RP movie teaser revealed. ಆರ್.ಪಿ. ಚಿತ್ರದ ಶೀರ್ಷಿಕೆ ಅನಾವರಣ ಟೀಸರ್ ಬಿಡುಗಡೆ.
ಹೊಸ ಪ್ರತಿಭೆಗಳ ಆರ್‌ಪಿ
ಚಂದನವನಕ್ಕೆ ಹೊಸ ಪ್ರತಿಭೆಗಳು ಬರುತ್ತಿರುವುದು ಆರೋಗ್ಯಕರ ಬೆಳವಣಿಗೆಯಾಗುತ್ತಿದೆ. ಆ ಸಾಲಿಗೆ ’ಆರ್‌ಪಿ’ ಸಿನಿಮಾವೊಂದು ಸೇರ್ಪಡೆಯಾಗಿದೆ. ಅಡಿಬರಹದಲ್ಲಿ ಬ್ಲಾಕ್ ಅಂಡ್ ವೈಟ್ ಅಂತ ಹೇಳಿಕೊಂಡಿದೆ. ಪ್ರಚಾರದ ಮೊದಲ ಹಂತವಾಗಿ 1.02 ನಿಮಿಷದ ಟೈಟಲ್ ಟೀಸರ್‌ನ್ನು ಮಧುಸೂದನಾನಂದಪುರಿ ಪೀಠಾದಿಕಾರಿ ಡಾ.ಆಚಾರ್ಯ ಮಹಾಮಂಡಲೇಶ್ವರ ಲೋಕಾರ್ಪಣೆಗೊಳಿಸಿ ತಂಡಕ್ಕೆ ಒಳ್ಳೆಯದಾಗಲೆಂದು ಆರ್ಶಿವಾದ ಮಾಡಿದರು.

ತುಣುಕುಗಳಲ್ಲಿ ಗರುಡವೊಂದು ಹಾರಿ ಬರುವುದು. ಸಾಕ್ಷತ್ ಶಿವನ ಪಾದ, ತ್ರಿಶೂಲವೊಂದು ಹಿಡಿದುಕೊಂಡಿರುವುದು. ಬೆಂಕಿ ಉಂಡೆಯಂತೆ ಶೀರ್ಷಿಕೆ ಕಾಣುವುದು. ಇದಕ್ಕೆ ತಕ್ಕಂತೆ ಹಿನ್ನಲೆ ಸಂಗೀತ ಕುತೂಹಲ ಮೂಡಿಸುತ್ತದೆ.

ಡಿಎಲ್ ಗ್ರೂಪ್ಸ್ ಬ್ಯಾನರ್, ಕಬ್ಬಾಳಮ್ಮ ಕ್ರಿಯೇಶನ್ ಅಡಿಯಲ್ಲಿ ಯುವರಾಜ್.ಎಸ್ ಸಿನಿಮಾಕ್ಕೆ ಕಥೆ,ಚಿತ್ರಕಥೆ,ಸಾಹಿತ್ಯ,ನಿರ್ದೇಶನ, ಬಂಡವಾಳ ಹೂಡುವ ಜತೆಗೆ ಒಂದು ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಇವರಿಗೆ ನಿರ್ದೇಶನದಲ್ಲಿ ಸಹಕಾರಿಯಾಗಿ ನೃತ್ಯ ಸಂಯೋಜಕ ರಾಜ್ ದೇವ್ ಇರುತ್ತಾರೆ. ಶೀಲಾ ನಾಯ್ಡು, ರಘು.ಡಿ, ಅನಿಲ್ ಗೌಡ್ರು,, ಬಿ.ನಾಗೇಶ್, ಜಿ.ಲಿಂಗೇಶ್, ದೇವರಾಜು, ರಾಘವೇಂದ್ರಪ್ರಸಾದ್, ಶ್ರೀನಿವಾಸುಲು (ಬಳ್ಳಾರಿ) ಇವರುಗಳು ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ಶ್ರೀನಿವಾಸ್.ಎನ್.ಪಿ, ಕಲ್ಪನ.ಆರ್ ಸಹ ನಿರ್ಮಾಪಕರುಗಳಾಗಿ ಗುರುತಿಸಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕರು ಗೆಳಯ ರಾಘವೇಂದ್ರ ಪ್ರಸಾದ್ ಅವರ ಜೀವನದಲ್ಲಿ ನಡೆದ, ನಡೆಯುತ್ತಿರುವ ಒಂದಷ್ಟು ಘಟನೆಗಳನ್ನು ಹೆಕ್ಕಿಕೊಂಡು ಚಿತ್ರಕಥೆ ಸಿದ್ದಪಡಿಸಲಾಗಿದೆ. ಅದಕ್ಕಾಗಿ ಆರ್‌ಪಿ ಎಂಬುದಾಗಿ ಟೈಟಲ್ ಇಡಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಪ್ರಕೃತಿ ನಾಶವಾಗುತ್ತಿದ್ದರೂ ಅದನ್ನು ನಾವು ಮರೆಯುತ್ತಿದ್ದೇವೆ. ಇದು ಶುರುವಾಗುವುದು ಹಗಲಲ್ಲಿ. ರಾತ್ರಿ ಇದಕ್ಕೆ ವಿರುದ್ದವಾಗಿ ಕೆಟ್ಟದು ನಡೆಯುತ್ತದೆ.

ಇಷ್ಟ ಮಾತ್ರ ಹೇಳಬಹುದು. ತಾರಾಗಣ, ತಂತ್ರಜ್ಞರ ಆಯ್ಕೆ ಪ್ರಕ್ರಿಯೆ ಶುರುವಾಗಿದೆ. ಮೊದಲ ಹಂತದಲ್ಲಿ ಬಾಲ ನಟರುಗಳಾದ ನಿಖಿಲ್.ಆರ್. ಮತ್ತು ದಕ್ಷಿತ್‌ಗೌಡ ಆಯ್ಕೆಯಾಗಿದ್ದಾರೆ. ಎಲ್ಲವನ್ನು ಮುಂದಿನ ದಿನಗಳಲ್ಲಿ ತಿಳಿಸುವುದಾಗಿ ಹೇಳಿಕೊಂಡರು. ಅಂದ ಹಾಗೆ ಸಿನಿಮಾವು ಕನ್ನಡ ಸೇರಿದಂತೆ ತಮಿಳು, ತೆಲುಗು, ಹಿಂದಿ ಹಾಗೂ ಮಲೆಯಾಳಂ ಭಾಷೆಗಳಲ್ಲಿ ಸಿದ್ದಗೊಳ್ಳುತ್ತಿದೆ.