Qube Cinema Launches New digital Cinema Mastering Facility in Bengaluru. ಬೆಂಗಳೂರಿನಲ್ಲಿ ಕ್ಯೂಬ್ ನ ಡಿಜಿಟಲ್ ಸಿನೆಮಾ ಮಾಸ್ಟರಿಂಗ್ ಸೌಲಭ್ಯಕ್ಕೆ ಶಿವಣ್ಣ ಚಾಲನೆ.
ಬೆಂಗಳೂರಿನಲ್ಲಿ ಕ್ಯೂಬ್ ಸಿನಿಮಾ ಟೆಕ್ನಾಲಜೀಸ್ ಸಂಸ್ಥೆಯಿಂದ ನೂತನ ಡಿಜಿಟಲ್ ಸಿನೆಮಾ
ಮಾಸ್ಟರಿಂಗ್ ಸೌಲಭ್ಯ ಇಂದಿನಿಂದ ಆರಂಭ
ಬೆಂಗಳೂರಿನ ಈ ಹೊಸ ಶಾಖೆಯನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮಗಳು ನಿವೇದಿತಾ ಜೊತೆ ಸೇರಿ ಚಾಲನೆ ನೀಡಿದರು. ಈ ಸಂಧರ್ಭದಲ್ಲಿ ಚಲನ ಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ನರಸಿಂಹಲು ಹಾಗೂ ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು, ನಿರ್ದೇಶಕ ದಯಾಳ್ ಹಾಗೂ ಉಳಿದ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು ಭಾಗವಹಿಸಿ. ಕ್ಯೂಬ್ ಸಂಸ್ಥೆ ಯವರನ್ನು ಅಭಿನಂದಿಸಿದರು. ಹಾಗೂ ಸತತ ಬಹಳ ವರ್ಷಗಳ ಬೇಡಿಗೆಗೆ ಈಗ ಮನ್ನಣೆ ಸಿಕ್ಕರುವುದಕ್ಕೆ ಸಂತಸ ವ್ಯಕ್ತ ಪಡಿಸಿದರು. ಇದರಿಂದಾಗಿ ನಿರ್ಮಾಕರ, ನಿರ್ದೇಶಕರ ಹಣ, ಶ್ರಮ, ಸಮಯ ಉಳಿದಂತಾಗಿದೆ.

ಡಿಜಿಟಲ್ ಸಿನಿಮಾ ತಂತ್ರಜ್ಞಾನಗಳನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿರುವ ಕ್ಯೂಬ್ ಸಿನಿಮಾ
ಟೆಕ್ನಾಲಜೀಸ್ ಇಂದು ಬೆಂಗಳೂರು ನಗರದಲ್ಲಿ ಅಧಿಕೃತವಾಗಿ ತನ್ನ ಹೊಸ ಡಿಜಿಟಲ್ ಮಾಸ್ಟರಿಂಗ್
ಸೌಲಭ್ಯವನ್ನು ಪ್ರಾರಂಭಿಸಿದೆ. ಭಾರತದಲ್ಲಿ ಕಂಪನಿಯ ಐದನೇ ಮಾಸ್ಟರಿಂಗ್ ಲ್ಯಾಬ್ ಇದಾಗಿದ್ದು,
ಚೆನ್ನೈ, ಹೈದರಾಬಾದ್, ಕೊಚ್ಚಿ ಮತ್ತು ಮುಂಬೈ ನಂತರದ ಕಾರ್ಯಾಲಯವಾಗಿದೆ. ಇದರಲ್ಲಿ ಎನ್‌ಕ್ರಿಪ್ಟ್
ಮಾಡಿದ ಡಿಜಿಟಲ್ ಸಿನಮಾ ಪ್ಯಾಕೇಜ್ (ಡಿ.ಸಿ.ಪಿ) ರಚನೆ, ಓ.ಟಿ.ಟಿ ಮಾಸ್ಟರಿಂಗ್, ವರ್ಷನಿಂಗ್, ಮತ್ತು
ಸಬ್‌ಟ್ರೈಟ್ಲಿಂಗ್, ಆಡಿಯೋ ಡಿಸ್ಕ್ರಿಪ್ಟನ್ ಮತ್ತು ಕ್ಲೋಸ್ ಕ್ಯಾಪ್ಟನ್‌ಗಳಂತಹ ಲೋಕಲೈಸೇಷನ್ ಸೇವೆಗಳು
ಸೇರಿವೆ.

ಡಿಜಿಟಲ್ ಸಿನಮಾ ತಂತ್ರಜ್ಞಾನಗಳಲ್ಲಿ ಪರಿಣತಿ ಹೊಂದಿರುವ ಸಂಸ್ಥೆಯಾಗಿರುವ ಕ್ಯೂಬ್ ಸಿನಿಮಾ,
ಅತ್ಯುತ್ತಮ ಗುಣಮಟ್ಟದ ಡಿ.ಸಿ.ಪಿ.ಗಳನ್ನು ಒದಗಿಸುವ ಮೂಲಕ ಭಾರತ ಹಾಗೂ ಇತರ ವಿದೇಶೀ
ಚಲನಚಿತ್ರಮಂದಿರಗಳು ತಮ್ಮ ವೀಕ್ಷಕರಿಗೆ ಅತ್ಯುತ್ತಮ ವೀಕ್ಷಣಾ ಅನುಭವವನ್ನು ಒದಗಿಸುವಲ್ಲಿ
ನೆರವಾಗುತ್ತಿದೆ. ಕಲಾ ಹಾಗೂ ತಾಂತ್ರಿಕ ವರ್ಗಗಳ ನಿಕಟ ಸಹೋದ್ಯಮದಿಂದ, ಕ್ಯೂಬ್ ಸಂಸ್ಥೆಯ
ಕಾಂಟೆಂಟ್ ಸರ್ವೀಸಸ್ ವಿಭಾಗವು ತಯಾರಕರ ಆಶಯಕ್ಕೆ ಚ್ಯುತಿ ಬಾರದಂತೆ ಅವರ ಚಿತ್ರಗಳನ್ನು ತೆರೆ
ಮುಟ್ಟಿಸುವಲ್ಲಿ ಸಹಾಯಕವಾಗಿದೆ. ಸಂಸ್ಥೆಯು ವಾರಕ್ಕೆ 30ಕ್ಕೂ ಹೆಚ್ಚು ಸಿನಿಮಾಗಳ ಮತ್ತು 90ಕ್ಕೂ
ಹೆಚ್ಚು ವರ್ಷನ್‌ಗಳ ಕಾರ್ಯಭಾರವನ್ನು ಮಾಸ್ಟರಿಂಗ್, ಗುಣಮಟ್ಟ ನಿಯಂತ್ರಣ ಮತ್ತು ವಿಷಯ
ವಿತರಣೆಗೆ ಅನುವಾಗುವ ನವೀನ ತಂತ್ರಜ್ಞಾನದಿಂದ ಸಜ್ಜುಗೊಂಡಿರುವ ISO 27001 ಪ್ರಮಾಣಿತ*
ಕಾರ್ಯಾಲಯಗಳಿಂದ ನಿರ್ವಹಿಸುತ್ತಿದೆ.
ಚಿತ್ರೋದ್ಯಮದ ಬಹುಕಾಲದ ಬೇಡಿಕೆಯನ್ನು ಪೂರೈಸಲಿದೆ.
ಈ ಲ್ಯಾಬ್‌ನ ಆರಂಭದ ಕುರಿತು ಮಾತನಾಡಿದ ಕ್ಯೂಬ್ ಸಿನಿಮಾದ ಕಾಂಟೆಂಟ್ ಸರ್ವೀಸಸ್ ದಕ್ಷಿಣ
ವಿಭಾಗದ ಸಹಾಯಕ ಉಪಾಧ್ಯಕ್ಷರಾದ ಸತೀಶ್ ತುಳಸಿಯವರು,
“ಬೆಂಗಳೂರಿನಲ್ಲಿ ಈ ಸೌಲಭ್ಯವು ಆರಂಭವಾಗಿರುವುದರಿಂದ, ಗುಣಮಟ್ಟ ಹಾಗೂ ಭದ್ರತೆಗೆ ಒತ್ತು
ಕೂಡುವ ಕನ್ನಡ ಚಿತ್ರರಂಗದ ನಿರ್ಮಾಪಕರಿಗೆ ಶೀಘ್ರವಾಗಿ ಅಗತ್ಯ ಸೇವೆಗಳನ್ನು ಪಡೆಯಲು
ಅನುಕೂಲವಾಗಲಿದೆ. ತನ್ಮೂಲಕ ಕನ್ನಡ ಚಿತ್ರರಂಗದ ವಿವಿಧ ನಿರ್ಮಾಪಕರ ಸಮುದಾಯವನ್ನು
ಬೆಂಬಲಿಸುವುದು ಮತ್ತು ಈ ಚಿತ್ರರಂಗದ ಬೆಳವಣಿಗೆಗೆ ಸಹಕಾರಿಯಾಗುವುದು ನಮ್ಮ ಉದ್ದೇಶವಾಗಿದೆ.
ಬೆಂಗಳೂರು ಸೃಜನಶೀಲತೆ ಮತ್ತು ಹೊಸಕಲ್ಪನೆಗಳ ತವರೂರಾಗಿದೆ. ಇಲ್ಲಿ ಕನ್ನಡ ಸಿನಿಮಾ
ಪ್ರಪಂಚದೊಂದಿಗೆ ಕೈಜೋಡಿಸಲು ನಮಗೆ ಬಹಳ ಆನಂದವಾಗುತ್ತಿದೆ” ಎಂದು ಹೇಳಿದರು.
.ಬೆಂಗಳೂರಿನ ಈ ಹೊಸ ಸೌಲಭ್ಯವು ಚಿತ್ರತಯಾರಕರಿಗೆ ಅತಿ ಶೀಘ್ರವಾಗಿ ವಿಶ್ವಮಟ್ಟದ
ಮಾಸ್ಟರಿಂಗ್ ಸೇವೆಗಳನ್ನು ಸ್ಥಳೀಯವಾಗಿ ಪಡೆದುಕೊಳ್ಳಲು ನೆರವಾಗುವುದಲ್ಲದೇ ಅವರ ನಿರ್ಮಾಣ
ವೆಚ್ಚಗಳನ್ನೂ ಬಹುಪಾಲು ಕಡಿತಗೊಳಿಸುತ್ತದೆ.
ಕ್ಯೂಬ್ ಸಿನಿಮಾ ಕುರಿತು:
ಕ್ಯೂಬ್ ಸಿನಿಮಾ (www.qubecinema.com) ಡಿಜಿಟಲ್ ಸಿನಿಮಾ ತಂತ್ರಜ್ಞಾನ ಕ್ಷೇತ್ರದಲ್ಲಿ ಪೂರಕ
ಪರಿಹಾರಗಳನ್ನು ಅಭಿವೃದ್ಧಿಪಡಿಸುವಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆಯಾಗಿದ್ದು, ನಿರ್ಮಾಪಕರು,
ಚಿತ್ರಮಂದಿರದ ಮಾಲೀಕರು ಮತ್ತು ಪ್ರೇಕ್ಷಕರಿಗೆ ತಾಂತ್ರಿಕವಾಗಿ ಶ್ರೇಷ್ಠವಾದ ಪರಿಹಾರಗಳನ್ನು
ಒದಗಿಸುತ್ತಿದೆ. 135 ದೇಶಗಳಲ್ಲಿ ತನ್ನ ಗುರುತನ್ನು ಮೂಡಿಸಿರುವ ಈ ಸಂಸ್ಥೆ, ಭಾರತದ 4,000ಕ್ಕಿಂತ ಹೆಚ್ಚು
ಚಿತ್ರಮಂದಿರಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಇದರ ಪ್ರಮುಖ ಉತ್ಪನ್ನಗಳಲ್ಲಿ ಕ್ಯೂಬ್ ಎಕ್ಸ್.ಪಿ.
(ಡಿ.ಸಿ.ಐ ಅನುಗುಣ ಡಿಜಿಟಲ್ ಸಿನೆಮಾ ಸರ್ವಗಳು),ಕ್ಯೂಬ್ ವೈರ್ ( ಕಾಂಟೆಂಟ್ ಡಿಸ್ಟ್ರಿಬ್ಯೂಷನ್
ವ್ಯವಸ್ಥೆ), ಮತ್ತು ಎಪಿಕ್ (ಪ್ರೀಮಿಯಂ ಲಾರ್ಜ್ ಫಾರ್ಮಾಟ್ ಪರದೆಗಳು) ಸೇರಿವೆ. ಸಂಸ್ಥೆಯು ಕ್ಯೂಬ್
ಸಿನಿಮಾ ನೆಟ್‌ವರ್ಕ್ (ಕ್ಯೂ.ಸಿ.ಎನ್.) ಎಂಬ ಕೇಂದ್ರಿಕೃತ ಜಾಹೀರಾತು ಮಾರಾಟ ಮತ್ತು ನಿರ್ವಹಣಾ
ಪ್ಲಾಟ್‌ಫಾರ್ಮನ್ನೂ ನಡೆಸುತ್ತಿದೆ.
ಬೆಂಗಳೂರಿನ ಈ ಹೊಸ ಶಾಖೆಯನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮಗಳು ನಿವೇದಿತಾ ಜೊತೆ ಸೇರಿ ಚಾಲನೆ ನೀಡಿದರು. ಈ ಸಂಧರ್ಭದಲ್ಲಿ ಚಲನ ಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ನರಸಿಂಹಲು ಹಾಗೂ ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು, ನಿರ್ದೇಶಕ ದಯಾಳ್ ಹಾಗೂ ಉಳಿದ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು ಭಾಗವಹಿಸಿ. ಕ್ಯೂಬ್ ಸಂಸ್ಥೆ ಯವರನ್ನು ಅಭಿನಂದಿಸಿದರು. ಹಾಗೂ ಸತತ ಬಹಳ ವರ್ಷಗಳ ಬೇಡಿಗೆಗೆ ಈಗ ಮನ್ನಣೆ ಸಿಕ್ಕರುವುದಕ್ಕೆ ಸಂತಸ ವ್ಯಕ್ತ ಪಡಿಸಿದರು. ಇದರಿಂದಾಗಿ ನಿರ್ಮಾಕರ, ನಿರ್ದೇಶಕರ ಹಣ, ಶ್ರಮ, ಸಮಯ ಉಳಿದಂತಾಗಿದೆ.