Raju James Bond movie review. “ರಾಜು ಜೇಮ್ಸ್ ಬಾಂಡ್ ಆಗಿ, ಮತ್ತೆ ಬಂದ ಫಸ್ಟ್ ರ‍್ಯಾಂಕ್ ರಾಜು ಕಾಮಿಡಿ ಜೊತೆಗೆ.” ಚಿತ್ರ ವಿಮರ್ಶೆ”
ಚಿತ್ರ ವಿಮರ್ಶೆ – ರಾಜು ಜೇಮ್ಸ್ ಬಾಂಡ್
Rating – 3/5.
ಚಿತ್ರ: ರಾಜು ಜೇಮ್ಸ್ ಬಾಂಡ್
ನಿರ್ಮಾಣ: ಮಂಜುನಾಥ್ ವಿಶ್ವಕರ್ಮ , ಕಿರಣ್ ಭರ್ತೂರ್
ನಿರ್ದೇಶನ: ದೀಪಕ್ ಮಧುವನ ಹಳ್ಳಿ
ಸಂಗೀತ : ಅನೂಪ್ ಸೀಳಿನ್
ಛಾಯಾಗ್ರಹಣ : ಮನೋಹರ್ ಜೋಷಿ
ಸಂಕಲನ : ಅಮೀತ್ ಚವಳ್ಕರ್
ತಾರಾಗಣ : ಗುರುನಂದನ್ , ಮೃದುಲಾ, ಸಾಧು ಕೋಕಿಲ, ಅಚ್ಯುತ್ ಕುಮಾರ್, ಚಿಕ್ಕಣ್ಣ, ರವಿಶಂಕರ್, ಜೈ ಜಗದೀಶ್ ಮುಂತಾದವರು ತಾರಾಬಳಗದಲ್ಲಿದ್ದಾರೆ.

ಮಂಜುನಾಥ್ ವಿಶ್ವಕರ್ಮ ಹಾಗೂ ಕಿರಣ್ ಭರ್ತೂರ್ ನಿರ್ಮಾಣದ, ದೀಪಕ್ ಮಧುವನಹಳ್ಳಿ ನಿರ್ದೇಶನದ ಹಾಗೂ “ಫಸ್ಟ್ ರ‍್ಯಾಂಕ್ ರಾಜು” ಖ್ಯಾತಿಯ ಗುರುನಂದನ್ ನಾಯಕರಾಗಿ ನಟಿಸಿರುವ “ರಾಜು ಜೇಮ್ಸ್ ಬಾಂಡ್ ” ಚಿತ್ರ ಪ್ರೇಮಿಗಳ ದಿನವಾದ ಇಂದು ರಾಜ್ಯದಾದ್ಯದಂತ ಬಿಡುಗಡೆಯಾಗಿದೆ.
ನಾಯಕ ನಟನಾಗಿ ಗುರು ನಂದನ್ ಹಾಗೂ ನಾಯಕಿಯಾಗಿ ಮೃದುಲ ಮುಖ್ಯ ಭೂಮಿಕೆಯಲ್ಲಿ ಪಾತ್ರ ನಿರ್ವಹಿಸಿದ್ದಾರೆ.
ನಟ ಗುರುನಂದನ್ ರವರಿಗೆ ಫಸ್ಟ್ ರಾಂಕ್ ರಾಜು ಚಿತ್ರದ ಮೂಲಕ ರಾಜು ಬೆನ್ನೇರಿದವನು ಇನ್ನೂ ಕೆಳಗಿಳಿದಿಲ್ಲ ಎನ್ನಬಹುದು. ಅದು ಅವರ ಲಕ್ಕಿ ಹೆಸರು ಅಂತಲೇ ಇಲ್ಲೂ ಇಟ್ಟಿದ್ದಾರೆ.

ರಾಜು ಇಲ್ಲಿ ತನ್ನ ಮಾವನ ಜೊತೆ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಾರೆ.
ಗುರು ನಂದನ್ ಅಭಿನಯದಲ್ಲಿ ಸ್ವಲ್ಪ ಪ್ರಭಲವಾಗುತ್ತಿದ್ದಾರೆ. ಚಿತ್ರದಲ್ಲಿ ಫೈಟಿಂಗ್, ಹಾಸ್ಯ, ಡ್ಯಾನ್ಸ್ ಪ್ರೀತಿ, ಪ್ರಣಯದ ಸನ್ನಿವೇಶಗಳಲ್ಲಿ ಮಿಂಚಿದ್ದಾರೆ.
ಮೃದುಲ ಸ್ಕೂಲ್ ಟೀಚರ್ ಆಗಿ, ರಾಜುವಿನ ಪ್ರೇಯಸಿಯಾಗಿ ಚನ್ನಾಗಿ ಅಭಿನಯಿಸಿದ್ದಾರೆ. ಪ್ರೇಕ್ಷಕರಿಗೆ ಇಷ್ಟವಾಗುತ್ತಾರೆ. ಆದರೆ ಈ ಪಾತ್ರವನ್ನು ನಿರ್ದೇಶಕರು ಚನ್ನಾಗಿ ಬರೆಯಬಹುದಿತ್ತು.
ಮೃದುಲ ಮತ್ತು ರಾಜು ನಡುವೆ ಪ್ರೀತಿಯಾಗುತ್ತದೆ. ಕೆಲಸವಿಲ್ಲದ ನಾಯಕನನ್ನು ನಾಯಕಿಯ ಅಣ್ಣ ಒಪ್ಪುವುದಿಲ್ಲ, ಹೊರ ದೇಶದಲ್ಲಿ ಕೆಲಸ ಮಾಡುವ ಹುಡುಗನಿಗೆ ತಂಗಿಯನ್ನು ಕೊಟ್ಟು ಮದುವೆ ಮಾಡಲು ನಿರ್ದಿರಿಸಿರುತ್ತಾನೆ.
ಇದರ ನಡುವೆ ನಾಯಕನ ತಾಯಿ ಕಷ್ಟಪಟ್ಟು ಕಟ್ಟಿದ ಮನೆ ಬ್ಯಾಂಕ್ ಸಾಲ ಕಟ್ಟದೇ ಅರಾಜಿಗೆ ಬರುತ್ತದೆ. ಒಂದುಕಡೆ ಪ್ರೀತಿಸಿದ ಹುಡುಗಿಯ ಮದುವೆ ಬೇರೆಯವನೊಂದಿಗೆ ನಡೆಸಲು ಸಿದ್ಧತೆ ನಡೆಯತ್ತಿರುತ್ತದೆ,

ತಾಯಿ ಬಿಟ್ಟು ಹೋದ ಮನೆ, ಕೈ ಬಿಟ್ಟು ಹೋಗುತ್ತಿರುವ ಪ್ರೀತಿ, ಬದುಕು ಕಟ್ಟಿಕೊಳ್ಳಲಾಗದ ನಿರುದ್ಯೋಗ, ಈ ಎಲ್ಲಾ ಗೊಂದಲಗಳ ನಡುವೆ ಅದೇ ಊರಿನ ಬ್ಯಾಂಕ್ ನಲ್ಲಿ ಇಪ್ಪತೈದು ಕೋಟಿ ಹಣ ದರೋಡೆಯಾಗುತ್ತದೆ. ಅದರ ವಿಷಯವಾಗಿ ಪೋಲೀಸರು ನಾಯಕನ ಹಿಂದೆ ಬೀಳುತ್ತಾರೆ.
ಆ ದರೋಡೆ ಕೋರರು ಯಾರು, ನಾಯಕ, ನಾಯಕಿ ಪ್ರೀತಿಗೆ ಜಯ ಸಿಗುತ್ತಾ.? ರಾಜುಗೆ ಕೆಲಸ ಸಿಗುತಾ..? ಮನೆ ಹರಾಜಿನಿಂದ ವಿಮುಕ್ತಿ ಪಡೆಯತ್ತಾ..? ಎನ್ನುವ ಕುತೂಹಲಕ್ಕೆ ಚಿತ್ರ ನೋಡಬೇಕಾಗುತ್ತದೆ.
ದೀಪಕ್ ಮಧುವನಹಳ್ಳಿ ನಿರ್ದೇಶನದಲ್ಲಿ ಒಂದೇ ತಿಂಗಳಲ್ಲಿ ಎರಡನೇ ಚಿತ್ರ ತೆರೆ ಕಂಡಿದೆ. ಚಿತ್ರ ಮೊದಲರ್ಧ ನಗಿಸಿಕೊಂಡು ಹೋಗುತ್ತದೆ. ದ್ವಿತೀಯಾರ್ಧದಲ್ಲಿ ಕಥೆಯ ಓಟ ನೀರಸವೆನಿಸುತ್ತದೆ. ಚಿತ್ರಕ್ಕೆ ಇನ್ನು ಒಂದಷ್ಟು ಗಟ್ಟಿತನದ ಸನ್ನಿವೇಶಗಳು ಬೇಕೆನಿಸುವುದು ಸುಳ್ಳಲ್ಲ. ದೀಪಕ್ ಇನ್ನಷ್ಟು ಹೋಂವರ್ಕ್ ಮಾಡಿದ್ದರೆ ಇನ್ನೂ ಚನ್ನಾಗಿರುತಿತ್ತು.
ಚಿಕ್ಕಣ್ಣ ಟಿ.ಆರ್.ಪಿ ಎಂಬ ಯೂಟ್ಯೂಬ್ ಚಾನೆಲ್ ರಿಪೋರ್ಟರ್ ಆಗಿ ಅಭಿನಯಿಸಿದ್ದಾರೆ.
ಗುರು ನಂದನ್ ಮಾವನಾಗಿ ಅಚ್ಯುತ್ ಕುಮಾರ್
ಚಿತ್ರದಲ್ಲಿ ಎಲೆಕ್ಟ್ರಿಷಿಯನ್ ಪಾತ್ರದಲ್ಲಿ ಅಲ್ಲಲ್ಲಿ ಟೆಸ್ಟರ್ ಇಟ್ಟು ಕರೆಂಟ್ ಪಾಸಾಗುತ್ತಾ ಅಂತ ಚೆಕ್ ಮಾಡುವುದರಲ್ಲಿ ನಿಪುಣರು.
ಇನ್ನು ತಬಲ ನಾಣಿ ಬ್ರಹ್ಮಚಾರಿ ಭವಿಷ್ಯವಾಣಿಯ ಜ್ಯೋತಿಷಿಯಾಗಿ ಚಿಕ್ಕಣ್ಣನ. ಟಿ.ಆರ್.ಪಿ. ಚಾನಲ್ ನಲ್ಲಿ ಬುರುಡೆ ಬಿಡುವ ಪಾತ್ರದಲ್ಲಿ ಪ್ರೇಕ್ಷಕರನ್ನು ನಗಿಸುತ್ತಾರೆ.
ಈ ಚಿತ್ರದ ಕಥೆ ಹಾಸ್ಯಮಯವಾಗಿ ಪ್ರೇಕ್ಷಕರನ್ನು ನಗಿಸುವಲ್ಲಿ ಯಶಸ್ವಿಯಾಗಿದೆ.
ನಗಿಸಲು ಗುರು ನಂದನ್, ತಬಲನಾಣಿ, ಅಚ್ಯುತ್ ಕುಮಾರ್ ಪೈಪೋಟಿಗೆ ಬಿದ್ದಿದ್ದಾರೆ ಎನ್ನಬಹುದು.

ಗುರುನಂದನ್ ಈ ಚಿತ್ರದ ನಾಯಕರಾಗಿ ನಟಿಸಿದ್ದಾರೆ. ಮೃದುಲಾ, ಸಾಧು ಕೋಕಿಲ, ಅಚ್ಯುತ್ ಕುಮಾರ್, ಚಿಕ್ಕಣ್ಣ, ರವಿಶಂಕರ್, ಜೈ ಜಗದೀಶ್ ಮುಂತಾದವರು ತಾರಾಬಳಗದಲ್ಲಿದ್ದಾರೆ.
ಮನೋಹರ್ ಜೋಶಿ ಛಾಯಾಗ್ರಹಣ, ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಹಾಗೂ ಅಮಿತ್ ಚವಳ್ಕರ್ ಅವರ ಸಂಕಲನವಿರುವ “ರಾಜು ಜೇಮ್ಸ್ ಬಾಂಡ್” ಚಿತ್ರಕ್ಕೆ ಜಗದೀಶ್ ನಡನಹಳ್ಳಿ ಸಂಭಾಷಣೆ ಬರೆದಿದ್ದಾರೆ.
ಪೆನ್ನು ಕೇಳಿದ್ರೆ ಕ್ಯಾಪೇ ಕೊಡಲ್ಲ ಇನ್ನು ಹೆಣ್ಣು ಕೇಳಿದ್ರೆ ಕಡ್ತಾರಾ ಅನ್ನುವಂ ಹಲವಾರು ಸಂಭಾಷಣೆ ಇಷ್ಟವಾಗುತ್ತದೆ.

ಚಿತ್ರದಲ್ಲಿ ಅನೂಪ್ ಸೀಳಿನ್ ರವರ ಸಂಗೀತದಲ್ಲಿ ಒಂದೆರಡು ಹಾಡುಗಳು ಚನ್ನಾಗಿವೆ.
ಮನೋಹರ್ ಜೋಶಿ ತಮ್ಮ ಕ್ಯಾಮರಾ ಕಣ್ಣುಗಳ ಮೂಲಕ ಚಿತ್ರದ ಕಥೆಗೆ ಜೀವ ತುಂಬಿದ್ದಾರೆ.
ಒಟ್ಟಿನಲ್ಲಿ ರಾಜು ಜೇಮ್ಸ್ ಬಾಂಡ್ ಪ್ರೇಕ್ಷಕರಿಗೆ ಮನರಂಜನೆ ನೀಡುವುದರಲ್ಲಿ ಸಫಲನಾಗಿದ್ದಾನೆ. ಹಣ ಕೊಟ್ಟು ಸಿನಿಮಾ ನೋಡುವ ಪ್ರೇಕ್ಷಕ ಯಾವುದೇ ಅಡೆ ತಡೆಯಿಲ್ಲದೆ ಚಿತ್ರ ನೋಡಬಹುದು.