S/O Muthanna movie teaser released by Shivraj Kumar. S/O ಮುತ್ತಣ್ಣ’ನಿಗೆ ಸಾಥ್ ಕೊಟ್ಟ S/O ಮುತ್ತುರಾಜ…ಪ್ರಣಂ ದೇವರಾಜ್ ಹೊಸ ಸಿನಿಮಾಗೆ ಶಿವಣ್ಣನ ಬೆಂಬಲ

‘S/O ಮುತ್ತಣ್ಣ’ನಿಗೆ ಸಾಥ್ ಕೊಟ್ಟ S/O ಮುತ್ತುರಾಜ…ಪ್ರಣಂ ದೇವರಾಜ್ ಹೊಸ ಸಿನಿಮಾಗೆ ಶಿವಣ್ಣ ಬೆಂಬಲ

‘S/O ಮುತ್ತಣ್ಣ’ನಿಗೆ ಟೀಸರ್ ರಿಲೀಸ್..ದೇವರಾಜ್ ಪುತ್ರ ಪ್ರಣಂ ದೇವರಾಜ್ ಚಿತ್ರಕ್ಕೆ ಶಿವಣ್ಣ ಸಾಥ್

ಈ ವರ್ಷದ ಆರಂಭದಿಂದಲೇ ಒಂದಷ್ಟು ಭಿನ್ನ ವಿಭಿನ್ನ ಬಗೆಯ ಸಿನಿಮಾಗಳು ತೆರೆಗಾಣುತ್ತಿವೆ. ಸೋಲುಗೆಲುವುಗಳಾಚೆಗೆ ಇಂಥಾ ಪ್ರಯತ್ನಗಳು ನಡೆಯುತ್ತಲೇ ಇವೆ. ಇಂತಹ ಆಶಾದಾಯಕ ವಾತಾವರಣದ ಮುಂದುವರೆದ ಭಾಗವೆಂಬಂತೆ ರೂಪಗೊಂಡಿರುವ ಸಿನಿಮಾ ‘S/O ಮುತ್ತಣ್ಣ’. ಸೆಟ್ಟೇರಿದ ದಿನದಿಂದಲೂ ಟೈಟಲ್ ಹಾಗೂ ಕಥಾಹಂದರದ ಮೂಲಕವೇ ಕುತೂಹಲ ಹೆಚ್ಚಿಸಿರುವ ಈ ಚಿತ್ರದ ಟೀಸರ್ ರಿಲೀಸ್ ಆಗಿದೆ. ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ‘S/O ಮುತ್ತಣ್ಣ’ನಿಗೆ ಸಾಥ್ ಕೊಟ್ಟಿದ್ದಾರೆ.

ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ‘S/O ಮುತ್ತಣ್ಣ’ ಟೀಸರ್ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು, ಟೀಸರ್ ರಿಲೀಸ್ ಮಾಡಿದ ಶಿವಣ್ಣ ತಮ್ಮದೇ ಮುತ್ತಣ್ಣ ಸಿನಿಮಾದ ಹಾಡು ಹೇಳಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಚಿತ್ರದಲ್ಲಿ ಕನ್ನಡ ಚಿತ್ರರಂಗದ ಲೆಜೆಂಡ್ ಗಳಲ್ಲಿ ಒಬ್ಬರಾದ ದೇವರಾಜ್ ದ್ವಿತೀಯ ಪುತ್ರ ಪ್ರಣಂ ನಾಯಕನಾಗಿ ನಟಿಸಿದ್ದಾರೆ.

ಟಿಸರ್ ಬಿಡುಗಡೆ ಬಳಿಕ ಮಾತನಾಡಿ ಡಾ.ಶಿವರಾಜ್ ಕುಮಾರ್, ದೇವರಾಜ್ ಅವರ ಫ್ಯಾಮಿಲಿ ಎಂದರೆ ನಮಗೆ ಅಭಿಮಾನ, ಪ್ರೀತಿ, ವಿಶ್ವಾಸ. ಟೀಸರ್ ನೋಡಿದರೆ ಖುಷಿಯಾಯ್ತು. ತಂದೆ ಮಗನ ಬಾಂಧವ್ಯ ತುಂಬಾ ಚೆನ್ನಾಗಿ ತೆಗೆದುಕೊಂಡು ಹೋಗಿದ್ದಾರೆ. ಅಪ್ಪಾಜಿ ಜೊತೆ ನನ್ನ ಹಳೆ ನೆನಪುಗಳನ್ನು ನೋಡಿ ಖುಷಿಯಾಯ್ತು, ತಂದೆ ಮಗನ ಬಾಂಧವ್ಯನ ಸಿನಿಮಾ ಚೆನ್ನಾಗಿ ಆಗಬೇಕು. ಹೋಗುತ್ತದೆ ಎಂಬ ಭರವಸೆ ಇದೆ. ಈ ಟೀಸರ್ ಸಮಾರಂಭದಲ್ಲಿ ಭಾಗಿಯಾಗಿರುವುದು ಖುಷಿ ಕೊಟ್ಟಿದೆ. ದೇವರಾಜ್ ಅವರ ಕುಟುಂಬದ ಜೊತೆ ನಿಲ್ಲುತ್ತೇವೆ,. ಕನ್ನಡ ಇಂಡಸ್ಟ್ರೀಗೆ ಯಾರೇ ಆಗಲಿ ಸಪೋರ್ಟ್ ಮಾಡುತ್ತೇವೆ. ಯಾರೇ ಆಗಲಿ ನಮ್ಮ ಭಾಷೆ ಉಳಿಬೇಕು ಅಂದರೆ ಯಾವುದೇ ಹೀರೋ ಸಿನಿಮಾಗಳು ಗೆಲ್ಲಬೇಕು ಎಂದರು.

ಹಿರಿಯ ನಟ ರಂಗಾಯಣ ರಘು ಮಾತನಾಡಿ, ಮುತ್ತಣ್ಣ ಟೈಟಲ್ ಯಾಕೆ ಇಟ್ಟಿದ್ದಾರೆ ಅನ್ನೋದು ನಿಮಗೆ ಗೊತ್ತಾಗಿರಬೇಕು. ಒರಿಜನಲ್ ಮುತ್ತಣ್ಣನೇ ಬಂದಿದ್ದಾರೆ. ಪುರಾತನ ಫಿಲ್ಮಂಸ್ ಹರಿಯಣ್ಣ ಶಿವಣ್ಣನಿಗೆ ದೊಡ್ಡ ಅಭಿಮಾನಿ. ಶಿವಣ್ಣನೇ ಕಾರ್ಯಕ್ರಮಕ್ಕೆ ಬರಬೇಕು ಎನ್ನುವುದು ಇದು ಕನಸಾಗಿತ್ತು. ಶಿವಣ್ಣ ಆಶೀರ್ವಾದ ಮಾಡಿದರು. ಡೈನಾಮಿಕ್ ಅಂಡ್ ಯಂಗ್ ಡೈನಾಮಿಕ್ ಎಲ್ಲರಿಗೂ ಒಳ್ಳೆದಾಗಲಿ. ಇವರು ಬೆಳೆಯಬೇಕು, ಉಳಿಯಬೇಕು, ತಂದೆ ತಾಯಿ ಹೆಸರನ್ನು ಗಳಿಸಬೇಕು ಎನ್ನುವುದು ಯಾವುದೇ ಕಲಾವಿದರ ಮಕ್ಕಳಿಗಿರುವ ಆಸೆ. ಅದನ್ನು ಪ್ರಜ್ವಲ್ ಹಾಗೂ ಪ್ರಣಂ ಇಬ್ಬರಲ್ಲಿಯೂ ಇದೆ ಎಂದರು.

ನಾಯಕ ಪ್ರಣಂ ದೇವರಾಜ್ ಮಾತನಾಡಿ, ರಿಯಲ್ ಸನ್ ಆಫ್ ಮುತ್ತಣ್ಣ, ರೀಲ್ ಸನ್ ಆಫ್ ಮುತ್ತಣ್ಣನಿಗೆ ಬಂದು ಟೀಸರ್ ಮಾಡಿರುವುದು ಖುಷಿ ಕೊಟ್ಟಿದೆ. ನಾವೆಲ್ಲರೂ ಶಿವಣ್ಣನ ಅಭಿಮಾನಿ. ನಿಮ್ಮನ್ನು ನೋಡಿಕೊಂಡು ಬೆಳೆದಿರುವುದು. ನಿಮ್ಮ ಡ್ಯಾನ್ಸ್, ನಟನೆ, ಆಕ್ಷನ್ ಎಲ್ಲದಕ್ಕೂ ಅಭಿಮಾನಿ. ನಾನು ಸಾಕಷ್ಟು ಚಿಕ್ಕವನು ಅವರ ಬಗ್ಗೆ ಮಾತಾನಾಡಲು. ಮುಂದೆ ಬರುವ ಜನರೇಷನ್ ಗೆ ನೀವೇ ಸ್ಫೂರ್ತಿ. ತಂದೆ ತಂದೆಯಾಗುವು ಮುಂಚೆ ಸಾಮಾನ್ಯ ಮನುಷ್ಯ. ಹೆಂಡ್ತಿ, ಕೆಲಸ, ಮನೆ ನೋಡಿಕೊಳ್ಳುತ್ತಾನೆ. ಆದ್ರೆ ತಂದೆಯಾದ ಬಳಿಕ ರೋಲ್ ಮಾಡೆಲ್, ಟೀಚರ್, ಸ್ಟೋರಿ ಟೆಲ್ಲರ್ ಆಗ್ತಾರೆ. ಅಪ್ಪ ಆದ ಬಂದ ಬಳಿಕ ಎಷ್ಟೋ ಕಥೆ ಹುಟ್ಟುತ್ತವೆ. ಅಪ್ಪ ಮಗನ ಬಾಂಧವ್ಯವನ್ನು ಹೇಗೆ ಇರುತ್ತೇ ಅನ್ನೋದನ್ನು ಸನ್ ಆಫ್ ಮುತ್ತಣ್ಣದಲ್ಲಿ ಮಾಡಿದ್ದೇವೆ.

ನಟಿ ಖುಷಿ ರವಿ ಮಾತನಾಡಿ, ಶಿವಣ್ಣ ನಮ್ಮ ಸಿನಿಮಾ ಟೀಸರ್ ಲಾಂಚ್ ಮಾಡೋದಿಕ್ಕೆ ಬಂದಿರುವುದು ಖುಷಿ ಕೊಟ್ಟಿದೆ. ದೇವರಾಜ್ ಸರ್, ಅಮ್ಮ, ಪ್ರಜ್ವಲ್ ಸರ್, ರಾಗಿಣಿ ಅವರು ತುಂಬಾ ಸಪೋರ್ಟ್ ಮಾಡುತ್ತಾರೆ. ಸನ್ ಆಫ್ ಮುತ್ತಣ್ಣ, ಅಪ್ಪ ಮಗನ ಎಮೋಷನ್. ಪ್ರೀತಿ ಹೇಗಿದೆ? ಅಪ್ಪ ಮಗನ ಬಾಂಧವ್ಯವನ್ನು ಚಿತ್ರ ತೋರಿಸುತ್ತದೆ. ಇಡೀ ಕುಟುಂಬ ನೋಡುವಂತಹ ಸಿನಿಮಾ. ನಿಮ್ಮ ಬೆಂಬಲ ನಮ್ಮ ಮೇಲೆ ಇರಲಿದೆ ಎಂದು ತಿಳಿಸಿದರು.

ಕಾಡುವ ‘S/O ಮುತ್ತಣ್ಣ’ ಟೀಸರ್
ಎಮೋಷನ್ ನಿಂದಲೇ ಶುರುವಾಗುವ ಟೀಸರ್ ನಲ್ಲಿ ಅಪ್ಪ ಮಗನ ಬಾಂಧವ್ಯವನ್ನು ಬಹಳ ಸೊಗಸಾಗಿ ಕಟ್ಟಿಕೊಡಲಾಗಿದೆ. 1 ನಿಮಿಷ 46 ಸೆಕೆಂಡ್ ಇರುವ ಟೀಸರ್ ನಲ್ಲಿ ಡೈಲಾಗ್ ಗಳು ಕಾಡುತ್ತವೆ. ಪ್ರಣಂ ದೇವರಾಜ್ ಮಗನಾಗಿ, ರಂಗಾಯಣ ರಘು ಅಪ್ಪನಾಗಿ ಅಮೋಘವಾಗಿ ಅಭಿನಯಿಸಿದ್ದಾರೆ. ಅಕ್ಷರ ಕಲಿಸುವ ಅಪ್ಪ ಪ್ರತಿ ಹೆಜ್ಜೆಯಲ್ಲಿಯೂ ಜೊತೆಯಾಗುವ ಕ್ಯಾಪ್ಟನ್ ಆಗಿ ರಂಗಾಯಣ ರಘು ಇಷ್ಟವಾಗ್ತಾರೆ. ಅಪ್ಪನನ್ನು ತನ್ನ ಪ್ರಾಣಕ್ಕೂ ಮಿಗಿಲಾಗಿ ಪ್ರೀತಿಸುವ ಮಗನಾಗಿ ಪ್ರಣಂ ಗಮನಸೆಳೆಯುತ್ತಾರೆ.

ಶ್ರೀಕಾಂತ್‌ ಹುಣಸೂರು ‘S/O ಮುತ್ತಣ್ಣ’ನಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಪ್ರಣಂಗೆ ನಾಯಕಿಯಾಗಿ ದಿಯಾ ಖ್ಯಾತಿಯ ಖುಷಿ ರವಿ ಅಭಿನಯಿಸಿದ್ದಾರೆ. ರಂಗಾಯಣ ರಘು ನಾಯಕನ ತಂದೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಸುಚೇಂದ್ರ ಪ್ರಸಾದ್‌, ಗಿರೀಶ್‌ ಶಿವಣ್ಣ, ತಬಲ ನಾಣಿ, ಶ್ರೀನಿವಾಸ್‌ ಪ್ರಭು, ಸುಧಾ ಬೆಳವಾಡಿ, ಅರುಣ್‌ ಚಕ್ರವರ್ತಿ ಮುಂತಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಪುರಾತನ‌ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ SRK ಫಿಲ್ಮ್ಸ್ ಜೊತೆಗೂಡಿ ಈ ಸಿನಿಮಾ ನಿರ್ಮಾಣವಾಗಿದೆ. ಸಚಿನ್ ಬಸ್ರೂರು ಸಂಗೀತವಿರುವ ‘s/o ಮುತ್ತಣ್ಣ’ ಸಿನಿಮಾದ ಹಾಡುಗಳಿಗೆ ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor