Purushottamana prasanga Movie. Review. ಎಲ್ಲರ ಅಚ್ಚು ಮೆಚ್ಚಾದ ಈ ಪುರುಷೋತ್ತಮ
ಚಿತ್ರ : ಪುರುಷೋತ್ತಮನ ಪ್ರಸಂಗ
ನಿರ್ದೇಶಕ : ದೇವದಾಸ್ ಕಾಪಿಕಾಡ್
ನಿರ್ಮಾಪಕರು : ವಿ. ರವಿ ಕುಮಾರ್ , ಶಂಶುದ್ದೀನ್
ಸಂಗೀತ : ನಕುಲ್ ಅಭಯಂಕರ್
ಛಾಯಾಗ್ರಾಹಕ :ವಿಷ್ಣು ಪ್ರಸಾದ್
ತಾರಾಗಣ : ಅಜಯ್, ರಿಷಿಕಾ ನಾಯ್ಕ್ , ದೇವದಾಸ್ ಕಾಪಿಕಾಡ್, ವಿಜಯ್ ಶೋಬರಾಜ್ , ನವೀನ್. ಡಿ. ಪಡಿಲ್, ಅರವಿಂದ್ ಬೋಳಾರ್, ಸಾಯಿ ಕೃಷ್ಣ, ಭೋಜರಾಜ್ ಹಾಗೂ ಮುಂತಾದವರು…


ಎಲ್ಲರ ಅಚ್ಚು ಮೆಚ್ಚಾದ ಈ ಪುರುಷೋತ್ತಮ
ಮನುಷ್ಯನಿಗೆ ಬದುಕಲು ಕನಸುಗಳು ಬೇಕು, ಕನಸ್ಸುಗಳನ್ನು ನನಸು ಮಾಡಿಕೊಳ್ಳಲು ಛಲ, ಹಠ ಬೇಕು ಅದನ್ನು ಸಾಕಾರ ಮಾಡಿಕೊಂಡಾಗ ಅಂದು ಕೊಂಡಿದ್ದನ್ನು ಗಳಿಸಿಕೊಂಡಾಗ ಸಿಗುವ ನೆಮ್ಮದಿ, ಆನಂದ ಬೇರೆಯದ್ದೇ ರೀತಿಯಲ್ಲಿ ಇರುತ್ತದೆ. ಅಂತದ್ದೇ ಕನಸ್ಸನ್ನು ಬಾಲ್ಯದಿಂದಲೇ ಹೊತ್ತ ನಮ್ಮ ಕಥಾನಾಯಕ ಏನೆಲ್ಲಾ ಕಷ್ಟ ಪಡುತ್ತಾನೆ, ಅದರಿಂದಾಗುವ ಅವಗಡಗಳು ಏನೇನು ಎನ್ನುದನ್ನು ತುಳು ಚಿತ್ರರಂಗದ ಹಾಗೂ ರಂಗಭೂಮಿಯ ದಿಗ್ಗಜ ದೇವದಾಸ್ ಕಾಪಿಕಾಡ್ ನಗು ನಗುತ್ತಲೇ ಪ್ರೇಕ್ಷಕನಿಗೆ ಒಂದಷ್ಟು ಅರ್ಥಪೂರ್ಣ ಸಂದೇಶವನ್ನು ನೀಡಿದ್ದಾರೆ. ಮೊದಲ ಬಾರಿಗೆ ಕನ್ನಡ ಚಿತ್ರ ನಿರ್ದೇಶನಕ್ಕೆ ಮುಂದಾದ ಕಾಪಿಕಾಡ್ ರವರು ಅಚ್ಚುಕಟ್ಟಾದ ಚಿತ್ರವನ್ನು ಕನ್ನಡಿಗರಿಗೆ ನೀಡಿ ಸೈ ಎನಿಸಿಕೊಂಡಿದ್ದಾರೆ.

ಚಿತ್ರದಲ್ಲಿ ಯಾವುದೇ ಅಶ್ಲೀಲ ಪದ ಬಳಕೆಯಾಗಿಲ್ಲ, ಹಾಸ್ಯದ ಹೆಸರಲ್ಲಿ ಯಾವುದೇ ಡಬ್ಬಲ್ ಮೀನಿಂಗ್ ಡೈಲಾಗ್ ಗಳಿಲ್ಲ, ನಾಯಕ ಒಬ್ಬನೇ ಹತ್ತು ಜನಕ್ಕೆ ಗಾಳಿಯಲ್ಲಿ ತೂರಿಕೊಂಡು ಹೋಗುವ ಹಾಗೆ ಹೊಡೆಯೊಲ್ಲ, ನಾಯಕಿಯ ಸೊಂಟ ಹಿಡಿದು ನೋಡುಗರಿಗೆ ಮುಜುಗರ ತರುವಂತೆ ಅಂಗಾಂಗ ಪ್ರದರ್ಶನವಿಲ್ಲದ ಸ್ವಚ್ಚ ಮನಸ್ಸುಗಳು ಯಾವುದೇ ಮುಜುಗರ ವಿಲ್ಲದೇ ಕುಟುಂಬದ ಎಲ್ಲರೊಂದಿಗೆ ಕೂತು ಎಲ್ಲರು ಖುಷಿಯಿಂದ ನೋಡುವ ಚಿತ್ರ “ಪುರುಷೋತ್ತಮ ಪ್ರಸಂಗ”

ಮೊದಲ ಬಾರಿಗೆ ಪೂರ್ಣ ಮಟ್ಟದ ನಾಯಕನಾಗಿ ಬಣ್ಣ ಹಚ್ಚಿರುವ ನಾಯಕ ಅಜಯ್ ಪೃಥ್ವಿ ತಾನು ರಂಗಭೂಮಿ ಹಿನ್ನೆಲೆಯಿಂದ ಬಂದಿರುವುದನ್ನು ಸಾಬೀತು ಮಾಡಿದ್ದಾನೆ, ಈತನ ಹಾವ ಭಾವ ನಟನೆ ಎಲ್ಲವೂ ಒಳ್ಳೆಯ ನಟನಾಗುವ ಲಕ್ಷಣವಿದೆ ಎನ್ನಬಹುದು.
ಈಗಾಗಲೇ ಮೂರು ಚಿತ್ರಗಳಲ್ಲಿ ಅಭಿನಯಿಸಿರುವ ಅನುಭವ ಈ ಚಿತ್ರದಲ್ಲಿ ಕ್ಯಾಮರಾ ಮುಂದೆ ಯಾವುದೇ ಅಳುಕಿಲ್ಲದೇ ತನ್ನನ್ನು ತೊಡಗಿಸಿಕೊಂಡಿರುವುದು ಕಾಣಿಸುತ್ತದೆ.

ಇನ್ನು ನಾಯಕಿ ರಿಷಿಕಾ ನಾಯಕ್ ಈಕೆ ಮಂಗಳೂರಿನ ಹುಡುಗಿ ಹುಟ್ಟಿದ್ದು ಮಂಗಳೂರು ಬೆಳೆದದ್ದು ಸಮುದ್ರದಾಚೆಗಿನ ಅಭುದಾಬಿ ದೇಶದಲ್ಲಿ. ಮೊದಲ ಬಾರಿಗೆ ಬೆಳ್ಳಿತೆರೆಯ ಮೇಲೆ ತನ್ನ ಅಭಿನಯ ಕೌಶಲ್ಯವನ್ನು ತೆರೆದಿಟ್ಟಿದ್ದಾರೆ. ಈ ಎರಡು ಜೋಡಿಗಳು ಪ್ರೇಕ್ಷಕರನ್ನು ರಂಜಿಸಿ ರಾರಾಜಿಸಿದ್ದಾರೆ.
ಚಿಕ್ಕಂದಿನಿಂದ ದುಬೈಗೆ ಹೋಗಿ ಚನ್ನಾಗಿ ಹಣ ಸಂಪಾದಿಸಿ ಅಕ್ಕನ ಮದುವೆ ಮಾಡಬೇಕು, ಅಪ್ಪ ಅಮ್ಮರನ್ನು ಚನ್ನಾಗಿ ನೋಡಿಕೊಳ್ಳಬೇಕು
ತಾನು ಚಿಕ್ಕಂದಿನಿಂದ ಪ್ರೀತಿಸಿದ ನಾಯಕಿಯನ್ನು ಮದುವೆ ಆಗಬೇಕು ಎಂಬ ಯೋಜನೆಗಳನ್ನು ಹಾಕಿಕೊಂಡ ನಾಯಕನಿಗೆ ಅನಾರೊಗ್ಯದ ತಾಯಿಯನ್ನು ನೋಡಿಕೊಳ್ಳಲು ಕಷ್ಟ ಪಟ್ಟು ದುಡಿವ ಹಾಗೂ ಬಾಲ್ಯದಿಂದ ಸ್ವಚ್ಚ ಮನಸ್ಸಿನಿಂದ ಇಷ್ಟ ಪಟ್ಟು ಪ್ರಾಮಾಣಿಕವಾಗಿ ಪ್ರೀತಿಸುವ ಅಸಾಹಯಕ ಹುಡುಗಿ.

ಈ ಮುದ್ದಾದ ಜೊಡಿಯ ಪ್ರೇಮ, ನಾಯಕನ ಅಕ್ಕನ ಮದುವೆ, ದುಬೈ ಕನಸ್ಸು , ನಾಯಕಿಯ ತಾಯಿ ಅನಾರೋಗ್ಯ, ಇದೆಲ್ಲವನ್ನು ಎದುರಿಸಿ ಸಂಬಾಳಿಸುವುದು ಸಾಧ್ಯಾನಾ..? ಈ ಎಲ್ಲ ಪ್ರೆಶ್ನೆಗಳಿಗೆ ಖಂಡಿತವಾಗಿ ಚಿತ್ರ ಮಂದಿರದಲ್ಲಿ ಸಿನಿಮಾ ನೋಡಬೇಕು.

ರಾಷ್ಟ್ರಕೂಟ ಸಂಸ್ಥೆಯ ಮೂರನೇ ಚಿತ್ರ ಇದಾಗಿದ್ದು ನಿರ್ಮಾಪಕ ರವಿಕುಮಾರ್ ಒಂದು ಒಳ್ಳೆಯ ಚಿತ್ರವನ್ನು ನಿರ್ಮಿಸಿ ನಾಡಿನ ಜನತೆಯ ಮುಂದಿಟ್ಟಿದ್ದಾರೆ.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ ಹಾಗೂ ಕಾಂತಾರದಂತ ಅದ್ಬುತ ಚಿತ್ರವನ್ನು ನೀಡಿದ ರಿಷಬ್ ಶೆಟ್ಟಿ ಚಿತ್ರವನ್ನು ನೋಡಿ ಮೆಚ್ಚಿ ಚಿತ್ರತಂಡಕ್ಕೆ ಬೆನ್ತಟ್ಟಿದ್ದಾರೆ.
ಚಿತ್ರದಲ್ಲಿ ಸಂಗೀತ ನಕುಲ್ ಅಭಯಂಕರ್, ಛಾಯಾಗ್ರಹಣ- ವಿಷ್ಣು ಪ್ರಸಾದ್ ಚನ್ನಾಗಿ ಕಾರ್ಯ ನಿರ್ವಿಹಿಸಿದ್ದಾರೆ

ಚಿತ್ರದ ಕ್ಲೈಮ್ಯಾಕ್ಸ್ ನಿಜಕ್ಕೂ ಅದ್ಬುತವಾಗಿದೆ ಯಾರೂ ಊಹಿಸಲಾರದ ಡಾ,, ರಾಜಕುಮಾರ್ ರವರ ಕಾಮನ ಬಿಲ್ಲು ಚಿತ್ರವನ್ನು ನೆನಪಿಸುವಂತ ದೃಶ್ಯ ಪ್ರೇಕ್ಷಕನ ಕಣ್ಣು ಮೆಚ್ಚುಗೆಯಿಂದ ಒದ್ದೆಯಾಗುವುದು ಖಂಡಿತ.
ಇದೊಂದು ಪರಿಪೂರ್ಣ ಫ್ಯಾಮಿಲಿ ಸೆಂಟಿಮೆಂಟ್ ನಿಂದ ಕೂಡಿರುವ ಒಂದು ಒಳ್ಳೆಯ ಸಂದೇಶ ಇರುವಂತ ಹಾಸ್ಯಮಯ ಚಿತ್ರ “ಪುರುಷೋತ್ತಮನ ಪ್ರಸಂಗ”
ರೇಟಿಂಗ್ – 3.5/5