Ravike Prasanga melody song Released. ಗುರುಕಿರಣ್ ಅವರಿಂದ ಬಿಡುಗಡೆಯಾಯಿತು “ರವಿಕೆ ಪ್ರಸಂಗ”ದ ಮೊಲೋಡಿ ಹಾಡು

ಗುರುಕಿರಣ್ ಅವರಿಂದ ಬಿಡುಗಡೆಯಾಯಿತು “ರವಿಕೆ ಪ್ರಸಂಗ”ದ ಮೊಲೋಡಿ ಹಾಡು

ಮೆಲೋಡಿ ಹಾಡುಗಳು ಎಂದಿಗೂ ಜನರ‌ ಜೀವನದ ಅವಿಭಾಜ್ಯ ಅಂಗವಾಗಿರುತ್ತವೆ. ಎಲ್ಲಾ ಕಾಲದಲ್ಲೂ ಎಲ್ಲರನ್ನೂ ಆಕರ್ಷಿಸುವ ಹಲವಾರು ಮೆಲೋಡಿ ಹಾಡುಗಳ ಗುಂಪಿಗೆ “ರವಿಕೆ ಪ್ರಸಂಗ” ಚಿತ್ರದ
“ಮನಸಲಿ ಜೋರು ಕಲರವ” ಎಂಬ ಅದ್ಭುತವಾದ ಮೆಲೋಡಿ ಹಾಡನ್ನು ನೂರಾರು ಎವರ್ ಗ್ರೀನ್ ಸೂಪರ್ ಹಿಟ್ ಮೆಲೋಡಿ ಹಾಡುಗಳನ್ನು ನೀಡಿರುವ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಅವರು ಬಿಡುಗಡೆ‌ ಮಾಡಿದ್ದಾರೆ.
ಈ ವರ್ಷದ ಅತ್ಯುತ್ತಮ ಮೆಲೋಡಿ ಹಾಡುಗಳ ಪಟ್ಟಿಯಲ್ಲಿ ಅಗ್ರಸ್ಥಾನ‌ ಪಡೆಯುವ ಎಲ್ಲಾ ಅಂಶಗಳನ್ನು ಹೊಂದಿರುವ ಈ ಹಾಡಿಗೆ ಕಿರಣ್ ಕಾವೇರಪ್ಪ ಅವರ ಅದ್ಭುತ ಸಾಹಿತ್ಯ, ಮಾನಸ ಹೊಳ್ಳ ಅವರು ಮಧುರವಾದ ಧ್ವನಿ ಹಾಗೂ ವಿನಯ್ ಶರ್ಮಾ ಅವರ ಇಂಪಾದ ಸಂಗೀತ ಇದೆ.

ಸಂತೋಷ್ ಕೊಡಂಕೇರಿ ಅವರ ಚಿತ್ರಕಥೆ-ನಿರ್ದೇಶನದಲ್ಲಿ, ಪಾವನ ಸಂತೋಷ್ ಅವರ ಕಥೆ-ಸಂಭಾಷಣೆ ಇರುವ “ರವಿಕೆಪ್ರಸಂಗ” ಚಿತ್ರವನ್ನು “ದೃಷ್ಟಿ ಮಿಡಿಯಾ & ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿಲಾಗಿದೆ. ಚಿತ್ರದ ಎಲ್ಲಾ ಕೆಲಸಗಳು ಮುಕ್ತಾಯವಾಗಿದ್ದು ಬಿಡುಗಡೆಯ ಹೊಸ್ತಿಲಲ್ಲಿ ಜನರನ್ನು ರಂಜಿಸಲಿದೆ.

ಗೀತಾಭಾರತಿ ಭಟ್, ಸುಮನ್ ರಂಗನಾಥ್, ರಾಕೇಶ್ ಮಯ್ಯ, ಸಂಪತ್ ಮೈತ್ರೇಯ, ಕೃಷ್ಣಮೂರ್ತಿ ಕವತಾರ್, ಪದ್ಮಜಾ ರಾವ್, ರಘು ಪಾಂಡೇಶ್ವರ್, ಪ್ರವೀಣ್ ಅಥರ್ವ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor