Samarth Sadguru Shri Sangameshwara Maharajaru song released by goa CM. ಗೋವಾದ ಮುಖ್ಯಮಂತ್ರಿಗಳಿಂದ “ಸಮರ್ಥ ಸದ್ಗುರು ಶ್ರೀ ಸಂಗಮೇಶ್ವರ ಮಹಾರಾಜರು” ಚಿತ್ರದ ಎರಡನೇ ಹಾಡು ಬಿಡುಗಡೆಗೊಂಡಿದೆ
ಗೋವಾದ ಮುಖ್ಯಮಂತ್ರಿಗಳಿಂದ “ಸಮರ್ಥ ಸದ್ಗುರು ಶ್ರೀ ಸಂಗಮೇಶ್ವರ ಮಹಾರಾಜರು” ಚಿತ್ರದ ಎರಡನೇ ಹಾಡು ಸಾವಿರಾರು ಭಕ್ತರ ಸಮ್ಮುಖದಲ್ಲಿ ಬಿಡುಗಡೆಗೊಂಡಿದೆ
“ಸಮರ್ಥ ಸದ್ಗುರು ಶ್ರೀ ಸಂಗಮೇಶ್ವರ ಮಹಾರಾಜರು” ಚಲನಚಿತ್ರದ ಎರಡನೇ ಮರಾಠಿ ಲಿರಿಕಲ್ ವಿಡಿಯೋ ಜನವರಿ 14ರಂದು ಗೋವಾದಲ್ಲಿ ಗೋವಾ ಮುಖ್ಯಮಂತ್ರಿಗಳ ನಿವಾಸದಲ್ಲಿ ಗೋವಾ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಪ್ರಮೋದ ಸಾವಂತ್ ರವರು ಶ್ರೀಮದ್ ಭಾಗವತ್ ಸಪ್ತಾಹ ಮಂಗಲೋತ್ಸವ ಕಾರ್ಯಕ್ರಮದಲ್ಲಿ ಸಾವಿರಾರು ಹರಿಭಕ್ತರ ಸಮ್ಮುಖದಲ್ಲಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿಯ ಶ್ರೀ ಸದ್ಗುರು ಪ್ರಭುಜಿ ಮಹಾರಾಜರ ದಿವ್ಯಸಾನಿದ್ಯ, ಶ್ರೀ ಸುದರ್ಶನ್ ಮಹಾರಾಜರು ಖಡಕಿಮಠ ಪಂಡರಾಪುರ ರವರ ಉಪಸ್ಥಿತಿಯಲ್ಲಿ KANNADAOTT. ORG ವೆಬ್ಸೈಟ್ ಮೂಲಕ ಬಿಡುಗಡೆಯಾಗಿದೆ.

ಶ್ರೀ ಗಿರಿಮಲ್ಲೇಶ್ವರ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಶ್ರೀ ಸದ್ಗುರು ಪ್ರಭುಜೀ ಮಹಾರಾಜರ ಮಾರ್ಗದರ್ಶನದಲ್ಲಿ “ಮಾಧವಾನಂದ ಯೋ ಶೇಗುಣಸಿ” ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದು “ಫಳಲೇ ಭಾಗ್ಯ ಮಾಝೆ ಧನ್ಯ ಝಾಲೋ ಸಂಸಾರಿ” ವಿಠ್ಠಲ ವಿಠ್ಠಲ… ಹರಿಭಕ್ತಿಯ ಮರಾಠಿ ಸಾಲುಗಳ ಈ ಹಾಡನ್ನು ರವೀಂದ್ರ ಸೊರಗಾವಿ, ಎ ಟಿ ರವೀಶ್ ಹಾಡಿದ್ದಾರೆ. ಎ ಟಿ ರವೀಶ್ ಸಂಗೀತ ನೀಡಿದ್ದಾರೆ.
ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಇದೆ ಮೊಟ್ಟ ಮೊದಲ ಬಾರಿಗೆ ಗೋವಾದಲ್ಲಿ ಭಕ್ತಿಪ್ರಧಾನ ಕನ್ನಡ ಚಲನಚಿತ್ರದ ಮರಾಠಿ ಹಾಡನ್ನು ಸಾವಿರಾರು ಭಕ್ತರ ಸಮ್ಮುಖದಲ್ಲಿ ಲಿರಿಕಲ್ ವಿಡಿಯೋ ಬಿಡುಗಡೆಗೊಳಿಸಿ ವೀಕ್ಷಿಸಿದ ಗೋವಾ ಮುಖ್ಯಮಂತ್ರಿಗಳು ಚಿತ್ರತಂಡಕ್ಕೆ ಶುಭಹಾರೈಸಿದರು, ಶ್ರೀ ಸದ್ಗುರು ಪ್ರಭುಜೀ ಮಹಾರಾಜರು, ಶ್ರೀ ಸುದರ್ಶನ ಮಹಾರಾಜ ಕಡಕಿ ಪಂಡರಪುರ, ಪ್ರಕಾಶ ಕಾಲತಿಪ್ಪಿ, ಮಲ್ಲಿಕಾರ್ಜುನ ಕಾಲತಿಪ್ಪಿ ಸೇರಿದಂತೆ ಸಾಧು ಸತ್ಪುರುಷರು ಗಣ್ಯರು ಉಪಸ್ಥಿತರಿದ್ದರು.
ವಿಶೇಷವಾಗಿ ಸಂಗಮೇಶ್ವರ ಚಲನಚಿತ್ರ ಕನ್ನಡ ಚಲನಚಿತ್ರವಾದರೂ ಕಥೆಯಲ್ಲಿ ಮರಾಠಿ ಕಾಕಡಾರತಿ ಇರುವುದರಿಂದ ಪಂಡರಪುರದ ಮಹಾರಾಜರು ಗೋವಾ ಮುಖ್ಯಮಂತ್ರಿಗಳು ಹರಿ ಭಕ್ತರು ಅವರಿಂದಲೇ ಬಿಡುಗಡೆಗೊಳಿಸಲು ಸೂಚಿಸಿದರು. ಅದರಂತೆ ಗೋವಾ ಮುಖ್ಯಮಂತ್ರಿಗಳು ಹರಿಭಕ್ತರಾದ ಕಾರಣ ತಮ್ಮ ನಿವಾಸದಲ್ಲೇ ಬಿಡುಗಡೆ ಮಾಡಿದರು. ಅಲ್ಲದೆ ಎರಡು ವರ್ಷದ ಹಿಂದೆ ಶ್ರೀ ಸದ್ಗುರು ಸಂಗಮೇಶ್ವರ ಮಠಕ್ಕೆ ಅಂದರೆ ಕರ್ನಾಟಕದ ಹಿಪ್ಪರಗಿ ಕ್ಷೇತ್ರಕ್ಕೂ ಭೇಟಿನೀಡಿ ಆಶೀರ್ವಾದ ಪಡೆದಿದ್ದರು.
ಹೊಸ ಪ್ರತಿಭೆ ರವಿ ನಾರಾಯಣ್ ಶ್ರೀಸಂಗಮೇಶ್ವರರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಿರಿಯ ನಟರಾದ ರಾಮಕೃಷ್ಣ, ವಿಜಯಕಾಶಿ, ವಿನಯಪ್ರಸಾದ್, ಸಂದೀಪ್ ಮಲಾನಿ, ನಾರಾಯಣ ಸ್ವಾಮಿ, ವಿಶ್ವಪ್ರಕಾಶ್ ಟಿ ಮಲಗೊಂಡ, ಭವ್ಯಶ್ರೀ ರೈ ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ರಾಜಾ ರವಿಶಂಕರ್ (ವಿ ರವಿ) ನಿರ್ದೇಶನ, ಸಿ ನಾರಾಯಣ್ ಛಾಯಾಗ್ರಹಣ, ಎ.ಟಿ. ರವೀಶ್ ಸಂಗೀತ, ಡಿ. ರವಿ ಸಂಕಲನ, ಕುಮಾರ್ ನೊಣವಿನಕೆರೆ ಪ್ರಸಾದನ ಈ ಚಿತ್ರಕ್ಕಿದೆ.