Sandalwood film chamber Goa trip. ಮೋಜು ಮಸ್ತಿ ಕುಸ್ತಿಇದು ಫಿಲಂ ಛೇಂಬರ್ ದುಸ್ತಿತಿ
ಮೋಜು ಮಸ್ತಿ ಕುಸ್ತಿ
ಇದು ಫಿಲಂ ಛೇಂಬರ್ ದುಸ್ತಿತಿ
ಇದು ನಿಜಕ್ಕೂ ಅಸಹ್ಯ ಬೆಳವಣಿಗೆ
ರೆಸಾರ್ಟ್ ರಾಜಕೀಯ ಮಾಡಲು ಹೋದವರು ಅಮಲಿನಲ್ಲಿ ಹೊಡೆದಾಡಿಕೊಂಡ್ರಾ..?
ಪ್ರತೀ ತಿಂಗಳು ಫಿಲ್ಮ್ ಛೇಂಬರ್ ನಲ್ಲಿ ಕಾರ್ಯಕಾರಿ ಸಮಿತಿಯ ಸಭೆ ನಡೆಯುವುದು ವಾಡಿಕೆ.
ಆದರೆ ಯಾರಿಗೋ ಹೊಸ ಐಡಿಯಾ ಬಂದಿದೆ
ಯಾಕೆ ನಾವು ನಾಲ್ಕು ಗೋಡೆ ಮದ್ಯದಲ್ಲಿ ಸಭೆ ಮಾಡಬೇಕು , ಬೇರೆ ಬೇರೆ ಸ್ಥಳಗಳಲ್ಲಿ ಸಭೆ ನಡೆಸಿದರೆ ಹೊಟ್ಟೆ, ಕಣ್ಣು, ಮನಸ್ಸು ಎಲ್ಲವೂ ತೃಪ್ತಿಯಾಗುತ್ತವೆ, ಸ್ವಾಮಿ ಕಾರ್ಯ, ಸ್ವಕಾರ್ಯ ಎಲ್ಲವೂ ಈಡೇರುತ್ತದೆ ಎನ್ನುವ ಯೋಚನೆ ಮತ್ತು ಯೋಜನೆಯಲ್ಲಿ film chamber is Day Out ಆಗಿದೆ.
ಇದು ತಪ್ಪೇನು ಇಲ್ಲ ಆದರೆ ಹೊರ ರಾಜ್ಯದಲ್ಲಿ ಅದರಲ್ಲೂ ಗೋವಾದ ಹಿಬೀಸ್ ರೆಸಾರ್ಟ್ ನಲ್ಲಿ ಚರ್ಚೆ ಮಾಡುವಂತ ಘನಂಧಾರಿ ವಿಷಯ ಏನು ಎನ್ನುವುದು ಕುತೂಹಲ ಮೂಡಿಸಿದೆ.
ವಿಷಯ ಏನೇ ಇದ್ದರು ಅದು ನಮ್ಮ ನೆಲದಲ್ಲಿ ಚರ್ಚೆ ಆಗ ಬೇಕಿತ್ತೇ ವಿನಃ ಹೊರ ರಾಜ್ಯ ಗೋವಾದಲ್ಲಿ ಚರ್ಚೆ ಮಾಡುವಂತದ್ದು ಏನಿತ್ತು.? ಅದರಲ್ಲೂ ಗೋವಾ, ಪ್ರವಾಸಿ ತಾಣ. ಬಹುತೇಕ ಮೋಜು, ಮಸ್ತಿಗಾಗಿಯೇ ಅಲ್ಲಿಗೆ ಹೋಗುವುದು ವಾಡಿಕೆ.
ಮೂಲಗಳ ಪ್ರಕಾರ ಅಲ್ಲಿಗೆ ಹೋದ ಮೇಲೆ ಇದು ಗೋವಾ ಇಲ್ಲಿಗೆ ಬಂದು ಸಭೆ ಮಾಡುವುದು ತಪ್ಪು ಅಂತ ಜ್ಞಾನೋದಯವಾಗಿದೆಯಂತೆ ನಂತರ ಅದನ್ನು ರದ್ದು ಮಾಡಿದ್ದಾರೆ ಎಂಬ ಸುದ್ದಿ ಇದೆ.
ಈಗಾಗಲೇ ಚಿತ್ರರಂಗ ಅದೋಗತಿಗೆ ಬಂದು ನಿಂತಿದೆ.
ಯಾರೋ ಎಲ್ಲೋ ಕೂತು ಚಿತ್ರರಂಗ ಬಂದ್, ಥಿಯೇಟರ್ ಬಂದ್ ಎಂದು ಹೇಳಿದರ ಪರವಾಗಿ ಈಗಾಗಲೇ ಹೊರ ರಾಜ್ಯಗಳಲ್ಲಿ ಕರ್ನಾಟಕದಲ್ಲಿ ಸ್ಯಾಂಡಲ್ ವುಡ್ ಬಂದಾಗಿದೆ ಎಂಬ ಸುದ್ದಿ ಹರಡಿ ನಮ್ಮ ಚಿತ್ರರಂಗಕ್ಕೆ ಕೆಟ್ಟ ಕಳಂಕ ಹತ್ತಿದಂತಾಗಿದೆ.
ಇಲ್ಲಿ ಸಿನಿಮಾಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಭಯ ಭೀತರಾಗಿದ್ದಾರೆ, ಮುಂದೆ ನಮ್ಮ ಬದುಕು ಹೇಗೆ, ನಮ್ಮ ಕಥೆ ಏನು ಎಂಬ ಗೊಂದಲಕ್ಕೆ ಬಿದ್ದಿದ್ದಾರೆ.
ಹೊಸದಾಗಿ ಸಿನಿಮಾ ನಿರ್ಮಿಸಲು ಬರುವ ಹೊಸ ನಿರ್ಮಾಪಕರಿಗೆ ಇತ್ತ ತಲೆ ಹಾಕುವುದೇ ಬೇಡ ಎನ್ನುವಂತಾಗಿದೆ.
ವಾಣಿಜ್ಯ ಮಂಡಳಿ ಚಿತ್ರರಂಗದ ಉಳಿವಿಗಾಗಿ, ನಿರ್ಮಾಪಕರ ಗೆಲುವಿಗಾಗಿ ಏನಾದರೂ ಯೋಜನೆಗಳನ್ನು ಹಾಕಿ ಎಲ್ಲವನ್ನು ಸರಿದೂಗಿಸ ಬೇಕಿತ್ತು. ಆದರೆ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಗೋವಾದಲ್ಲಿ ಕುಣಿಯುವುದು ತುಂಬಾ ಅನಿವಾರ್ಯ ವಾಗಿತ್ತಾ ಎನ್ನುವುದೇ ಯೋಚನೆಯಾಗಿದೆ.
ಯು.ಎಫ.ಓ., ಕ್ಯೂಬ್ ರವರನ್ನು , ಮಲ್ಟಿಪ್ಲೆಕ್ಸ್ ರವರನ್ನು ಸಿಂಗಲ್ ಥಿಯೇಟರ್ ಮಾಲೀಕರನ್ನು ಕರೆಸಿ ಸಮಸ್ಯೆಗಳನ್ನು ಬಗೆಹರಿಸುವಂತಹ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುವುದು ಈಗ ಅತೀ ಮುಖ್ಯ ಕೆಲಸ. ಆದರೆ ಇವರು ಗೋವಾದಲ್ಲಿ ಸಭೆ ನಡೆಸಲು ಹೋಗಿ ಕೆಲವರು ಒಬ್ಬರಿಗೊಬ್ಬರು ಹೊಡೆದಾಡಿಕೊಂಡು ಮುಖ, ಮೂತಿ ಕೆತ್ತಿಸಿಕೊಂಡು ಆಸ್ಪತ್ರೆಗೆ ದೌಡಾಯಿಸಿದ್ದಾರೆ.
ಇದೆಲ್ಲಾ ಬೇಕಿತ್ತಾ..? ಸುಮಾರು 50 ಜನರ ತಂಡಕ್ಕೆ ಹಣದ ವ್ಯವಸ್ಥೆಯನ್ನು ಮಾಡಿದ್ದು ಯಾರು. ಅಥವಾ ಇದಕ್ಕೆಲ್ಲಾ ವಾಣಿಜ್ಯ ಮಂಡಳಿಯ ಹಣ ಪೋಲಾಯ್ತಾ..? ಗೊತ್ತಿಲ್ಲ ಇದಕ್ಕೆಲ್ಲಾ ವಾಣಿಜ್ಯ ಮಂಡಳಿಯವರು ಉತ್ತರಿಸಬೇಕಿದೆ.
ಇನ್ನೇನು ಎರಡು ತಿಂಗಳಲ್ಲಿ ವಾಣಿಜ್ಯ ಮಂಡಳಿಯ ಚುನಾವಣೆ ಇದೆ ಅದರ ಪೂರ್ವಭಾವಿಯಾಗಿ ಗೋವಾ ಮೋಜು, ಮಸ್ತಿಗಾಗಿ ಹೋಗಿ ಕುಸ್ತಿ ಮಾಡಿದ್ರಾ ಗೊತ್ತಿಲ್ಲ..?
ಸಂಭಂದಿಸಿದವರಿಗೆ ನಮ್ಮ ಮನವಿ ಏನೆಂದರೆ ಇದು ಬಹಳ ಕಷ್ಟಪಟ್ಟು ಕಟ್ಟಿದಂತ ಸಿನಿಮಾರಂಗ. ನಮ್ಮ ಹಿರಿಯರು ಬಹಳ ಗೌರವಯುತವಾಗಿ ಬೆಳೆಸಿಕೊಂಡು ಬಂದಂತ ಮನರಂಜನಾ ಮಾಧ್ಯಮ.! ದಯವಿಟ್ಟು ಇದನ್ನು ಹಾಳುಮಾಡಬೇಡಿ, ಇದಕ್ಕೆ ಕೆಟ್ಟ ಹೆಸರು ತರಬೇಡಿ.