R. Chandru filmy journey completed 16 year ಆರ್.ಚಂದ್ರು ಸಿನಿ ಬದುಕಿಗೆ ಹದಿನಾರರ ಹರೆಯ

ಆರ್.ಚಂದ್ರು ಸಿನಿ ಬದುಕಿಗೆ ಹದಿನಾರರ ಹರೆಯ

ಅವರ ನಿರ್ದೇಶನದ ಚೊಚ್ಚಲ ಸಿನಿಮಾ “ತಾಜ್ ಮಹಲ್” ತೆರೆಕಂಡು ಹದಿನೈದು ವರ್ಷ ಪೂರ್ಣ .

ಸಣ್ಣ ಹಳ್ಳಿಯಿಂದ ಬಂದು, ಇಂದು “ಕಬ್ಜ” ಎಂಬ ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ಭಾರತದಾದ್ಯಂತ ಹೆಸರು‌ ಮಾಡಿರುವ ನಿರ್ದೇಶಕ ಆರ್ ಚಂದ್ರು ಅವರ ಸಿನಿಯಾನಕ್ಕೆ ಈಗ ಹದಿನಾರನೇ ವಸಂತ.

ಆರ್ ಚಂದ್ರು ಅವರ ನಿರ್ದೇಶನದ ಮೊದಲ ಚಿತ್ರ “ತಾಜ್ ಮಹಲ್” ತೆರೆಕಂಡು ಜುಲೈ 25ಕ್ಕೆ ಹದಿನೈದು ವರ್ಷಗಳಾಗಿದೆ.(2008 ಜುಲೈ 25 ಈ ಚಿತ್ರ ಬಿಡುಗಡೆಯಾಗಿತ್ತು) ಶಿವಶಂಕರ್ ‌ರೆಡ್ಡಿ ಅವರು ನಿರ್ಮಿಸಿದ್ದ ಹಾಗೂ ಅಜೇಯ್ ರಾವ್ ಹಾಗೂ ಪೂಜಾ ಗಾಂಧಿ ನಾಯಕ, ನಾಯಕಿಯಾಗಿ ನಟಿಸಿದ್ದ ಈ ಚಿತ್ರ ಕರ್ನಾಟಕದಾದ್ಯಂತ ಭರ್ಜರಿ ಯಶಸ್ಸು ಕಂಡಿತ್ತು. ಅನೇಕ ಚಿತ್ರಮಂದಿರಗಳಲ್ಲಿ 200 ಕ್ಕೂ ಅಧಿಕ ದಿನ ಈ ಸಿನಿಮಾ ಪ್ರದರ್ಶನವಾಗಿತ್ತು. ತಮ್ಮ ಮೊದಲ ನಿರ್ದೇಶನದ ಚಿತ್ರದಲ್ಲೇ ಆರ್ ಚಂದ್ರು ಡಬಲ್ ಸೆಂಚುರಿ ಬಾರಿಸಿದ್ದರು.

ನಂತರದ ದಿನಗಳಲ್ಲಿ ಆರ್ ಚಂದ್ರು, “ತಾಜ್ ಮಹಲ್” ಚಂದ್ರು ಅಂತಲೇ ಪ್ರಸಿದ್ದರಾದರು. ಈ ಚಿತ್ರದ ಸಂಗೀತ ನಿರ್ದೇಶನಕ್ಕಾಗಿ ಅಭಿಮಾನ್ ರಾಯ್ ಅವರಿಗೆ ರಾಜ್ಯಪ್ರಶಸ್ತಿ ಸಹ ಬಂದಿತ್ತು. ಈ ಚಿತ್ರ 2010 ರಲ್ಲಿ “ತಾಜ್ ಮಹಲ್” ಶೀರ್ಷಿಕೆಯಲ್ಲೇ ತೆಲುಗಿನಲ್ಲೂ ಬಿಡುಗಡೆಯಾಗಿತ್ತು.

ಆನಂತರದ ದಿನಗಳಲ್ಲಿ ಆರ್ ಚಂದ್ರು ಕನ್ನಡದ ಹೆಸರಾಂತ ನಾಯಕ ನಟರ ಸಿನಿಮಾಗಳನ್ನು ನಿರ್ದೇಶಿಸಿ ಕನ್ನಡ ಚಿತ್ರರಂಗಕ್ಕೆ ಸೂಪರ ಹಿಟ್ ಚಿತ್ರಗಳನ್ನು ನೀಡಿದರು. ನಿರ್ಮಾಪಕರಾಗಿಯೂ ಆರ್ ಚಂದ್ರು ಜನಪ್ರಿಯರಾದರು.

“ತಾಜ್ ಮಹಲ್” ನಿಂದ ಇತ್ತೀಚಿಗೆ ತೆರೆಕಂಡ ಪ್ಯಾನ್ ಇಂಡಿಯಾ ಸಿನಿಮಾ “ಕಬ್ಜ” ತನಕ ಆರ್ ಚಂದ್ರು ಅವರ ಯಶಸ್ಸಿನ ಸಿನಿಮಾ ಯಾನ ಮುಂದುವರೆದುಕೊಂಡು ಬಂದಿದೆ. ಮುಂದೆ ಕೂಡ ಸಾಕಷ್ಟು ಸದಭಿರುಚಿಯ ಚಿತ್ರಗಳು ಆರ್ ಚಂದ್ರು ಅವರ ನಿರ್ದೇಶನ ಹಾಗೂ ನಿರ್ಮಾಣದಲ್ಲಿ ಮೂಡಿಬರಲಿದೆ.

ತಮ್ಮ ಸಿನಿ ಜರ್ನಿಗೆ 15 ವರ್ಷಗಳು ತುಂಬಿರುವ ಈ ಸುಸಂದರ್ಭದಲ್ಲಿ ಆರ್‌ ಚಂದ್ರು ತಮಗೆ ಸಹಕಾರ ನೀಡಿರುವ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor