Sapta sagaradache yello movie Review ಪಂಜರದೊಳಗೊಂದು ಸ್ವಚ್ಚ ಪ್ರೇಮಕಥೆ Rating – 3.5/5
ಅವರಿಬ್ಬರು ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಕನಸುಗಳನ್ನು ಕಟ್ಟಿಕೊಂಡು ಹೊಸ ಜೀವನದ ಹೊಸಿಲಿಗೆ ಭಾವನೆಗಳ ರಂಗವಲ್ಲಿ ಬಿಡಿಸಿ, ಬೆಳಕು ಕಾಣಬೇಕು ಅನ್ನೋಷ್ಟರಲ್ಲಿ
ವಿಧಿಯ ಆಟವೇ ಬೇರೆ ಇತ್ತು.
ಒಬ್ಬರನ್ನೊಬ್ಬರು ಬಿಟ್ಡಿರಲಾರದಂತೆ ಬೆಸೆದು ಕೊಂಡಿದ್ದ ಜೋಡಿ ಜೀವಗಳಿಗೆ ಆದ ಆಘಾತವೇನು, ಅವರನ್ನು ಸಮಸ್ಯೆಗಳಿಗೆ ಸಿಲುಕಿಸಿದ ಪ್ರಪಾತ ಯಾವುದು, ಸುಂದರ ಜೋಡಿಗಳ ಆ ನಗು, ಆ ತುಂಟಾಟ, ಆ ಪ್ರೇಮಾಂಕುರದ ರಮಣೀಯತೆ ಎಲ್ಲದಕ್ಕೂ ಹೆಚ್ಚಾಗಿ ಸಪ್ತ ಸಾಗರಗಳ ಬೋರ್ಗರೆತದ ಸದ್ದಿನ ಒಳಗೊಂದು ಪ್ರೀತಿಯ ಭಾವನೆಗಳ ತುಡಿತ ನೋಡಬೇಕೆಂದರೆ ಚಿತ್ರ ಮಂದಿರದಲ್ಲಿ ಕೂತು ಕೌತುಕದ ಕಣ್ಣುಗಳಲ್ಲಿ “ಸಪ್ತ ಸಾಗರದಾಚೆ ಎಲ್ಲೋ”
ಚಿತ್ರ ವೀಕ್ಷಣೆ ಮಾಡಬೇಕು.
ನಿರ್ದೇಶಕ ಹೇಮಂತ್ ಜೈಲಿನ ಹಕ್ಕಿಗಳ ಅಮಾಯಕಥೆ, ದುರುಳತನದ ಅಬ್ಬರಗಳನ್ನು ಹಾಗೂ ಅದರ ನಡುವಿನಲ್ಲಿ ಸಿಕ್ಕಿ ನಲುಗುವ ಪ್ರಬುದ್ದ ಪ್ರೇಮವೊಂದರ ಮೌನ ನರಳಾಟವನ್ನು ಬಹಳ ಚನ್ನಾಗಿ ತೆರೆಯ ಮೇಲೆ ನಿರೂಪಿಸಿದ್ದಾರೆ.

ನಟ ರಕ್ಷಿತ್ ಶೆಟ್ಟಿ ಇಲ್ಲಿ ಪ್ರೀತಿಯ ಕತ್ತೆಯಾಗಿ ಬೇರೆಯದೇ ರೀತಿಯಲ್ಲಿ ಪ್ರೇಕ್ಷಕರ ಮುಂದೆ ಕಾಣಿಸಿಕೊಂಡಿದ್ದಾರೆ.
ನಟನೆ, ಹಾವ ಭಾವ, ಲುಕ್ ಎಲ್ಲದರಲ್ಲೂ ಹೊಸತನ ಕಾಣುತ್ತದೆ.
ಇನ್ನೂ ನಾಯಕಿ ನಟಿ ರುಕ್ಮಿಣಿಯಂತು ಪಾತ್ರಕ್ಕೆ ನೈಜತೆಯನ್ನು ತುಂಬುವಲ್ಲಿ ಯಶಸ್ವಿಯಾಗಿದ್ದಾರೆ.
ಚಿತ್ರ ನೋಡಿದವರಿಗೆ ನಮಗೂ ಈ ತರ ಹುಡುಗಿ ಬೇಕು ಅನ್ನಿಸುವಷ್ಟು ಪ್ರೇಕ್ಷಕರಿಗೆ ಇಷ್ಟವಾಗುತ್ತಾರೆ.
ಚಿತ್ರದಲ್ಲಿ ಬರುವ ಪಾತ್ರಗಳು ಹಾಗೂ ಸನ್ನಿವೇಶಗಳು ಎಲ್ಲವೂ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿವೆ ಎನ್ನಬಹುದು.
ಆದರೆ ನಿರ್ದೇಶಕರು ಎರಡು ಹಾಡುಗಳನ್ನು ನೀಡ ಬೇಕಿತ್ತು. ಅಂತಹ ಸಂಧರ್ಭ ಇದ್ದರು ಬಳಸಿಕೊಂಡಿಲ್ಲ ಎನ್ನುವುದೇ ನಿರಾಶೆ.
ಸಂಧರ್ಭ 1 ನಾಯಕ ಕಿವಿಯಲ್ಲಿ ಶಂಖ ಇಟ್ಟುಕೊಂಡಾಗ ತನ್ನುಡುಗಿಯ ಅಂತರಂಗದ ಸದ್ದು ಸಮುದ್ರದ ಅಲೆಗಳ ಸದ್ದಿನಲ್ಲಿ ಬೆರೆತಾಗ ಬೆಚ್ಚಿ ಬೀಳುತ್ತಾನೆ ಅಲ್ಲಿ ಒಂದು ಹಾಡು
ಸಂಧರ್ಭ 2
ಶರತ್ ಲೋಹಿತಾಶ್ವ ಬಟ್ಟೆಗೆ ನಿನಗಿಷ್ಟವಾದ ಬಣ್ಣ ತುಂಬು ಎಂದಾಗ ಪ್ರೇಯಸಿಯ ನೆನಪಿನಲ್ಲಿ ಬಣ್ಣದ ಹಾಡೊಂದನ್ನು ಸೇರಿಸ ಬಹುದಿತ್ತು
ಒಟ್ಟಿನಲ್ಲಿ ಚಿತ್ರದ ಕಥೆಯಲ್ಲಿ ಹೊಸತನ ಇದೆ, ಇಡೀ ಚಿತ್ರವನ್ನು ಬೇರೆಯದೇ ರೀತಿಯಲ್ಲಿ ಬಣ್ಣಿಸಿದ್ದಾರೆ
ಈಗ ಭಾಗ ಒಂದು ಅಂದರೆ A ಸೈಡಿನ ಕಥೆ ತೋರಿಸಿದ್ದಾರೆ ಇನ್ನೂ B ಸೈಡಿನಲ್ಲಿ ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ಸಿಗಲಿದೆ,
ಅಲ್ಲಿ ಬೇರೆಯದೇ ಶೈಲಿಯಲ್ಲಿ ಮತ್ತಷ್ಟು ಕಥೆ ತೆರೆದು ಕೊಳ್ಳುತ್ತದೆ.
ಹಾಂ ಒಂದು ವಿಷಯ Aಸೈಡ್ ಕಥೆ ನೋಡಿದ್ರೆ ಮಾತ್ರ Bಸೈಡ್ ಕಥೆ ಅರ್ಥ ಹಾಗೋದು.
ಒಳ್ಳೆ ಸಿನಿಮಾ ಬಂದಾಗ ಯಾಕೆ ಬಿಡ್ತೀರಾ ಥಿಯೇಟರ್ ಗೆ ಹೋಗಿ ಸಿನಿಮಾ ನೋಡಿ ತಂಡವನ್ನು ಬೆಂಬಲಿಸಿ ನಮಸ್ಕಾರ.
Rating –