ಫೆಬ್ರವರಿ ಹತ್ತರಂದು ರಾಜ್ಯಾದ್ಯಂತ ಬರಲಿದೆ ಹೊಸ ಚಿತ್ರ “ರೂಪಾಯಿ”
ವಿಜಯ್ ಜಗದಾಲ್ ನಿರ್ದೇಶಿಸಿ, ನಾಯಕನಾಗೂ ನಟಿಸಿರುವ “ರೂಪಾಯಿ” ಚಿತ್ರ ಫೆಬ್ರವರಿ 10 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಖ್ಯಾತ ನಟ ಡಾಲಿ ಧನಂಜಯ ಇತ್ತೀಚೆಗೆ “ರೂಪಾಯಿ” ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿ, ಚಿತ್ರ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದರು.

ಈಗಾಗಲೇ ಆನಂದ್ ಆಡಿಯೋ ಮೂಲಕ ಚಿತ್ರದ ಎರಡು ಹಾಡುಗಳು ಬಿಡುಗಡೆಯಾಗಿದೆ. ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗಿ, ಜನರ ಮೆಚ್ಚುಗೆಯನ್ನು ಪಡೆದುಕೊಂಡಿದೆ.
“ರೂಪಾಯಿ” ಮಹತ್ವ ಸಾರುವ ಈ ಚಿತ್ರದಲ್ಲಿ, ಕಾಮಿಡಿ, ಸೆಂಟಿಮೆಂಟ್ ಎಲ್ಲವೂ ಇದೆ. ಐದು ಪ್ರಮುಖ ಪಾತ್ರಗಳ ಸುತ್ತ ಈ ಕಥೆ ಸಾಗುತ್ತದೆ. ವಿಜಯ್ ಜಗದಾಲ್, ಕೃಷಿ ತಾಪಂಡ, ಯಶ್ವಿಕ್, ಚಂದನ ರಾಘವೇಂದ್ರ , ರಾಮ ಚಂದನ್, ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.

ವಿವಿಧ್ ಸಿನಿಮಾಸ್ ಲಾಂಛನದಲ್ಲಿ ಪ್ರಮೋದ್ ಶೆಟ್ಟಿ, ಮೋಹನ್ ಜುನೇಜ, ರಾಕ್ ಲೈನ್ ಸುಧಾಕರ್ , ಅನಿಲ್ ಕುಮಾರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ವಿವಿಧ್ ಸಿನಿಮಾಸ್ ಲಾಂಛನದಲ್ಲಿ ಮಂಜುನಾಥ್ ಎಂ, ಹರೀಶ್ ಬಿ.ಕೆ ಮತ್ತು ವಿನೋದ್ ಎನ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಆರ್ ಡಿ ನಾಗಾರ್ಜುನ ಛಾಯಾಗ್ರಹಣ, ಆನಂದ್ ರಾಜವಿಕ್ರಮ್ ಸಂಗೀತ ನಿರ್ದೇಶನ ಹಾಗೂ ಶಿವರಾಜ್ ಮೇಹು ಸಂಕಲನವಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ಸುನಿವಿನಿ.