Rishabh Shetty adopted Kiradi government school. ಹುಟ್ಟೂರು ಕೆರಾಡಿಯ ಸರ್ಕಾರಿ ಶಾಲೆಯನ್ನು ದತ್ತು ಪಡೆದ ನಟ ರಿಷಬ್ ಶೆಟ್ಟಿ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನೆಮಾ ಮೂಲಕ ಕನ್ನಡ ಶಾಲೆಗಳ ಉಳಿವಿನ ಬಗ್ಗೆ ಜಾಗೃತಿಮೂಡಿಸಿ ಹಲವಾರು ಕನ್ನಡ ಶಾಲೆಗಳ ಉಳಿವಿಗೆ ಕಾರಣನಾಗಿರುವ ನಟ ನಿರ್ದೇಶಕ ರಿಷಭ್ ಶೆಟ್ಟಿ ಕೇವಲ ಸಿನೆಮಾದಲ್ಲಿ ಮಾತ್ರವಲ್ಲದೇ ಕನ್ನಡ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ರಿಷಭ್ ಶೆಟ್ಟಿ ಫೌಂಡೇಶನ್ ಮೂಲಕ ಅಳಿವಿನಂಚಿನಲ್ಲಿದ್ದ ತಾನು ಓದಿದ ಕೆರಾಡಿಯ ಸರ್ಕಾರಿ ಕನ್ನಡ ಶಾಲೆಯನ್ನು ದತ್ತು ಪಡೆದಿದ್ದಾರೆ.

ಕೆರಾಡಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಶಾಲೆಗೆ ಭೇಟಿನೀಡಿ ಕನ್ನಡ ಶಾಲೆ ಉಳಿಸುವ ಮತ್ತು ಬೆಳೆಸುವ ತನ್ನ ಕನಸನ್ನು ಬಿಚ್ಚಿಟ್ಟರು
ಈ ಸಂದರ್ಭದಲ್ಲಿ ಊರ ಪ್ರಮುಖರು,ಹಿರಿಯರು ಉಪಸ್ಥಿತರಿದ್ದು ಹುಟ್ಟೂರಿನ ಶಾಲೆಯ ದತ್ತು ರಿಷಭ್ ಶೆಟ್ಟಿ ಯವರನ್ನು ಅಭಿನಂದಿಸಿದರು