“See” movie trailer released ” ಸಿ” ಚಿತ್ರದ ಟ್ರೇಲರ್ ಬಿಡುಗಡೆ.

ಸಿ.. ಹಾಡುಗಳು ಮತ್ತು ಟೀಸರ್ ಮೂಲಕ ಗಮನ ಸೆಳೆಯುತ್ತಿರುವ ಸಿನಿಮಾ. ಹೊಸಬರಹ ಹೊಸ ಪ್ರಯತ್ನಕ್ಕೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಸಿನಿಮಾ ತಂಡ ಟ್ರೈಲರ್ ಮೂಲಕ ಅಭಿಮಾನಿಗಳ ಮುಂದೆ ಬಂದಿರುವ ಸಿ ಸಿನಿಮಾ ಇದೆ 23ಕ್ಕೆ ಚಿತ್ರಮಂದಿರಕ್ಕೆ ಎಂಟ್ರಿ ಕೊಡುತ್ತಿದೆ.

ಅಂದಹಾಗೆ ಸಿ ಸಿನಿಮಾದ ಟ್ರೈಲರ್ ಅನ್ನು ನಾಯಕ ರಾಜವರ್ಧನ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಟ್ರೈಲರ್ ಸಿಕ್ಕಾಪಟ್ಟೆ ಇಂಟರೆಸ್ಟಿಂಗ್ ಆಗಿ ಮೂಡಿ ಬಂದಿದ್ದು ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.

ಸಿ, ಕಿರಣ್ ಸುಬ್ರಮಣಿ ನಿರ್ದೇಶನದ ಚೊಚ್ಚಲ ಸಿನಿಮಾ. ಕಿರಣ್ ಆಕ್ಷನ್ ಕಟ್ ಹೇಳುವ ಜೊತೆಗೆ ನಾಯಕನಾಗಿ ಮಿಂಚಿದ್ದಾರೆ. ಮೊದಲ ಬಾರಿಗೆ ನಾಯಕನಟನಾಗಿ ಬೆಳ್ಳಿ ತೆರೆಮೇಲೆ ಅಬ್ಬರಿಸುವ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತು ಕೊಂಡಿರುವುದು ಅವರ ಹೆಚ್ಚುಗಾರಿಕೆಯಾಗಿದೆ.

ಟ್ರೇಲರ್ ರಿಲೀಸ್ ಮಾಡಿ ಮಾತನಾಡಿದ ನಟ ರಾಜವರ್ಧನ್, ‘ಟ್ರೇಲರ್ ಎಮೋಷನಲ್ ಆಗಿದೆ. ಇದ್ರಲ್ಲಿ ಏನೋ ವಿಷಯವನ್ನು ಹೇಳುತ್ತಿದ್ದಾರೆ. ಎಲ್ಲರೂ ಸಿನಿಮಾ ನೋಡಿ’ ಎಂದು ಹೇಳಿದರು. ನಿರ್ಮಾಪಕ ಕೃಷ್ಣೇಗೌಡ ಅವರು ಮಾತನಾಡಿ, ‘ಎಲ್ಲರೂ ಸಿನಿಮಾ ನೋಡಿ, ನಿರ್ಮಾಪಕರನ್ನು ಉಳಿಸಿ’ ಎಂದರು.

ಸಿನಿಮಾದ ನಿರ್ದೇಶಕ ಹಾಗೂ ನಟ ಕಿರಣ್ ಮಾತನಾಡಿ ‘ಸಿ’ ಎಂದರೆ ಸಿನಿಮಾದಲ್ಲಿ ಮೂರು ಅರ್ಥವಿದೆ. ಆದರೆ ಟ್ರೈಲರ್ ನಲ್ಲಿ ಒಂದು ಸಿ ಬಗ್ಗೆ ಮಾತ್ರ ಬಿಟ್ಟುಕೊಟ್ಟಿದ್ದೇವೆ. ಮತ್ತೆರಡು ಸಿ ಏನ್ ಹೇಳುತ್ತೆ ಎಂದು ಥಿಯೇಟರ್ ನಲ್ಲೇ ನೋಡಬೇಕು. ಸಿನಿಮಾ ಪ್ರಾರಂಭವಾದಾಗ ಎಂಟು ಜನ ಪ್ರೊಡ್ಯೂಸರ್ ಇದ್ದರು ಆದರೆ ಕಾರಣಾಂತರಗಳಿಂದ ಎಲ್ಲರೂ ಹೊರಟುಹೋದರು. ಎಲ್ಲರೂ ಸಿನಿಮಾ ನೋಡಿ’ ಎಂದರು.

ನಟ ಪ್ರಶಾಂತ್ ನಟನ ಅವರು ಮಾರನಾಡಿ, ‘ಈ ಸಿನಿಮಾ ಮಗ ಅಪ್ಪನಿಗಾಗಿ ಮಾಡಿದ್ದು. ಈ ಸಿನಿಮಾದಲ್ಲಿ ನಾನು ವಿಭಿನ್ನವಾದ ಪಾತ್ರ ಮಾಡಿದ್ದೇನೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ’ ಎಂದರು.

ಸದ್ಯ ರಿಲೀಸ್ ಆಗಿರುವ ಟ್ರೈಲರ್ ನೋಡುತ್ತಿದ್ದರೆ ಇದು ಅಪ್ಪ-ಮಗಳ ಬಾಂಧವ್ಯದ ಸಿನಿಮಾ ಎನ್ನುವುದು ಗೊತ್ತಾಗುತ್ತಿದೆ. ಜೊತೆಗೆ ಮೆಡಿಕಲ್ ಮಾಫಿಯಾದ ಬಗ್ಗೆಯೂ ಸಿನಿಮಾದಲ್ಲಿ ತೋರಿಸಲಾಗಿದೆ. ಕಣ್ಣು ಕಾಣದ ಮಗಳ ಆಸೆಯನ್ನು ಈಡೇರಿಸಲು ಹೋರಾಡುವ ಅಪ್ಪನ ಪಾತ್ರದಲ್ಲಿ ಸುಬ್ರಮಣಿ ಕಾಣಿಸಿಕೊಂಡಿದ್ದಾರೆ. ಮಗಳ ಪಾತ್ರದಲ್ಲಿ ಬಾಲ ನಟಿ ಸಾನ್ವಿತಾ ಅಭಿನಯಿಸಿದ್ದಾರೆ. ಇನ್ನು ಉಳಿದಂತೆ ಸಿನಿಮಾದಲ್ಲಿ ಪ್ರಶಾಂತ್ ನಟನ, ಶ್ರೀಧರ್ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ.

ಟ್ರೈಲರ್ ಹಾಗೂ ಹಾಡುಗಳ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಹೊಸಬರ ಸಿ ಸಿನಿಮಾಗೆ ಪ್ರೇಕ್ಷಕ ಮಹಾಪ್ರಭುಗಳು ಜೈ ಎನ್ನುತ್ತಾರಾ ಕಾದುನೋಡಬೇಕು.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor