sambhavami yuge yuge movie release on tomorrow June 21st. ಮತ್ತೆ ಮತ್ತೆ ತೆರೆ ಮೇಲೆ ಸಂಭವಾಮಿ ಯುಗೇ ಯುಗೇ.
1972ರಲ್ಲಿ ಮಲಯಾಳಂ ನಲ್ಲಿ ಸಂಭವಾಮಿಯುಗೇ ಯುಗೇ
ನಂತೆರ ಕನ್ನಡದಲ್ಲಿ ಮುರುಳಿ ಅಭಿನಯದಲ್ಲಿ 1989ರಲ್ಲಿ
ಹಾಗೆ ತೆಲುಗಿನಲ್ಲಿ 2006ರಲ್ಲಿ ಸಂಭವಾಮಿ ಯುಗೇ ಯುಗೇ ಹೆಸರಿನಲ್ಲಿ ಚಿತ್ರ ತೆರೆ ಕಂಡಿದೆ ಹೆಸರೇ ಹೇಳುವಂತೆ ಮತ್ತೆ ಇದೇ ಹೆಸರಿನಲ್ಲಿ ಸಂಭವಾಮಿ ಯುಗೇ ಯುಗೇ ಚಿತ್ರ ಜೈ ಶೆಟ್ಟಿ ಅಭಿನಯದಲ್ಲಿ 2024 ರಲ್ಲಿ ಇದೇ ಜೂನ್ 21ರಂದು ತೆರೆ ಕಾಣಲಿದೆ.

ರಾಜಲಕ್ಷ್ಮಿ ಎಂಟಟೈನ್ ಮೆಂಟ್ ಬ್ಯಾನರ್ ನಡಿಯಲ್ಲಿ ಪ್ರತಿಭಾ ಅವರು ನಿರ್ಮಿಸಿರುವ, ಚೇತನ್ ಚಂದ್ರಶೇಖರ ಶೆಟ್ಟಿ ನಿರ್ದೇಶನ ಮಾಡಿದ್ದಾರೆ.
ಈ ಚಿತ್ರದಲ್ಲಿ ಮಂಗಳೂರು ಮೂಲದ ಜೈ ಶೆಟ್ಟಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದು, ಇವರೊಂದಿಗೆ ಸಹ ನಟಿಯಾಗಿ ಬೀಜಾಪುರ ಮೂಲದ ನಿಶಾ ರಜಪೂತ್ ಅವರು ತೆರೆ ಹಂಚಿಕೊಂಡಿದ್ದಾರೆ.

ಪ್ರಮೋದ್ ಶೆಟ್ಟಿ, ಸುಧಾರಾಣಿ, ವಿಕ್ಟರಿವಾಸು , ರಾಜೇಂದ್ರ ಕಾರಂತ್, ಅಶ್ವಿನ್ ಹಾಸನ್, ಮಧುರಗೌಡ,, ಅಶೋಕ್ ಕುಮಾರ್ ಮುಂತಾದವರು ಅಭಿನಯಿಸಿದ್ದಾರೆ.

ರಾಜು ಹೆಮ್ಮಿಗೆಪುರ ಛಾಯಾಗ್ರಹಣ, ಪೂರನ್ ಶೆಟ್ಟಿಗಾರ್ ಸಂಗೀತ, ಫ್ರಾನ್ಸ್ ಕ್ಲಿನ್ ರಾಕಿ ಹಿನ್ನೆಲೆ ಸಂಗೀತ, ಗೀತಾ ಮಾಸ್ಟರ್ ನೃತ್ಯ ನಿರ್ದೇಶನದಲ್ಲಿ ಚಿತ್ರ ನಾಳೆ ಜೂನ್ 21ರಂದು ರಾಜ್ಯದಾದ್ಯಂತ ತೆರೆಕಾಣಲಿದೆ.