Royal movie song released in siddaganga Matha. ಸಿದ್ದಗಂಗಾ ಶ್ರೀಗಳ ಸನ್ನಿದಿಯಲ್ಲಿ ರಿಲೀಸ್ ಆಯ್ತು ರಾಯಲ್ ಟಾಂಗು ಟಾಂಗು ಹಾಡು
ಟೈಟಲ್ ಅಷ್ಟೇ ಅಲ್ಲ ಪ್ರಮೋಷನ್ ನಲ್ಲೂ ನಾವು ರಾಯಲ್ ಅಂತೇಳಿ, ರಾಯಲ್ ಸಿನಿಮಾದ ಪ್ರಮೋಷನ್ ಅನ್ನ ಚಿತ್ರತಂಡ ಅದ್ಧೂರಿಯಾಗಿ ಮಾಡ್ತಿದೆ. ದಿನಕರ್ ತೂಗುದೀಪ ನಿರ್ದೇಶನದ, ಜಯಣ್ಣ ಭೋಗೇಂದ್ರ ನಿರ್ಮಾಣದ ರಾಯಲ್ ಚಿತ್ರದ 2ನೇ ಹಾಡು ಇತ್ತೀಚೆಗಷ್ಟೇ ಬಿಡುಗಡೆಯಾಯಿತು. ಸಾಂಗ್ ಬಿಡುಗಡೆಗೂ ಮುನ್ನ ಇಡೀ ಚಿತ್ರತಂಡ ತುಮಕೂರು ಸಿದ್ದಗಂಗೆ ಮಠಕ್ಕೆ ಹೋಗಿ ಗೋವಿಗೆ ನಮಸ್ಕರಿಸಿ, ಶ್ರೀಗಳ ಪಾದ ಸ್ಪರ್ಶಿಸಿ ರಾಯಲ್ ಆಗಿ ಪ್ರಾರ್ಥನೆ ಮಾಡಿದ್ರು.

ವಿಶೇಷವಾಗಿ ರಾಯಲ್ ಸಿನಿಮಾದ ಟಾಂಗು ಟಾಂಗು ಹಾಡನ್ನು ವಿದ್ಯಾರ್ಥಿಗಳಿಂದಲೇ ರಿಲೀಸ್ ಮಾಡಿದ್ದು.. ಹೌದು ತುಮಕೂರಿನ ಧನ ಪ್ಯಾಲೇಸ್ ನಲ್ಲಿ ಕಾಲೇಜು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಟಾಂಗ್ ಟಾಂಗ್ ಸಾಂಗ್ ರಿಲೀಸ್ ಆಗಿದ್ದು, ಸಾಂಗ್ ನ ಕ್ರೇಜ್ ಯಾವ ಮಟ್ಟಕ್ಕೆ ಇತ್ತು ಅಂತಂದ್ರೆ, ವಿದ್ಯಾರ್ಥಿಗಳು ರಾಯಲ್ ಚಿತ್ರದ ನಾಯಕ ನಟ ವಿರಾಟ್ ಹಾಗೂ ನಟಿ ಸಂಜನಾ ಆನಂದ್ ಜೊತೆ ಸಖತ್ ಸ್ಟೆಪ್ಸ್ ಹಾಕಿ ಕುಣಿದು ಕುಪ್ಪಳಿಸಿದ್ರು.
ಇದೇ ವೇಳೆ ನಿರ್ದೇಶಕ ದಿನಕರ್ ತೂಗುದೀಪ, ಮ್ಯೂಸಿಕ್ ಡೈರೆಕ್ಟರ್ ಚರಣ್ ರಾಜ್. ಟಾಂಗು ಟಾಂಗು ಹಾಡಿನ ಲಿರಿಸಿಸ್ಟ್ ಕವಿರಾಜ್ ಕೂಡ ಉಪಸ್ಥಿತರಿದ್ರು.

ಇನ್ನೂ ವೇದಿಕೆಯಲ್ಲಿ ನಿರ್ದೇಶಕ ದಿನಕರ್ ತೂಗುದೀಪ ಮಾತನಾಡಿ, ನಮಗ್ಯಾವುದೇ ಸಮಸ್ಯೆ ಇರಲಿ ಏನೇ ಇರಲಿ ಯಾವಾಗಲೂ ಸಪೋರ್ಟ್ ಮಾಡೋ ಸೆಲೆಬ್ರೆಟೀಸ್ ಗೆ ನಮ್ಮ ಫ್ಯಾಮಿಲಿ & ದರ್ಶನ್ ಮೇಲಿನ ಸಪೋರ್ಟ್ ಹೀಗೆ ಇರಲಿ ನಿಮ್ಮ ಪ್ರೀತಿಗೆ ನಾವು ಯಾವಾಗಲೂ ಚಿರೃಣಿ. ನಾವೇನೆ ಹೆಸರು ಮಾಡಿದ್ರು ಅದು ನಿಮ್ಮಿಂದ.

ಇಷ್ಟು ದಿನ ನಾನೆಲ್ಲೂ ಹೋಗಿರಲಿಲ್ಲ ಕಾರಣ ಪರಿಸ್ಥಿತಿ. ಆದ್ರೆ ನನ್ನ ನಂಬಿ ಜಯಣ್ಣ ಭೋಗಣ್ಣ ದುಡ್ಡು ಹಾಕಿದ್ದಾರೆ ಇದು ನನ್ನ ಜವಾಬ್ದಾರಿ ಅದಕ್ಕಾಗಿ ಈ ವೇದಿಕೆಗೆ ಬಂದಿದ್ದೀನಿ. ನಮ್ಮ ಸಿನಿಮಾ ಮಾತ್ರವಲ್ಲ ಎಲ್ಲ ಕನ್ನಡ ಚಿತ್ರಗಳಿಗೂ ಹೀಗೆ ಸಪೋರ್ಟ್ ಮಾಡಿ. ಜೊತೆ ಜೊತೆಯಲಿ, ನವಗ್ರಹ, ಸಾರಥಿ ನಾನ್ ಹಿಟ್ ಮಾಡಿಲ್ಲ. ನಂಗೆ ಒಳ್ಳೆ ಸಿನಿಮಾವಷ್ಟೆ ಮಾಡೋಕೆ ಗೊತ್ತು ಹಿಟ್ ಮಾಡೋಕೆ ಗೊತ್ತಿಲ್ಲ. ಅಭಿಮಾನಿಗಳೇ ಹಿಟ್ ಮಾಡಿದ್ದು.

ನಿಮಗೆ ಬೇಕಿರೋ ಅಷ್ಟು ಎಲಿಮೆಂಟ್ಸ್ ರಾಯಲ್ ನಲ್ಲಿದೆ ಈ ಸಿನಿಮಾ ಹಿಂದಿನ ಶಕ್ತಿ ಜಯಣ್ಣ ಭೋಗೇಂದ್ರ. ನನ್ನ ನಿರೀಕ್ಷೆಯನ್ನ ವಿರಾಟ್ ಸಂಜನಾ ಪೂರೈಸಿದ್ದಾರೆ.

ನಂತರ ಟಾಂಗು ಟಾಂಗು ಲಿರಿಸಿಸ್ಟ್ ಕವಿರಾಜ್ ಮಾತನಾಡಿ, ಇದು ಪಕ್ಕಾ ರಾಯಲ್ ಸಾಂಗ್ ಕಾರಣ ಡೈರೆಕ್ಟರ್ ರಾಯಲ್, ಮ್ಯೂಸಿಕ್ ಡೈರೆಕ್ಟರ್ ಕೂಡ ಪಕ್ಕಾ ರಾಯಲ್. ಜಯಣ್ಣ ಫಿಲ್ಮ್ಸ್ ಕೂಡ ಪ್ರೊಡಕ್ಷನ್ ನಲ್ಲಿ ರಾಯಲ್. ಚರಣ್ ರಾಜ್ ಬೆಳವಣಿಗೆ ಖುಷಿ ಕೊಡುತ್ತೆ. ನನ್ನ ಆಪ್ತಮಿತ್ರ ದಿನಕರ್ ತೂಗುದೀಪ. ಇನ್ನೂ ಮ್ಯೂಸಿಕ್ ಡೈರೆಕ್ಟರ್ ಚರಣ್ ರಾಜ್ ವೇದಿಕೆ ಮೇಲೆ ಮಾತನಾಡಿ ಎಲ್ಲರಿಗೂ ಧನ್ಯವಾದ ತಿಳಿಸಿದ್ರು.

ಇದೇ ವೇಳೆ ನಟ ವಿರಾಟ್ ಹಾಗೂ ನಟಿ ಸಂಜನಾ ಮಾತನಾಡಿ, ತುಮಕೂರು ಪ್ರೀತಿಗೆ ನಾ ಚಿರಋಣಿ. ಜಯಣ್ಣ ಬೋಗಣ್ಣ ಸರ್ ತುಂಬಾ ಖರ್ಚು ಮಾಡಿ ಈ ಹಾಡು ಮಾಡಿದ್ದಾರೆ.. ಎಲ್ಲರ ಸಪೋರ್ಟ್ ಹೀಗೆ ಇರಲಿ ಅಂದ್ರು.
