Ragini divedi acted “Email” movie firstlook release by prajwal devraj ಪ್ರಜ್ವಲ್ ದೇವರಾಜ್ ಅವರಿಂದ ಅನಾವರಣವಾಯಿತು ರಾಗಿಣಿ ದ್ವಿವೇದಿ ಅಭಿನಯದ “ಇಮೇಲ್” ಚಿತ್ರದ ಫಸ್ಟ್ ಲುಕ್

ಪ್ರಜ್ವಲ್ ದೇವರಾಜ್ ಅವರಿಂದ ಅನಾವರಣವಾಯಿತು ರಾಗಿಣಿ ದ್ವಿವೇದಿ ಅಭಿನಯದ “ಇಮೇಲ್” ಚಿತ್ರದ ಫಸ್ಟ್ ಲುಕ್. .

ಎಸ್ ಆರ್ ಫಿಲಂ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿರುವ, ರಾಗಿಣಿ ದ್ವಿವೇದಿ ಮುಖ್ಯಪಾತ್ರದಲ್ಲಿ ಅಭಿನಯಿಸಿರುವ ತಮಿಳು ಹಾಗೂ ಕನ್ನಡ ಭಾಷೆಗಳಲ್ಲಿ ನಿರ್ಮಾಣವಾಗಿರುವ “ಇಮೇಲ್” ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. “ಇಮೇಲ್” ಚಿತ್ರದ ಫಸ್ಟ್ ಲುಕ್ ಗೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಎಸ್ ಆರ್ ರಾಜನ್ ಅವರು “ಇಮೇಲ್” ಚಿತ್ರವನ್ನು ನಿರ್ಮಿಸಿ, ನಿರ್ದೇಶನ ಮಾಡಿದ್ದಾರೆ. ಎಸ್ ಆರ್ ಫಿಲಂ ಫ್ಯಾಕ್ಟರಿ ತಮಿಳಿನ ಹೆಸರಾಂತ ಚಿತ್ರ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿದೆ.

“ಇಮೇಲ್” ಮಹಿಳಾ ಪ್ರಧಾನ ಚಿತ್ರವಾಗಿದ್ದು, ನಾಯಕಿಯಾಗಿ ರಾಗಿಣಿ ದ್ವಿವೇದಿ ನಟಿಸಿದ್ದಾರೆ. ಮುರುಗ ಅಶೋಕ್, ಮನೋಬಲ, “ಜೈಲರ್” ಚಿತ್ರದ ಖ್ಯಾತಿಯ ಬಿಲ್ಲಿ, “ಲೊಳ್ಳುಸಭಾ” ಮನೋಹರ್, ಅಕ್ಷಯ್ ರಾಜ್, ಅರತಿ ಶ್ರೀ, ಆದವ ಬಾಲಾಜಿ, ಮಂಜು ನಂಜನಗೂಡು, ರಾಮ್ ಸನ್ನಿ, ನಯನ ಚೌಹಾನ್, ಶೈಲಜ, ಶ್ವೇತ, ತೇಜಸ್ವಿನಿ, ಕುಮಾರಿ ಸೃಷ್ಟಿ, ಕುಮಾರಿ ಸಿಂಚನ, ಕುಮಾರಿ ಅನನ್ಯ, ಮುಂತಾದವರು “ಇಮೇಲ್” ಚಿತ್ರದ ತಾರಾಬಳಗದಲ್ಲಿದ್ದಾರೆ. ಬಹತೇಕ ಕನ್ನಡ ಕಲಾವಿದರೆ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಚಿತ್ರದಲ್ಲಿ ಸುಮಧುರ ಹಾಡುಗಳಿದ್ದು ಜುಬಿನ್ ಹಾಗೂ “ಐ ಲವ್ ಯು” ಚಿತ್ರದ ಖ್ಯಾತಿಯ ಕಿರಣ್ ತೊಟಂಬೈಲ್(ಕನ್ನಡ) ಸಂಗೀತ ನೀಡಿದ್ದಾರೆ. ಕನ್ನಡದ ಹಾಡುಗಳನ್ನು ಸಂತೋಷ್ ನಾಯಕ್ ಬರೆದಿದ್ದಾರೆ. ಮಾಸ್ ಮಾದ , ಬೀರ್ ಮಾಸ್ಟರ್ ಹಾಗೂ ಫಯಾಸ್ ಖಾನ್ ಸಾಹಸ ನಿರ್ದೇಶನ ಹಾಗೂ ಸೆಲ್ವಂ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

ಕರ್ನಾಟಕ, ತಮಿಳುನಾಡು, ಪಾಂಡಿಚೇರಿ, ಗೋವಾ ಹಾಗೂ ಮುಂಬೈನಲ್ಲಿ ಚಿತ್ರೀಕರಣ ನಡೆದಿದೆ. “ಇಮೇಲ್” ಚಿತ್ರ ತೆರೆಗೆ ಬರಲು ಸಿದ್ದವಾಗಿದ್ದು, ಸದ್ಯದಲ್ಲೇ ಎರಡು ಭಾಷೆಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor