Rangastala Title Launch Event. ದೇಸಿ ಸೊಗಡಿನ ಮತ್ತೊಂದು ಚಿತ್ರ ರಂಗಸ್ಥಳ ಚಿತ್ರದ ಶೀರ್ಷಿಕೆ ಅನಾವರಣ

ದೇಸಿ ಸೊಗಡಿನ ಮತ್ತೊಂದು ಚಿತ್ರ “ರಂಗಸ್ಥಳ” ಚಿತ್ರದ ಶೀರ್ಷಿಕೆ ಅನಾವರಣ ಇಂದು ನಡೆಯಿತು.

ಅನಘೋರ್ ಮೋಷನ್‌ ಪಿಕ್ಚರ್ಸ್ ಸಂಸ್ಥೆಯ ಮೂಲಕ ರಂಗಸ್ಥಳ ಚಿತ್ರಕ್ಕೆ ಡಾ,, ರೇವಣ್ಣ ಅಲಿಯಾಸ್ ವಾಲಿಬಾಲ್ ರೇವಣ್ಣನವರು ಚಿತ್ರಕ್ಕೆ ಬಂಡವಾಳ ಹೂಡುವ ಮೂಲಕ ನಿರ್ಮಾಪಕರಾಗಿದ್ದಾರೆ. ಜೊತೆಗೆ ಅವರ ಮಕ್ಕಳಾದ ವಿನೋದ್ ಜಯಕೀರ್ತಿ ಹಾಗೂ ವಿನಯ್ ಜಯಕೀರ್ತಿ ಯವರು ಕೂಡ ತಂದೆಯವರ ಜೊತೆಗೆ ಕೈ ಜೋಡಿಸಿ ಸಹ ನಿರ್ಮಾಪಕರಾಗಿದ್ದಾರೆ. ಈ ಚಿತ್ರದ ನಿರ್ಮಾಣ ಸಂಸ್ಥೆ ಸಾಫ್ಟ್‌ವೇರ್ ಸಂಸ್ಥೆಯಂತೆ ಕೆಲಸ ಮಾಡುತ್ತಿದ್ದು, ಸಿನಿಮಾದಲ್ಲಿ ಕೆಲಸ ಮಾಡುತ್ತಿರುವ ಎಲ್ಲರಿಗೂ ಪ್ರತೀ ತಿಂಗಳು ಸಂಬಳ ನೀಡುತ್ತಿದೆ.

ಈಶ್ವರ್ ನಿತಿನ್ ನಿರ್ದೇಶನದಲ್ಲಿ ವಿಲೋಕ್ ರಾಜ್ ನಾಯಕನಟನಾಗಿ ಮನೋಜ್ ಕೆ ಜಯನ್ ಖಳನಟನಾಗಿ ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದಾರೆ.

ಈಗಾಗಲೇ ಚಿತ್ರ ಮೂವತ್ತರಷ್ಟು ಚಿತ್ರೀಕರಣ ಮುಗಿದಿದ್ದು

ಯನೋಷ್ ಒಲಿವೇರ್ ಛಾಯಾಗ್ರಾಹಕರಾಗಿ, ಜೂಡಸ್ಯಾಂಡಿ ಸಂಗೀತ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಮಲಯಾಳಂ ಚಿತ್ರಜಗತ್ತಿನಲ್ಲಿ ಸುಮಾರು 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವಮನೋಜ್ ಕೆ ಜಯನ್ ಎರಡನೇ ಬಾರಿಗೆ ಕನ್ನಡ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಈ ಚಿತ್ರ ಸುಳ್ಯ, ಪುತ್ತೂರು, ಕಾಸರಗೋಡಿನ ಭಾಗದಲ್ಲಿ ನಡೆಯುವಂತ ಕಥೆ ಆ ನೆಲದ ಸೊಗಡಿನ ಕಾಲ್ಪಾನಿಕ ಕಥೆ ಇದಾಗಿದ್ದು ಯಕ್ಷಗಾನ ಕಥೆಯ ನಟನಾಗಿ ಚಿತ್ರದ ನಾಯಕ ಅಭಿನಯಿಸುತಿದ್ದು ಒಂದು ಊರಲ್ಲಿ ನಾಯಕ, ಕಳನಾಯಕ ಇತರ ಪಾತ್ರಗಳು ಕೋಳಿಕಟ್ಟೆ, ಯಕ್ಷಗಾನ, ಭೂತಕೋಲ, ದಕ್ಷಿಣ ಕನ್ನಡದ ನೆಲದ ಕ್ರೀಡೆಗಳು ಇದರಲ್ಲಿ ಮೂಡಿಬಂದಿದೆ

ಈ ಕಥೆ ಉಳಿದವರು ಕಂಡಂತೆ ಚಿತ್ರ ಬಂದ ಸಮಯದಲ್ಲಿ ಹೊಳೆದಿದ್ದು ಸಣ್ಣ ಕಥೆಗಳನ್ನು ದೊಡ್ಡ ಮಠ್ದಲ್ಲಿ ಜನರಿಗೆ‌ ಮುಟ್ಟಿಸಬಹುದು ಎಂಬ ಯೋಚನೆಯೊಂದಿಗೆ ಕಥೆ ಎಣೆದಿದ್ದಾರೆ ನಿರ್ದೇಶಕ ಈಶ್ವರ್ ನಿತಿನ್. ಇದು ಇವರ ಮೊದಲ ಚಿತ್ರ ನಿರ್ದೇಶನ.

ಗಿರ್ಕಿ, ಡಾಟರ್ ಆಫ್ ಪಾರ್ವತಮ್ಮ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿರುವ ವಿಲೋಕ್ ರಾಜ್ ಚಿತ್ರದ ನಾಯಕ ನಟನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನಟನಾಗುವುದರ ಜೊತೆಗೆ ಸಿನಿಮಾ ನಿರ್ಮಾಣದ ಹಲವು ವಲಯಗಳಲ್ಲಿ ಕೆಲಸ ಮಾಡಿ ಹಲವಾರು ವಿಷಯಗಳನ್ನು ತಿಳಿದು ನಂತರ ಸಿನಿಮಾ ಮಾಡಲು ತಯಾರಾಗಿದ್ದಾರೆ. ಚಿತ್ರಕ್ಕಾಗಿ ಮೂರು ತಿಂಗಳಲ್ಲಿ ಯಕ್ಷಗಾನ ಕಲಿತು ಹಾಗೂ ಮಂಗಳೂರಿನ ಶೈಲಿಯಲ್ಲಿ ಕನ್ನಡ ಕಲಿತು ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ

ಶಿಲ್ಪ ಕಾಮತ್ ಮೊದಲ ಬಾರಿಗೆ ನಿಯಾಗಿ ಬಣ್ಣ ಹಚ್ಚಿದ್ದಾರೆ. ವೈಲ್ಡ್ ಲೈಫ್ ಫೋಟೋಗ್ರಾಫರ್ ಆಗಿ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಹಾಗೂ ಸಂದ್ಯಾ ಅರಕೆರೆ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಕೇರಳದಲ್ಲಿ 30 ವರ್ಷಗಳಿಂದ ನಟನಾಗಿ ಬಣ್ಣಹಚ್ಚಿ ಸುಮಾರು 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಮನೋಜ್ ಕೆ ಜಯನ್ ಮೂರು ಬಾರಿ ಬೆಸ್ಟ್ ಆಕ್ಟರ್ ಪ್ರಶಸ್ತಿ ಪಡೆದಿದ್ದಾರೆ ಕನ್ನಡ ಭಾಷೆ ದೇವಿ ಭಾಷೆ ಡಾ,, ರಾಜಕುಮಾರ್ ರವರು ದೇವರ ಪುತ್ರ ಅವರು ಗಾಯಕನಾಗಿ, ನಾಯಕನಾಗಿ ಅಪಾರ ಸೇವೆಯನ್ನು ಸಲ್ಲಿಸುತ್ತಿದ್ದಾರೆ ನಾನು ಅವರ ದೊಡ್ಡ ಅಭಿಮಾನಿ. ಈ ಚಿತ್ರದಲ್ಲಿ ತುಂಬಾ ಒಳ್ಳೆಯ ಪಾತ್ರ ಇದೆ ಅದಕ್ಕಾಗಿ ಒಪ್ಪಿಕೊಂಡಿದ್ದೇನೆ, ಉಗ್ರ ನರಸಿಂಹ ಚಿತ್ರದಲ್ಲಿ 19 ವರ್ಷಗಳ ಹಿಂದೆ ಕನ್ನಡದಲ್ಲಿ ಅಭಿನಯಿಸಿದ್ದೆ ನಂತರ ಯಾವುದು ನನಗೆ ಒಳ್ಳೆಯ ಕಥೆ ಬಂದಿಲ್ಲ ಅದಕ್ಕಾಗಿ ಈಗ ಒಪ್ಪಿಕೊಂಡಿದ್ದೇನೆ ಎಂದರು.

ಒಟ್ಟಿನಲ್ಲಿ ಚಿತ್ರದ ಚಿತ್ರೀಕರಣ 50%ರಷ್ಟು ಮುಗಿದಿದ್ದು ಇನಗನುಳಿದ ಭಾಗವನ್ನು ಕೆಲವೇ ದಿನಗಳಲ್ಲಿ ಶುರುಮಾಡಲಿದ್ದಾರೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor