Prithvi Ambar and dhaniyaram acted chaukidar movie shooting start at Bande Mahakali Temple. ಬಂಡೆ ಮಹಾಕಾಳಿ ಆಶೀರ್ವಾದದೊಂದಿಗೆ ಸೆಟ್ಟೇರಿತು ಪೃಥ್ವಿ ಅಂಬಾರ್ ‘ಚೌಕಿದಾರ್’….

ಬಂಡೆ ಮಹಾಕಾಳಿ ಆಶೀರ್ವಾದದೊಂದಿಗೆ ಸೆಟ್ಟೇರಿತು ಪೃಥ್ವಿ ಅಂಬಾರ್ ‘ಚೌಕಿದಾರ್’….

ಸೆಟ್ಟೇರಿತು ರಥಾವರ ಡೈರೆಕ್ಟರ್ ಹೊಸ ಸಿನಿಮಾ…ಬಂಡೆ ಮಹಾಕಾಳಿ ದೇಗುಲದಲ್ಲಿ ನೆರವೇರಿತು ‘ಚೌಕಿದಾರ್’ಗೆ ಮುಹೂರ್ತ

‘ಚೌಕಿದಾರ್‌’ಗೆ ಮುಹೂರ್ತದ ಸಂಭ್ರಮ..ಪೃಥ್ವಿ-ಧನ್ಯ ಹೊಸ ಸಿನಿಮಾ

‘ದಿಯಾ’ ಖ್ಯಾತಿಯ ನಟ ಪೃಥ್ವಿ ಅಂಬಾರ್‌ ನಟಿಸುತ್ತಿರುವ ‘ಚೌಕಿದಾರ್‌’ ಸಿನಿಮಾಗೆ ಚಾಲನೆ ಸಿಕ್ಕಿದೆ. ಬೆಂಗಳೂರಿನ ಬಂಡೆ ಮಹಾಕಾಳಿ ದೇಗುಲದಲ್ಲಿಂದು ಮುಹೂರ್ತ ನೆರವೇರಿದೆ. ಚಿತ್ರದ ನಿರ್ಮಾಪಕರಾದ ಕಲ್ಲಹಳ್ಳಿ ಚಂದ್ರಶೇಖರ್ ಕ್ಲ್ಯಾಪ್ ಮಾಡಿದರೆ, ಸಾಯಿಕುಮಾರ್ ಕ್ಯಾಮರಾ ಸ್ವಿಚ್‌ ಆನ್‌ ಮಾಡಿದರು.

‘ರಥಾವರ’ ಖ್ಯಾತಿಯ ಚಂದ್ರಶೇಖರ್ ಬಂಡಿಯಪ್ಪ ಚೌಕಿದಾರ್ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ‘ಡೈಲಾಗ್ ಕಿಂಗ್’ ಸಾಯಿಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ದೊಡ್ಮನೆ ಕುಡಿ ಧನ್ಯರಾಮ್ ಕುಮಾರ್ ನಾಯಕಿಯಾಗಿ ನಟಿಸಿದ್ದಾರೆ. ಮುಹೂರ್ತದ ಬಳಿಕ ಸುದ್ದಿಗೋಷ್ಠಿ ನಡೆಸಿದ ಚಿತ್ರತಂಡ ಸಿನಿಮಾ ಹಂಚಿಕೊಂಡಿತು.

ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಮಾತನಾಡಿ, ಇದು ನನ್ನ ಆರನೇ ಸಿನಿಮಾ. ಬಹುಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಕಲ್ಲಹಳ್ಳಿ ಚಂದ್ರಶೇಖರ್ ಈ ಸಿನಿಮಾದ ನಿರ್ಮಾಪಕರು. ರಥಾವರ ಹಿಟ್ ಆದಮೇಲೆ ನನಗೆ ಒಂದು ಸಿನಿಮಾ ಮಾಡಿ ಎಂದು ಕೇಳುತ್ತಿದ್ದರು. ಪೃಥ್ವಿ ಅವರನ್ನು ಲವರ್ ಬಾಯ್ ರೀತಿ ತೋರಿಸಿದ್ದಾರೆ. ಬೇರೆ ರೀತಿ ಟ್ರೈ ಮಾಡಬೇಕು ಎಂಬ ಆಸೆಯಿಂದ ಕಥೆ ಹೇಳಿದೆ. ಅವರು ಒಕೆ ಎಂದರು. ಅವರು ಪಾತ್ರಕ್ಕಾಗಿ ಸಾಕಷ್ಟು ತಯಾರಿ ನಡೆಸುತ್ತಿದ್ದಾರೆ. ಅವರ ಜೋಶ್ ನೋಡಿ ಖುಷಿಯಾಯ್ತು. ಧನ್ಯ ಮೇಡಂ, ಸಾಯಿಕುಮಾರ್ ಸರ್, ಧರ್ಮ ಸರ್ ಎಲ್ಲರೂ ತಾರಾಬಳಗದಲ್ಲಿದ್ದಾರೆ. ಸಚಿನ್ ಬಸ್ರೂರ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.

ನಟ ಪೃಥ್ವಿ ಅಂಬಾರ್ ಮಾತನಾಡಿ, ತಾಯಿ ಆಶೀರ್ವಾದದಿಂದ ಚೌಕಿದಾರ್ ಸಿನಿಮಾಗೆ ಚಾಲನೆ ಸಿಕ್ಕಿದೆ. ಖುಷಿ ದಿನ ಇವತ್ತು. ಕಥೆ ಕೇಳಿದಾಗ ನನಗೆ ಅನಿಸಿದ್ದು, ನಾನು ಈ ಪಾತ್ರ ಮಾಡಲು ಸಾಕಷ್ಟು ಎಫರ್ಟ್ ಹಾಕಬೇಕು ಎಂದು ನನಗೆ ಗೊತ್ತಾಯ್ತು, ಪ್ರಿಪೇರ್ ಆಗಲು ಟೈಮ್ ಬೇಕು ಎಂದೆ. ಅದರಂತೆ ಅವರು ನನಗೆ ಟೈಮ್ ಕೊಟ್ಟರು, ಅಲ್ಲಿಂದ ನನ್ನ ಜರ್ನಿ ಶುರುವಾಯ್ತು. ಒಂದು ದಿನ ಟೀಸರ್ ಶೂಟ್ ಮಾಡಿದ್ದೇವೆ.‌ ಬಹಳ ಖುಷಿ.‌ ಲಕ್ಕಿ ಫೀಲ್ ಮಾಡುತ್ತೇನೆ. ಜೀವನದ ಬಗ್ಗೆ ಬಹಳ ಅನುಭವವಿದೆ. ಕಂಪ್ಲೀಟ್ ಫ್ಯಾಮಿಲಿ ಜೊತೆಗೆ ಬೇರೆ ಎಲಿಮೆಂಟ್ ಮಿಕ್ಸ್ ಮಾಡಲಾಗಿದೆ. ಚೌಕಿದಾರ್ ಟೈಟಲ್ ಕೊಡುವ ವೈಬ್ಸ್ ಕಥೆಯಲ್ಲಿರುತ್ತದೆ ಎಂದರು.

ಸಾಯಿಕುಮಾರ್ ಮಾತನಾಡಿ, ಬಹಳ ಸಂತೋಷವಾಗುತ್ತಿದೆ. ಮುಂದಿನ ವರ್ಷ ನಟನಾಗಿ 50 ವರ್ಷ ಕಂಪ್ಲೀಟ್ ಆಗುತ್ತಿದೆ. ಕಾರಣ ಇದಕ್ಕೆಲ್ಲಾ ಅಪ್ಪ ಅಮ್ಮ. ನೀವು ಕನ್ನಡ ಸಿನಿಮಾ ಮಾಡಬೇಕು ಎಂದು ಅಮ್ಮ ಹೇಳುವವರು. ಕನ್ನಡ ಜರ್ನಿಗೂ 30 ವರ್ಷವಾಯ್ತು. ಪ್ರತಿ ದಿನ, ಪ್ರತಿ ಸಿನಿಮಾದ ಪಾತ್ರ ಚಾಲೆಂಜ್. ಈಗ ಹದಿನೈದು ಸಿನಿಮಾ ನಡೆಯುತ್ತಿದೆ. ಚಂದ್ರಶೇಖರ್ ಸಿನಿಮಾ ಗ್ಲಿಂಪ್ಸ್ ಚೆನ್ನಾಗಿದೆ. ನನ್ನ ತಮ್ಮ ಕೂಡ ಅದ್ಭುತ ಡೈರೆಕ್ಟರ್ ಎಂದರು.

ಚೌಕಿದಾರ್ ಕಥೆ ಕೇಳಿದೆ ಎಮೋಷನ್ ಡ್ರಾಮಾ. ನಾನು ತುಳು ಸಿನಿಮಾ ಮಾಡಿದ್ದೇನೆ. ಅದರಲ್ಲಿ ಪೃಥ್ವಿ ಹೀರೋ. ನಾನು ಅದರಲ್ಲಿ ಪೊಲೀಸ್. ಸಬ್ಜಕ್ಟ್ ಚೆನ್ನಾಗಿದೆ. ಪೃಥ್ವಿಗೆ ನಾನು ಚೌಕಿದಾರ್, ನನಗೆ ಚಂದ್ರಶೇಖರ್ ಬಂಡಿಯಪ್ಪ ಚೌಕಿದಾರ್. ಇದು ಒಂದೊಳ್ಳೆ ಪ್ರಯತ್ನ ಎಂದರು.

ನಟಿ ಧನ್ಯ ರಾಮ್ ಕುಮಾರ್ ಮಾತನಾಡಿ, ಚಂದ್ರಸರ್ ಇಬ್ಬರಿಗೂ ಧನ್ಯವಾದ. ಚೌಕಿದಾರ್ ಸಿನಿಮಾದಲ್ಲಿ ನನಗೆ ನಟಿಸಲು ಅವಕಾಶ ನೀಡಿದಕ್ಕೆ. ಪೃಥ್ವಿ ಅವರು, ಧರ್ಮ ಸರ್, ಸಾಯಿಕುಮಾರ್ ಸರ್ ನಟರ ಜೊತೆ ನಾನು ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತಿರುವುದು ಹೆಮ್ಮೆಯ ವಿಷಯ ಎಂದರು.

ವಿದ್ಯಾಶೇಖರ್ ಎಂಟರ್‌ಟೈನ್ಮೆಂಟ್‌ ಬ್ಯಾನರ್ ಅಡಿಯಲ್ಲಿ ಕಲ್ಲಹಳ್ಳಿ ಚಂದ್ರಶೇಖರ್ ‘ಚೌಕಿದಾರ್’ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಸಚಿನ್‌ ಬಸ್ರೂರು ಸಂಗೀತ ನಿರ್ದೇಶನ, ವಿ. ನಾಗೇಂದ್ರ ಪ್ರಸಾದ್‌, ಪ್ರಮೋದ್‌ ಮರವಂತೆ ಸಾಹಿತ್ಯ ಚಿತ್ರಕ್ಕಿದೆ. ‘ಚೌಕಿದಾರ್’ ಬಹುಭಾಷೆಯಲ್ಲಿ ಮೂಡಿ ಬರುತ್ತಿದ್ದು, ಈವರೆಗೆ ಸಿನಿಮಾದಲ್ಲಿ ಲವರ್‌ ಬಾಯ್‌ನಂತೆ ಕಾಣಿಸಿಕೊಂಡಿರುವ ಪೃಥ್ವಿ ಅಂಬಾರ್‌ ಈ ಚಿತ್ರದಲ್ಲಿ ಆ್ಯಕ್ಷನ್ ಸೀಕ್ವೆನ್ಸ್ ಮೂಲಕ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಪಕ್ಕಾ ಫ್ಯಾಮಿಲಿ ಎಂಟರ್ಟೈನರ್. ಕಥಾಹಂದರ ಹೊಂದಿರುವ ಚೌಕಿದಾರ್ ಶೀಘ್ರದಲ್ಲೇ ಚಿತ್ರತಂಡ ಶೂಟಿಂಗ್ ಅಖಾಡಕ್ಕೆ ಧುಮುಕಲಿದೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor