Raktaksha movie review ರಕ್ತಾಕ್ಷ ಚಿತ್ರದ ವಿಮರ್ಶೆ
ಚಿತ್ರ: ರಕ್ತಾಕ್ಷ
ರೇಟಿಂಗ್ 3/5.
ನಿರ್ದೇಶನ: ವಾಸುದೇವ ಎಸ್.ಎನ್
ನಿರ್ಮಾಣ: ರೋಹಿತ್
ತಾರಾಗಣ: ರೋಹಿತ್, ವಸಿಷ್ಠ ಸಿಂಹ, ರೂಪಾ ರಾಯಪ್ಪ, ಪ್ರಮೋದ್ ಶೆಟ್ಟಿ ರಚನಾ ದಶರತ್, ಗುರುದೇವ್ ನಾಗರಾಜ್, ಅರ್ಚನಾ ಕೊಟ್ಟಿಗೆ, ಮುಂತಾದವರು
ಈ ಚಿತ್ರ ಪ್ರೇಕ್ಷಕರನ್ನು ಆಗಾಗ
ಒಂದಷ್ಟು ಗೊಂದಲಕ್ಕೆ ದೂಡುತ್ತದೆ.
ಚಿತ್ರದ ನಾಯಕ ಸೈಕೋನಾ, ಹಂತಕನಾ, ಹೀರೋನಾ ಎಂಬ ಪ್ರಶ್ನೆ ಕಾಡುತ್ತದೆ.ಕಥೆಯಲ್ಲಿ ನಾಯಕನ ಪ್ರತೀ ಹೆಜ್ಜೆಯೂ ಬಹಳ ನಿಗೂಢವಾಗಿದೆ.
ಇಲ್ಲಿ ಹೆಣ್ಣು ಮಕ್ಕಳನ್ನ ಯಾರು ಯಾಕಾಗಿ ಕೊಲೆ ಮಾಡುತ್ತಾರೆ
ಎನ್ನುವುದೇ ಗೊತ್ತಾಗೊದಿಲ್ಲ.

‘ರಕ್ತಾಕ್ಷ’ ಒಂದು ಸೇಡಿನ ಹಕ್ಕಿಯ ಕಥೆ. ಇಲ್ಲಿ ಯಾರು, ಯಾರ ಮೇಲೆ ಸೇಡು ತೀರಿಸಿಕೊಳ್ಳುತ್ತಾರೆ ಎನ್ನುವುದೇ ಕಥೆಯ ಮೂಲ ಬಂಡವಾಳ.
ಇಲ್ಲಿ ಕೊಲೆಗಳಾಗುತ್ತವೆ ಆದರೆ ಕೊಲೆ ಮಾಡಿದ್ದು ಯಾರು ಏತಕ್ಕಾಗಿ ಮಾಡುತ್ತಾರೆ ಅನ್ನುವುದೇ ಸಸ್ಪೆನ್ಸ್.
ತಂತ್ರಜ್ಞಾನದ ತಂತ್ರದಿಂದ ಮತ್ತು ಸಾಮಾಜಿಕ ಜಾಲತಾಣಗಳಿಂದ ಹೇಗೆಲ್ಲಾ ಮೋಸ ಹೋಗುತ್ತಾರೆ. ಎಂಬುದನ್ನು ನಿರ್ದೇಶಕರು ಹೇಳುವ ಪ್ರಯತ್ನ ಮಾಡಿದ್ದಾರೆ.

ಈ ಚಿತ್ರದಲ್ಲಿ ಹೊಸ ರೀತಿಯ ಮಾಫಿಯಾವೊಂದರ ಕುರಿತು ಕಥೆ ಎಣೆಯಲಾಗಿದೆ.
ಹಾಗೆಯೇ ಈ ಮಾಫಿಯಾದೊಳಗೆ ಸಿಲುಕಿ ಒದ್ದಾಡುವವರ ಗೋಳನ್ನು ತೊಲಗಿಸುವ ಪ್ರಯತ್ನದಲ್ಲಿ ರಕ್ತಾಕ್ಷ ಹೋರಳಾಡುತ್ತಾನೆ.
ನಟ ರೋಹಿತ್ ಮತ್ತು ನಿರ್ದೇಶಕ ವಾಸುದೇವ ಜೊತೆಯಾಗಿ ಈ ಕಥೆಯನ್ನು ಹೆಣೆದಿದ್ದಾರೆ.
ಚಿತ್ರದಲ್ಲಿ ಆಕ್ಷನ್ ಮತ್ತು ಬ್ಲಡ್ ಶೇಡ್ ಅತಿಯಾಗಿಯೇ ಇದೆ ಎನ್ನಬಹುದು.

ಚಿತ್ರ ಪ್ರೇಕ್ಷಕನನ್ನು ಬೋರ್ ಹೊಡಿಸದೇ ಒಂದೇ ಉಸಿರಲ್ಲಿ ಓಡಿದರು. ಸ್ಕ್ರೀನ್ ಪ್ಲೇ ಇನ್ನು ಸ್ವಲ್ಪ ಹಿಡಿತದಲ್ಲಿರ ಬೇಕಿತ್ತು.
ರೋಹಿತ್ ಮೊದಲ ಪ್ರಯತ್ನದಲ್ಲಿ ಸೈ ಎನಿಸಿಕೊಂಡರು ಇನ್ನಷ್ಟು ಅಭಿನಯದಲ್ಲಿ ಪಳಗಬೇಕಿದೆ.
ಇನ್ನು ಅರ್ಚನಾ ಕೊಟ್ಟಿಗೆ, ರೂಪಾ ರಾಯಪ್ಪ, ರಚನಾ ದಶರಥ್‍ಗೆ ಪ್ರಮೋದ್ ಶೆಟ್ಟಿ ತಮ್ಮ ತಮ್ಮ ಪಾತ್ರವನ್ನು ನಿಭಾಯಿಸಿದ್ದಾರೆ.

ದಾಸ್ ಮೋಡ್ ಅವರ ಹಿನ್ನೆಲೆ ಸಂಗೀತ ಚಿತ್ರದ ಕಥೆಯ ಓಟಕ್ಕೆ ಸಾಥ್ ನೀಡಿದೆ.
ಛಾಯಾಗ್ರಹಣ ಕೂಡ ಸಿನಿಮಾವನ್ನು ತೆರೆಯ ಮೇಲೆ ಕಟ್ಟಿಕೊಡುವಲ್ಲಿ ಸಹಕಾರಿಯಾಗಿದೆ.
ಹೆಸರೇ ಹೇಳುವಂತೆ ರಕ್ತಾಕ್ಷನ ಖದರ್ ನೋಡಲು ಪ್ರೇಕ್ಷಕರು ಚಿತ್ರ ಮಂದಿರಕ್ಕೆ ಬರಬೇಕಿದೆ.