Rajavardhan & Divya Suresh acted hiraniya movie dancing song released ರಾಜವರ್ಧನ್ ‘ಹಿರಣ್ಯ’ ಸಿನಿಮಾದ ಡ್ಯಾನ್ಸಿಂಗ್ ನಂಬರ್ ರಿಲೀಸ್…ಬೈಲಾ ಬೈಲಾ ಅಂತಾ ಹೆಜ್ಜೆ ಹಾಕಿದ ದಿವ್ಯಾ ಸುರೇಶ್
ರಾಜವರ್ಧನ್ ‘ಹಿರಣ್ಯ’ ಸಿನಿಮಾದ ಡ್ಯಾನ್ಸಿಂಗ್ ನಂಬರ್ ರಿಲೀಸ್…ಬೈಲಾ ಬೈಲಾ ಅಂತಾ ಹೆಜ್ಜೆ ಹಾಕಿದ ದಿವ್ಯಾ ಸುರೇಶ್
ರಾಜವರ್ಧನ್ ನಾಯಕರಾಗಿರುವ “ಹಿರಣ್ಯ’ ಚಿತ್ರ ಜುಲೈ 19ಕ್ಕೆ ತೆರೆಕಾಣುತ್ತಿದೆ. ಈಗ ಚಿತ್ರದ ಡ್ಯಾನ್ಸಿಂಗ್ ನಂಬರ್ ಅನಾವರಣಗೊಂಡಿದೆ. ಬೈಲಾ ಬೈಲಾ ಎಂಬ ಹಾಡಿಗೆ ದಿವ್ಯಾ ಸುರೇಶ್ ಹೆಜ್ಜೆ ಹಾಕಿದ್ದಾರೆ. ನಿರ್ದೇಶಕ ಪ್ರವೀಣ್ ಅವ್ಯುಕ್ತ್ ಬರೆದ ಸಾಹಿತ್ಯಕ್ಕೆ ಶಮಿತಾ ಮಲ್ನಾಡ್ ಧ್ವನಿಯಾಗಿದ್ದು,
ಜೂಡಾ ಸ್ಯಾಂಡಿ ಸಂಗೀತ ಒದಗಿಸಿದ್ದಾರೆ.
ಈಗಾಗಲೇ ಹಲವು ಶಾರ್ಟ್ ಮೂವಿಗಳನ್ನು ನಿರ್ದೇಶನ ಮಾಡಿದ ಅನುಭವ ಇರುವ ಪ್ರವೀಣ್ ಅವ್ಯುಕ್ತ್ “ಹಿರಣ್ಯ’ ಸಿನಿಮಾದ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕನಾಗಿ ಸ್ಯಾಂಡಲ್ ವುಡ್‌ಗೆ ಪರಿಚಯವಾಗುತ್ತಿದ್ದಾರೆ. “ಹಿರಣ್ಯ’ ಸಿನಿಮಾದಲ್ಲಿ ರಾಜವರ್ಧನ್‌ಗೆ ನಾಯಕಿಯಾಗಿ ರಿಹಾನಾ ಜೋಡಿಯಾಗಿದ್ದು, ಈ ಸಿನಿಮಾದ ಮೂಲಕ ರಿಹಾನಾ ಚಂದನವನಕ್ಕೆ ಪರಿಚಯವಾಗುತ್ತಿದ್ದಾರೆ.

ಆ್ಯಕ್ಷನ್-ಥ್ರಿಲ್ಲರ್ ಜೊತೆಗೆ ತಾಯಿ ಸೆಂಟಿಮೆಂಟ್ ಕಥಾಹಂದರ ಹೊಂದಿರುವ “ಹಿರಣ್ಯ’ ಸಿನಿಮಾದಲ್ಲಿ ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಹುಲಿ ಕಾರ್ತಿಕ್, ಅರವಿಂದ ರಾವ್, ದಿಲೀಪ್ ಶೆಟ್ಟಿ ಮುಂತಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

“ವೇದಾಸ್ ಇನ್ಫಿನಿಟಿ ಪಿಕ್ಚರ್’ ಬ್ಯಾನರ್‌ನಲ್ಲಿ ವಿಘ್ನೇಶ್ವರ ಯು. ಹಾಗೂ ವಿಜಯ್ ಕುಮಾರ್ ಬಿ. ವಿ ಜಂಟಿಯಾಗಿ ಬಂಡವಾಳ ಹೂಡಿ ನಿರ್ಮಿಸುತ್ತಿರುವ “ಹಿರಣ್ಯ’ ಸಿನಿಮಾಕ್ಕೆ ಯೋಗೇಶ್ವರನ್ ಆರ್. ಛಾಯಾಗ್ರಹಣವಿದೆ. ಚಿತ್ರದ ಹಾಡುಗಳಿಗೆ ಜ್ಯೂಡಾ ಸ್ಯಾಂಡಿ ಸಂಗೀತ ಸಂಯೋಜನೆಯಿದೆ.