R. Chandru Birthday celebration. ನಿರ್ದೇಶಕ ನಿರ್ಮಾಪಕ ಆರ್. ಚಂದ್ರು ರವರಿಗೆ ಜನ್ಮ ದಿನದ ಸಂಭ್ರಮ.
ನಿರ್ದೇಶಕ ನಿರ್ಮಾಪಕ ಆರ್. ಚಂದ್ರು ರವರಿಗೆ ಇಂದು ಜನ್ಮ ದಿನದ ಸಂಭ್ರಮ. ಕೇಶಾವರ ಎಂಬ ಒಂದು ಸಣ್ಣಹಳ್ಳಿಯಿಂದ ಸಿನಿಮಾ ರಂಗಕ್ಕೆ ಬೆಟ್ಟದಷ್ಟು ಕನಸ್ಸುಗಳನ್ನು ಹೊತ್ತು ಬಂದ ಆರ್. ಚಂದ್ರು ತಾಜ್ ಮಹಲ್ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕನಾಗಿ ಹೊರ ಹೊಮ್ಮಿ ತಾಜ್ ಮಹಲ್ ಚಂದ್ರು ಎಂದೇ ಖ್ಯಾತಿಯನ್ನು ಪಡೆದ ಚಂದ್ರು ನಂತರದ ದಿನಗಳಲ್ಲಿ ನಿರ್ದೇಶನದ ಜೊತೆಗೆ ನಿರ್ಮಾಣಕ್ಕೂ ಕೈ ಹಾಕಿ “ಕಬ್ಜ” ಎಂಬ ಪ್ಯಾನ್ ಇಂಡಿಯಾ ಸಿನಿಮಾವನ್ನು ನೀಡಿ, ಇತ್ತೀಚೆಗೆ ಒಂದೇ ವೇದಿಕೆ ಮೇಲೆ ಒಟ್ಟಿಗೆ 5 ಚಿತ್ರಗಳ ನಿರ್ಮಾಣ ವನ್ನು ಘೋಷಣೆ ಮಾಡಿದ ಮೊದಲಿಗ ಆರ್. ಚಂದ್ರು ಎನ್ನ ಬಹುದು.

ಈ ಎಲ್ಲಾ ಸಾಧನೆಗಳ ಜೊತೆಗೆ ತಮ್ಮದೇ ಆದ ಪ್ರೇಕ್ಷಕರನ್ನು ಹೊಂದಿರುವ ಚಂದ್ರು ಸಿನಿಮಾ ಜೊತೆಗೆ ಸಾಮಾಜಿಕ ಕಳಕಳಿಯನ್ನು ಹೊಂದಿರುವ ಚಂದ್ರು ಹಳ್ಳಿ ಹಾಗೂ ಹಳ್ಳಿಯ ಪರಿಸರ, ಕೆರೆ ಕಟ್ಟೆಗಳ ಅಭಿವೃದ್ಧಿಗೆ ಒತ್ತು ನೀಡುವಲ್ಲಿ ಕೆಲಸ ಮಾಡುವ ದೊಡ್ಡ ಮನಸ್ಸು ಮಾಡಿರುವ ಆರ್. ಚಂದ್ರು ಇನ್ನೂ ನೂರಾರು ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ಕೊಡುಗೆ ನೀಡಲಿ ಎಂದು ಹಾರೈಸುತ್ತಾ ಮತ್ತೊಮ್ಮೆ ಆರ್. ಚಂದ್ರುರವರಿಗೆ ಜನ್ಮ ದಿನದ ಶುಭಾಶಯಗಳು.