ಆರ್.ಸಿ. ಬ್ರದರ್ಸ್ ಗೆ ಸಾಥ್ ನೀಡಿದ ಹೆಸರಾಂತ ಹಿರಿಯ ನಿರ್ದೇಶಕ ಓಂ ಪ್ರಕಾಶ್ ರಾವ್
ಇಂದು ಹಿರಿಯ ನಿರ್ದೇಶಕ ಓಂ ಪ್ರಕಾಶ್ ರಾವ್ RC ಬ್ರದರ್ಸ್ ಚಿತ್ರದ ಟ್ರೇಲರ್ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಚಿತ್ರದ ಟ್ರೇಲರ್ ತುಂಬಾ ಚನ್ನಾಗಿದೆ. ಚಿತ್ರ ಬಿಡುಗಡೆಯಾಗಿ ಚಿತ್ರ ತಂಡಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿದರು.
ಅನುಗ್ರಹ ಎಂಟರ್ಟೈನ್ಮೆಂಟ್ ಸಂಸ್ಥೆಯಡಿಯಲ್ಲಿ ಮಣಿ ಶಶಾಂಕ್ ಹಾಗೂ ಶ್ರೀಮತಿ ಸಹನ ಗಿರೀಶ್ ಸಹ ನಿರ್ಮಾಣದಲ್ಲಿ ಪ್ರಕಾಶ್ ಕುಮಾರ ನಿರ್ದೇಶನದಲ್ಲಿ ಚಿತ್ರ ಮೂಡಿಬಂದಿದ್ದು, ತಬಲ ನಾಣಿ ಹಾಗೂ ಕುರಿ ಪ್ರತಾಪ್ ಜಂಟಿಯಾಗಿ ತೆರೆ ಹಂಚಿಕೊಂಡು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ RC ಬ್ರದರ್ಸ್ ಜನವರಿ 26ರಂದು ರಾಜ್ಯದಾದ್ಯಂತ ತೆರೆ ಕಾಣಲಿದೆ.