ಬಂಡಿ ಮಹಾಕಾಳಿ ದೇವಸ್ಥಾನದಲ್ಲಿ “ರಾ” ಚಿತ್ರಕ್ಕೆ ಮುಹೂರ್ತ
ಶಾಂಭವಿ ಕ್ರಿಯೇಷನ್ಸ್ ಲಾಂಛನದಲ್ಲಿ
ಸಂತೋಷ್ ಬಾಲರಾಜ್ ನಾಯಕನಾಗಿ ಅಭಿನಯಿಸುತ್ತಿರುವ “ರಾ” ಚಿತ್ರದ ಮುಹೂರ್ತ ಸಮಾರಂಭ ಬಂಡಿಮಹಾಂಕಾಳಿ ದೇವಸ್ಥಾನದಲ್ಲಿ ನೆರವೇರಿತು.
ಮೊದಲ ದೃಶ್ಯಕ್ಕೆ ನಿರ್ಮಾಪಕಿ ವಿನುತ ಮಂಜುಳಾ ಆರಂಭ ಫಲಕ ತೋರಿದರು. ಉದ್ಯಮಿ ಸೂರಜ್ ಗೌಡ ಕ್ಯಾಮೆರಾ ಚಾಲನೆ ಮಾಡಿದರು.ಅನೇಕ ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶಭ ಕೋರಿದರು.
ವಿನುತ ಮಂಜುಳಾ ಹಾಗೂ ಬಂಕ್ ಮಂಜುನಾಥ್ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಕೆ.ಜಿ.ಎಫ್ ಖ್ಯಾತಿಯ ರವಿ ಬಸ್ರೂರ್ ಸಂಗೀತ ನಿರ್ದೇಶನ ಹಾಗೂ ಕೃಷ್ಣಕುಮಾರ್(ಕೆ ಕೆ) ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

ಮುಹೂರ್ತದ ನಂತರ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಚಿತ್ರತಂಡದ ಸದಸ್ಯರು ಸಿನಿಮಾ ಕುರಿತು ಮಾತನಾಡಿದರು.
ನಾನು ಹತ್ತು ವರ್ಷಗಳಿಂದ ಚಿತ್ರರಂಗದಲ್ಲಿದ್ದೀನಿ. ಖ್ಯಾತ ನಿರ್ದೇಶಕ ರವಿಶ್ರೀವತ್ಸ ಅವರ ಬಳಿ ಕಾರ್ಯ ನಿರ್ವಹಿಸಿದ್ದೇನೆ. ಇದು ನನ್ನ ಚೊಚ್ಚಲ ನಿರ್ದೇಶನದ ಚಿತ್ರ. “ರಾ” ಚಿತ್ರಕ್ಕೆ BEAUTY OF SOULS ಎಂಬ ಅಡಿಬರಹವಿದೆ. “ರಾ” ಎಂದ ಕೂಡಲೇ ಇದು ರೌಡಿಸಂ ಕಥೆಯಲ್ಲ. ವಿಭಿನ್ನ ಕಥೆಯುಳ್ಳ ಚಿತ್ರ. ನಮ್ಮ ಚಿತ್ರದ ನಾಯಕನಿಗೆ “ರಾ” ಲುಕ್ ಬೇಕು ಹಾಗೂ ಮುಗ್ಧತೆಯೂ ಇರಬೇಕು. ಆ ಎರಡು ನನಗೆ ಸಂತೋಷ್ ಬಾಲರಾಜ್ ಅವರಲ್ಲಿ ಕಾಣಿಸಿತು. ಹಾಗಾಗಿ ಅವರನ್ನು ನಾಯಕನಾಗಿ ಆಯ್ಕೆ ಮಾಡಿಕೊಂಡೆವು. ರಿಯಾ ಈ ಚಿತ್ರದ ನಾಯಕಿಯಾಗಿ ನಟಿಸಲಿದ್ದಾರೆ. ಮತ್ತೊಬ್ಬ ನಾಯಕಿಯ ಪಾತ್ರಕ್ಕೆ ಹುಡುಕಾಟ ನಡೆದಿದೆ. ಖ್ಯಾತ ನಟ ಸಾಯಿಕುಮಾರ್, “ಸಲಗ” ಖ್ಯಾತಿಯ ಕಾಕ್ರೋಜ್ ಸುಧೀ ಮುಂತಾದವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ನವೆಂಬರ್ ನಲ್ಲಿ ಚಿತ್ರೀಕರಣ ಆರಂಭವಾಗಲಿದೆ.

ಬೆಂಗಳೂರು ಸೇರಿದಂತೆ ಕರ್ನಾಟಕದ ಜನಪ್ರಿಯ ಸ್ಥಳಗಳಲ್ಲಿ ತೊಂಬತ್ತು ದಿನಗಳ ಚಿತ್ರೀಕರಣ ನಡೆಯಲಿದೆ. ನಮ್ಮ ಚಿತ್ರದ ನಿರ್ಮಾಪರ ಹಾಗೂ ತಂಡದ ಸಹಕಾರಕ್ಕೆ ನಾನು ಆಭಾರಿ. ನಿರ್ಮಾಪಕರದು ಚೊಚ್ಚಲ ಚಿತ್ರ. ನಮಗೆ ನಿಮ್ಮ ಬೆಂಬಲವಿರಲಿ ಎಂದರು ನಿರ್ದೇಶಕ ಮಂಜುನಾಥ್ ಕೆ.ಪಿ.
ನಾನು ಈ ಹಿಂದೆ ಮಾಡಿರುವ ಗಣಪ, ಕರಿಯ ೨ ಚಿತ್ರಗಳ ಪಾತ್ರಕ್ಕಿಂತ ಇದು ಭಿನ್ನ ಪಾತ್ರ. ಮೂರು ಶೆಡ್ ಗಳಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಮೊದಲ ಹಂತದ ಚಿತ್ರೀಕರಣದಲ್ಲಿ ಈಗಿರುವ ರೀತಿಯಲ್ಲೇ ಇರುತ್ತೇನೆ. ಎರಡನೇ ಹಂತದ ವೇಳೆಗೆ ನನ್ನ ಲುಕ್ ಪೂರ್ತಿ ಬದಲಾಗಿರುತ್ತದೆ ಎಂದರು ನಾಯಕ ಸಂತೋಷ್ ಬಾಲರಾಜ್.

ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ನನ್ನದು ಇದರಲ್ಲಿ ನೆಗಟಿವ್ ಪಾತ್ರ. ಆದರೆ ಹಿಂದಿನ ಪಾತ್ರಗಳಿಗಿಂತ ಬೇರೆಯದು. ಎಲ್ಲರ ಬೆಂಬಲವಿರಲಿ ಎಂದರು ನಟ ಕಾಕ್ರೋಜ್ ಸುಧೀ.
ಚಿತ್ರದ ನಿರ್ಮಾಪರಾದ ಬಂಕ್ ಮಂಜುನಾಥ್ ಹಾಗೂ ಛಾಯಾಗ್ರಹಕ ಕೃಷ್ಣಕುಮಾರ್ “ರಾ” ಚಿತ್ರದ ಕುರಿತು ಮಾತನಾಡಿದರು. ಚಿತ್ರದ ಚಿತ್ರೀಕರಣ ಇದೇ ನವಂಬರ್ ನಲ್ಲಿ ಪ್ರಾರಂಭವಾಗಲಿದೆ.