತ್ರೀಕರಣ ನಡೆಯಲಿದೆ. ಸಿ.ನಾರಾಯಣ ಈ ಚಿತ್ರದ ಛಾಯಾಗ್ರಾಹಕರು.

ಶಿವಶರಣ ಮೋಳಿಗೆ ಮಾರಯ್ಯ ಅವರು ಕಾಶ್ಮೀರದ ರಾಜರಾಗಿದ್ದವರು. ಅವರು ಕಲ್ಯಾಣಕ್ಕೆ ಬರುತ್ತಾರೆ. ಶರಣ ತತ್ವಕ್ಕೆ ಮನಸೋತ್ತು ಶಿವಶರಣರಾಗುತ್ತಾರೆ. ರಾಜ್ಯವನ್ನು ಮಗನಿಗೆ ಒಪ್ಪಿಸುತ್ತಾರೆ. ದಿನವೂ ಕಟ್ಟಿಗೆ ಮಾರಿ ಅದರಿಂದ ಬಂದ ಹಣದಿಂದ ದಿನ ದಾಸೋಹ ಮಾಡಿಸುತ್ತಿರುತ್ತಾರೆ. ಇಂತಹ ಮಹಾಮಹಿಮ ಶಿವಶರಣರ ಜೀವನ ಚರಿತ್ರೆಯನ್ನು ತೆರೆಗೆ ತರಲು ತುಂಬಾ ಸಂತೋಷವಾಗಿದೆ.

ನಾನು ಹಾಗೂ ಜೆ.ಎಂ.ಪ್ರಹ್ಲಾದ್ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದೇವೆ. ಈ ಹಿಂದ ಕೆಲವು ಚಿತ್ರಗಳಲ್ಲಿ ನಟಿಸರುವ ವಿಷ್ಣುವರ್ಧನ್ ಅವರು ಮೋಳಿಗೆ ಮಾರಯ್ಯ ಅವರ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಶರತ್ ಕುಮಾರ್ ದಂಡಿನ್, ಇಂಗಳಗಿ ನಾಗರಾಜ್, ಕೆ‌.ಪುರುಷೋತ್ತಮ ರೆಡ್ಡಿ, ನಿಶ್ಚಿತ ಶೆಟ್ಟಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಇದೇ ಸಂದರ್ಭದಲ್ಲಿ ನನ್ನ ನಿರ್ದೇಶನದ “ದಾಸವರೇಣ್ಯ ಶ್ರೀವಿಜಯದಾಸರು” ಚಿತ್ರ ಇಪ್ಪತ್ತೈದು ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ ಎಂದು ನಿರ್ದೇಶಕ ಹಾಗೂ ನಿರ್ಮಾಪಕ ಮಧುಸೂದನ್ ಹವಾಲ್ದಾರ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor