Rani movie review. “ರಾನಿ” ಚಿತ್ರದ ವಿಮರ್ಶೆ ರಾನಿ ಒಂದು ಸೃಜನಾತ್ಮಕ ಕಲ್ಪನೆಯ ಚಿತ್ರ.
ಚಿತ್ರ: ರಾನಿ
ನಿರ್ಮಾಣ : ಸ್ಟಾರ್ ಕ್ರಿಯೇಷನ್ಸ್ ಬ್ಯಾನರ್
ನಿರ್ಮಾಪಕರು : ಚಂದ್ರಕಾಂತ ಪೂಜಾರಿ, ಉಮೇಶ್ ಹೆಗ್ಡೆ
ನಿರ್ದೇಶನ: ಗುರುತೇಜ್ ಶೆಟ್ಟಿ
ಸಂಗೀತ – ಮಣಿಕಾಂತ್ ಕದ್ರಿ, ಸಚಿನ್ ಬಸ್ರೂರ್
ಛಾಯಾಗ್ರಹಣ – ರಾಘವೇಂದ್ರ ಬಿ. ಕೋಲಾರ.
ತಾರಾಗಣ: ಕಿರಣ್ ಕುಮಾರ್, ಯಶ್ ಶೆಟ್ಟಿ, ಸಮೀಕ್ಷಾ ಅಪೂರ್ವ, ರಾಧ್ಯಾ, ಉಗ್ರಂ ಮಂಜು, ಉಗ್ರಂ ರವಿ, ಮೈಕೋ ನಾಗರಾಜ್, ಬಿ. ಸುರೇಶ್, ಕರಿಸುಬ್ಬು ಮುಂತಾದವರು.
ರೇಟಿಂಗ್ – 3.5/5.

ರಾನಿ ಒಂದು ಸೃಜನಾತ್ಮಕ ಕಲ್ಪನೆಯ ಚಿತ್ರ.
ಸಿನಿಮಾ ಪ್ರಾರಂಭದಲ್ಲೇ ಅಹಿಂಸಾ ಪರಮೋಧರ್ಮ ಎನ್ನುವುದನ್ನು ನಿರ್ದೇಶಕರು ಒಂದು ಗೀತೆಯೊಂದಿಗೆ ಚಿತ್ರದ ಕಥೆಯನ್ನು ಪ್ರಾರಂಭ ಮಾಡಿದ್ದಾರೆ. ಹಾಗೆಯೇ ಚಿತ್ರದ ಕೊನೆಯ ದೃಶ್ಯವನ್ನು ಹಿಂಸಾ ಪರಮಕರ್ಮ, ಪ್ರೇಮ ಮಾಯಾ ಮರ್ಮ ಅನ್ನೋದನ್ನ ನಿರ್ದೇಶಕರು ಹೇಳಿದ್ದಾರೆ.
ಚಿತ್ರದಲ್ಲಿ ನಿರ್ದೇಶಕ ಗುರುದೇವ್ ಶೆಟ್ಟಿಯವರ ಸೃಜನಶೀಲತೆ ಎದ್ದು ಕಾಣುತ್ತದೆ ಮತ್ತು ಕೆಲವು ಕಡೆ ಕಾಡುತ್ತದೆ.
ಎಲ್ಲಾ ಚಿತ್ರಗಳಲ್ಲಿ ಬಹುತೇಕ ನಾಯಕನ ಬಿಲ್ಡಪ್ ಎಂಟ್ರಿ ಇರುತ್ತದೆ. ಆದರೆ ಇಲ್ಲಿ ಮೊದಲು
ಹಾಡಿನ ಮೂಲಕ ಚಿತ್ರದ ಕಥಾ ನಾಯಕಿಯ ಎಂಟ್ರಿಯೊಂದಿಗೆ ಪ್ರಾರಂಭಿಸಿದ್ದಾರೆ.

ಒಬ್ಬ ನಟನಾಗಿ ಸಿನಿಮಾದಲ್ಲಿ ಹೆಸರು ಮಾಡಿ ಬದುಕು ಕಟ್ಟಿಕೊಳ್ಳಲು ಬರುವ ನಟನಾಗಿ ಕಿರಣ್ ಕುಮಾರ್ ಕೆಲವು ದುರುಳರ ಷಡ್ಯಂತರಗಳಿಂದ ಬಣ್ಣ ಹಚ್ಚಬೇಕಿದ್ದ ಮುಖಕ್ಕೆ ರಕ್ತ ಮೆತ್ತಿಕೊಳ್ಳುತ್ತದೆ. ಹಾಗೆಯೇ ನಾಯಕಿ ಕೂಡ ನಟಿಯಾಗ ಬಂದವಳು ಈ ಷಡ್ಯಂತರಗಳ ಕೇಂದ್ರ ಬಿಂದುವಾಗಿ ಚಿತ್ರದ ಪರದೆಯಿಂದ ಮಾಯವಾಗುತ್ತಾಳೆ ನಂತರ ಅವಳು ಏನಾದಳು ಎನ್ನುವ ನಿಗೂಡತೆಯನ್ನು ನಿರ್ದೇಶಕರು ಚಿತ್ರದ ಕೊನೆಯವರೆಗೂ ಕಾಯ್ದುಕೊಂಡಿದ್ದಾರೆ. ಚಿತ್ರದಲ್ಲಿ ಇಬ್ಬರು ನಾಯಕಿಯರು, ಒಬ್ಬಾಕೆ ಮುಖಕ್ಕೆ ಬಣ್ಣ ಹಚ್ಚಿ ಕಲಾವಿದೆಯಾಗಲು ಬಂದವಳು (ರಾಧ್ಯ) ಮತ್ತೊಬ್ಬಾಕೆ ಕುಂಚಗಳ ಮೂಲಕ ಕಲ್ಪನೆಗಳಿಗೆ ಬಣ್ಣ ಹಚ್ಚಿ ಕಲಾವಿದೆಯಾಗ ಬಂದವಳು. (ಸಮೀಕ್ಷಾ).ಇಬ್ಬರ ನಡುವೆಯೂ ಪೊಲೀಸ್ ಅಧಿಕಾರಿ ಜಾಹ್ನವಿ ರಾನಿಗೆ ಸಹಕರಿಸುವ ಕುತೂಹಲವನ್ನು ನಿರ್ದೇಶಕರು ಕಾಯ್ದಿರಿಸಿಕೊಂಡಿದ್ದಾರೆ ಇವರೆಲ್ಲರ ಮದ್ಯೆ ಬಣ್ಣ ಮತ್ತು ರಕ್ತದ ಜೊತೆ ಬದುಕುವ ಅನಿವಾರ್ಯತೆ ಸಿಲುಕುವ ನಾಯಕ. ಈ ತ್ರಿಕೋನ ಪ್ರೇಮ ಮತ್ತು ಬಣ್ಣದ ಕಥೆಯೇ “ರಾನಿ”

ಕಿರಣ್ ಕುಮಾರ್ ಕಿರುತೆರೆ ಯಿಂದ ಬೆಳ್ಳಿತೆರೆಯ ವರೆಗೆ ನಡೆದು ಬಂದ ಹೆಜ್ಜೆಗಳು ಗಮನಾರ್ಹವಾಗಿವೆ. ತನ್ನ ಬಣ್ಣದ ಕನಸ್ಸಿನ ದಾರಿಗೆ ತಾನೇ ಮಾದರಿಯಾಗುವಂತೆ ನಡೆದು ಬರುತ್ತಿದ್ದಾರೆ.
ಈ ಚಿತ್ರದ ಪ್ರಮೋಷನ್ ಗಾಗಿ ಮೊದಲ ಬಾರಿಗೆ ಆಕಾಶದಿಂದ ಜಿಗಿಧು ಚಿತ್ರದ ಶೀರ್ಷಿಕೆ ಅನಾವರಣ ಮಾಡಿ ಸಾಹಸ ಮೆರೆದಿದ್ದರು. ಈಗ ಈ ಚಿತ್ರದಲ್ಲಿ ಬೇರೆಯದೇ ರೀತಿಯ ಪಾತ್ರದಲ್ಲಿ ಸೈ ಎನಿಸಿಕೊಂಡಿದ್ದಾರೆ. ಈ ಚಿತ್ರ ಭಾವನೆಗಳ ಮೇಲೆ ಬಿಂಬಿತವಾಗಿದೆ.

ಏನೂ ತಿಳಿಯಾದ ಸ್ವಚ್ಚ ಮನಸ್ಸಿನ ನಾಯಕ ಷಡ್ಯಂತರಗಳಿಂದ ಭೂಗತಲೋಕಕ್ಕೆ ಎಂಟ್ರಿ ಕೊಡುತ್ತಾನೆ. ಭೂಗತ ಲೋಕಕ್ಕೆ ಒಮ್ಮೆ ಕಾಲಿಟ್ಟರೆ ಅವನು ಮಚ್ಚು ಬಿಟ್ಟರು ಮಚ್ಚು ಅವನನ್ನು ಬಿಡುವುದಿಲ್ಲ ಎನ್ನುವುದನ್ನು ನಿರ್ದೇಶಕರು ಚಿತ್ರದಲ್ಲಿ ಬಿಂಬಿಸಿದ್ದಾರೆ.
ಒಂದು ಸಣ್ಣ ಘಟನೆಯಿಂದ ನಾಯಕನ ಬದುಕಿಗೆ ಆಕಸ್ಮಿಕವಾಗಿ ಎಂಟ್ರಿ ಕೊಡುವ ನಾಯಕಿ ಒಂದೇ ಮನೆಯಲ್ಲಿ ನಾಯಕನ ಜೊತೆಗಿದ್ದರೂ ಬೆರಳು ಸೋಕದಂತೆ ಇರುತ್ತಾರೆ ಇದು ಎರಡು ಸಂಭಂದಗಳ ನಡುವಿನ ಗೌರವದ ಗೌಪ್ಯತೆಯನ್ನು ಕಾಯ್ದುಕೊಂಡಿದೆ.

ನಟಿ ಸಮೀಕ್ಷಾ ತಮ್ಮ ಪಾತ್ರವನ್ನು ಚನ್ನಾಗಿ ನಿಭಾಯಿಸಿದ್ದಾರೆ, ಕೆಸರಿನಲ್ಲಿದ್ದರು ಕಮಲದಂತೆ ಶುದ್ಧವಾದ ಪಾತದರ ಇವರದ್ದಾದರೆ, ಇನ್ನು ರಾಧ್ಯ ರಕ್ತದ ನಡುವೆ ಷಡ್ಯಂತರಗಳ ನಡುವೆ ನರಳುವ ಪಾತ್ರ, ಈಕೆಯೂ ಕೂಡ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ಉಗ್ರಂ ಮಂಜು ಪೋಲೀಸ್ ಇನ್ಸ್ಪೆಕ್ಟರ್ ಪಾತ್ರದಲ್ಲಿ ಕ್ರೌರ್ಯ ಮೆರೆದಿದ್ದಾರೆ.

ಮಣಿಕಾಂತ್ ಕದ್ರಿ ಯವರ ಹಾಡುಗಳು ಹಾಗೂ ಸಚಿನ್ ಬಸ್ರೂರ್ ರವರ ಹಿನ್ನೆಲೆ ಸಂಗೀತ ಗಮನಾರ್ಹವಾಗಿವೆ. ಹಾಗೂ ರಾಘವೇಂದ್ರ ಬಿ. ಕೋಲಾರ ರವರ ಕ್ಯಾಮರಾ ಕೈ ಚಳಕ ಚನ್ನಾಗಿ ಸೆರೆ ಹಿಡಿದಿದೆ.
ರಕ್ತ ಮತ್ತು ಬಣ್ಣಗಳ ಮದ್ಯೆ ಒಂದಷ್ಟು ಬದುಕುಗಳು ಏನಾಗುತ್ತವೆ, ಶಾಂತಿ, ಪ್ರೇಮ, ಪ್ರೀತಿ, ಬಣ್ಣ ಮತ್ತು ನೆತ್ತರ ನಡುವೆ ಏನೆಲ್ಲಾ ತಿರುವುಗಳು ತೆಗೆದುಕೊಳ್ಳುತ್ತದೆ ಎನ್ನುವುದನ್ನು ಹಾಗೂ ಒಂದು ವಿಭಿನ್ನ ಕಥೆಯನ್ನು ಅನುಭವಿ ಸಲು ರಾನಿ ಚಿತ್ರ ನೋಡಬಹುದು.