Rajayoga movie song released abhishek ambharish ರಾಜಯೋಗ “ನಾನು Ba ಗಂಡು” ಹಾಡಿಗೆ ಅಭಿಷೇಕ್ ಅಂಬರೀಶ್ ಸಾಥ್

ರಾಜಯೋಗ ಬಿಎ.ಗಂಡು ಹಾಡಿಗೆ
ಅಭಿಷೇಕ್ ಅಂಬರೀಶ್ ಸಾಥ್

ಪೋಷಕ ನಟರಾಗಿದ್ದ ಧರ್ಮಣ್ಣ ಕಡೂರು ಮೊದಲಬಾರಿಗೆ ನಾಯಕನಾಗಿ ನಟಿಸಿರುವ ಚಿತ್ರ ರಾಜಯೋಗ. ಲಿಂಗರಾಜ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದ ಟ್ರೈಲರ್

ಇತ್ತೀಚೆಗಷ್ಟೇ ರಿಲೀಸಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ.
ಇದರ ಬೆನ್ನಲ್ಲೇ ಈಗ ‘ನಗಬ್ಯಾಡ್ವೇ ನನ್ನಕಂಡು, ನಾನೂ ಬಿಎ ಮಾಡಿದ ಗಂಡು’ ಎಂಬ ಹಾಡು ಬಿಡುಗಡೆಯಾಗಿದೆ. ನಟ ಅಭಿಷೇಕ್ ಅಂಬರೀಶ್ ಅವರು ಈ ಹಾಡನ್ನು ರಿಲೀಸ್ ಮಾಡಿ ಮಾತನಾಡುತ್ತ ರಾಜಯೋಗ ಚಿತ್ರದ ಮೊದಲ ಹಾಡನ್ನು ನೋಡಿದೆ. ನನ್ನ ಕಡೆಯಿಂದ ಇಡೀ ಚಿತ್ರತಂಡಕ್ಕೆ ಶುಭ ಹಾರೈಕೆ. ಇದರಲ್ಲಿ ನಾಯಕ ಧರ್ಮಣ್ಣ, ನಾಯಕಿ ನಿರೀಕ್ಷಾ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ‌. ಸಂಗೀತ ನಿರ್ದೇಶಕ ಅಕ್ಷಯ್ ರಿಶಭ್ ತುಂಬಾ ಚೆನ್ನಾಗಿ ಕೆಲಸ ಮಾಡಿದ್ದಾರೆ. ಈ ಹಾಡನ್ನು ವಿಶೇಷವಾಗಿ ನವಜೊಡಿಗಳು ಈ ಹಾಡನ್ನು ತುಂಬಾ ಇಷ್ಟಪಡುತ್ತೀರಿ ಎಂದು ಭಾವಿಸುತ್ತೇನೆ. ಎಲ್ಲರೂ ಸಿನಿಮಾನ ನೋಡಿ ಎಂದು ಶುಭ ಹಾರೈಸಿದ್ದಾರೆ.
ಲಿಂಗರಾಜ ಉಚ್ಚಂಗಿದುರ್ಗ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರವನ್ನು ಶ್ರೀರಾಮರತ್ನ ಪ್ರೊಡಕ್ಷನ್ಸ್ ಮೂಲಕ ಕುಮಾರ ಕಂಠೀರವ, ದೀಕ್ಷಿತ್ ಕೃಷ್ಣ, ಪ್ರಭು ಚಿಕ್ಕನಾಯ್ಕನಹಳ್ಳಿ, ಲಿಂಗರಾಜು ಕೆಎನ್, ನೀರಜ್ ಗೌಡ ಅಲ್ಲದೆ ಧರ್ಮಣ್ಣ ಸಹೋದರ ಹೊನ್ನಪ್ಪ ಕಡೂರುಸೇರಿ ನಿರ್ಮಾಣ ಮಾಡಿದ್ದಾರೆ. ನಿನ್ನೆಯ ಬಗ್ಗೆ, ನಾಳೆಯ ಕುರಿತು ಯೋಚಿಸದೆ, ಪ್ರೆಸೆಂಟ್ ಲೈಫ್ ಮೇಲೆ ಗಮನ ಹರಿಸಿದರೆ ನಮ್ಮ ಜೀವನ ಚೆನ್ನಾಗಿರುತ್ತದೆ ಎಂದು ಹೇಳುವ ಕಥೆಯಿದಾಗಿದ್ದು, ೩ ಹಂತಗಳಲ್ಲಿ ೪೫ ದಿನಗಳವರೆಗೆ ಚಿತ್ರೀಕರಿಸಲಾಗಿದೆ.
ಅಕ್ಷಯ್ ರಿಶಭ್ ಅವರ ಸಂಗೀತ, ವಿಷ್ಣುಪ್ರಸಾದ್ ಅವರ ಕ್ಯಾಮೆರಾ, ಬಿ.ಎಸ್.ಕೆಂಪರಾಜು ಅವರ ಸಂಕಲನ ಈ ಚಿತ್ರಕ್ಕಿದೆ, ನಾಗೇಂದ್ರ ಶಾ, ಕೃಷ್ಣ ಮೂರ್ತಿ ಕವುತಾರ್, ಶ್ರೀನಿವಾಸಗೌಡ್ರು, ಉಷಾ ರವಿಶಂಕರ್, ಮಹಾಂತೇಶ ಹಿರೇಮಠ್ ಚಿತ್ರದ ಪ್ರಮುಖ ಪಾತ್ರವರ್ಗದಲ್ಲಿದ್ದಾರೆ,

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor