Satyam Kannada movie Audio Release in Gangavati. ಗಂಗಾವತಿಯಲ್ಲಿ “ಸತ್ಯಂ” ಆಡಿಯೋ ಬಿಡುಗಡೆ

ಗಂಗಾವತಿಯಲ್ಲಿ “ಸತ್ಯಂ” ಆಡಿಯೋ ಬಿಡುಗಡೆ

ಶ್ರೀ ಮಾತಾ ಕ್ರಿಯೇಶನ್ಸ್ ಮೂಲಕ ಮಹಾಂತೇಶ್ ವಿ.ಕೆ. ಅವರ ನಿರ್ಮಾಣದ ಸತ್ಯಂ ಚಿತ್ರದ  ಆಡಿಯೋ ಬಿಡುಗಡೆ ಸಮಾರಂಭ ಗಂಗಾವತಿಯ ಜಗಜೀವನ ರಾಮ್ ಸರ್ಕಲ್ ನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ  ನೆರವೇರಿತು.

ಸಚಿವರಾದ ಶಿವರಾಜ್ ತಂಗಡಗಿ ಅವರು ಸತ್ಯಂ ಚಿತ್ರದ ಆಡಿಯೋ ಬಿಡುಗಡೆಗೊಳಿಸಿ ಮಾತನಾಡುತ್ತ ಬಾಂಧವ್ಯದ ಕಥೆ ಇಟ್ಟುಕೊಂಡು ಉತ್ತರ ಕರ್ನಾಟಕದವರೇ ಆದ ನಿರ್ಮಾಪಕರು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ನಮ್ಮ ಭಾಗದವರಾದ ಇವರನ್ನು ನಾವೆಲ್ಲ ಸೇರಿ ಗೆಲ್ಲಿಸಬೇಕು. ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಪ್ರತಿಭಾವಂತರಿದ್ದಾರೆ. ಅವರಿಗೆಲ್ಲ ಅವಕಾಶ ಸಿಗುವಂತಾಗಲಿ ಎಂದು ಚಿತ್ರತಂಡಕ್ಕೆ ಶುಭ ಹಾರೈಸಿದರು.
ನಂತರ ನಿರ್ಮಾಪಕ ಮಹಾಂತೇಶ್ ಅವರು ಮಾತನಾಡುತ್ತ ಇದು ನಮ್ಮ ಸಂಸ್ಥೆಯ ಎರಡನೇ ಚಿತ್ರ. ತಲೆಮಾರುಗಳ ನಡುವಿನ ಕಥಾಹಂದರ ಇಟ್ಟುಕೊಂಡು ಒಂದೊಳ್ಳೇ ಸಿನಿಮಾ ಮಾಡಿದ್ದೇವೆ. ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ತಯಾರಾಗಿದೆ.
ಉತ್ತರ ಕರ್ನಾಟಕ ಭಾಗದಲ್ಲಿ, ನಮ್ಮ ಜನರ ಸಮ್ಮುಖದಲ್ಲಿ ಆಡಿಯೋ ಬಿಡುಗಡೆ ಮಾಡಬೇಕೆಂಬುದು ನನ್ನ ಕನಸಾಗಿತ್ತು. ದಯವಿಟ್ಟು ನಮ್ಮ ಚಿತ್ರವನ್ನು ಥೇಟರಿನಲ್ಲಿ ವೀಕ್ಷಿಸುವ ಮೂಲಕ ಪ್ರೋತ್ಸಾಹಿಸಿ ಎಂದು ಹೇಳಿದರು.


ಸದಭಿರುಚಿಯ ಚಿತ್ರಗಳ ಮೂಲಕ ಗುರ್ತಿಸಿಕೊಂಡಿರುವ ಅಶೋಕ್ ಕಡಬ ಅವರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು ಉತ್ತರ ಕರ್ನಾಟಕದಲ್ಲಿ ಕನ್ನಡ ಚಿತ್ರಗಳನ್ನು ಹೆಚ್ಚು ಜನ ನೋಡುತ್ತಾರೆ. ಹಾಗಾಗಿ ನಿಮ್ಮ ಬಳಿಗೆ ಬಂದಿದ್ದೇವೆ. ಒಳ್ಳೇ ಸಿನಿಮಾ ಮಾಡಿದ್ದೇವೆ. ನೀವೆಲ್ಲ ಚಿತ್ರವನ್ನು ಗೆಲ್ಲಿಸುತ್ತೀರೆಂಬ ನಂಬಿಕೆಯಿದೆ ಎಂದರು. ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು, ಜಗದ್ಗುರು ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮದ ವೇದಿಕೆಯಲ್ಲಿ ಉತ್ತರ ಕರ್ನಾಟಕ ಭಾಗದ ಅನೇಕ ರಾಜಕೀಯ ಗಣ್ಯರುಗಳು ಭಾಗವಹಿಸಿದ್ದರು.
ಕಾಲಘಟ್ಟಗಳಲ್ಲಿ ನಡೆಯೋ ಕಥೆ ಸತ್ಯಂ ಚಿತ್ರದಲ್ಲಿದ್ದು, ಜಮೀನ್ದಾರ್ ಕುಟುಂಬದ ಎಳೆಯೊಂದಿಗೆ ಪ್ರಸ್ತುತ ಬದುಕಿನ ಕಥೆಯೂ ಬೆಸೆದುಕೊಂಡಿದೆ. ತಾತನಾಗಿ ಹಿರಿಯ ನಟ ಸುಮನ್ , ಮೊಮ್ಮಗನಾಗಿ ಸಂತೋಷ್ ಅಭಿನಯಿಸಿದ್ದಾರೆ. ನಾಯಕಿಯಾಗಿ ರಂಜಿನಿ ರಾಘವನ್ ಕಾಣಿಸಿಕೊಂಡಿದ್ದಾರೆ. ಜನವರಿಯಲ್ಲಿ ಚಿತ್ರದ ಟ್ರೈಲರ್ ಬಿಡುಗಡೆಯಾಗಲಿದೆ.


ರವಿ ಬಸ್ರೂರು ಅವರ ಸಂಗೀತ ಸಂಯೋಜನೆ, ಸಿನಿಟೆಕ್ ಸೂರಿ ಅವರ ಕ್ಯಾಮೆರಾ ವರ್ಕ್ ಈ ಚಿತ್ರಕ್ಕಿದೆ ಕೆ.ವಿ.ರಾಜು ಅವರು ಒಂದಿಷ್ಟು ಚಿತ್ರಕಥೆ, ಸಂಭಾಷಣೆ ಬರೆದಿದ್ದು, ಅದನ್ನು ಕಿನ್ನಾಳ ರಾಜ್ ಪೂರ್ಣಗೊಳಿಸಿ, ಒಂದು ಹಾಡನ್ನೂ ಬರೆದಿದ್ದಾರೆ. A2 ಮ್ಯೂಸಿಕ್ ಆಡಿಯೋ ಹಕ್ಕನ್ನು ಪಡೆದಿದೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor