“Preethiya ‌‌ Huccha” movie release on 18th April. ಪ್ರೀತಿಯ ಹುಚ್ಚ ಚಿತ್ರ ಈ ವಾರ ತೆರೆಗೆ

‌‌ಪ್ರೀತಿಯ ಹುಚ್ಚ ಈವಾರ ತೆರೆಗೆ

90 ದಶಕದಲ್ಲಿ ನಡೆದಂಥ ದುರಂತ ಪ್ರೇಮ ಕಥೆಯನ್ನಾಧರಿಸಿ, ‌‌‌ಕುಮಾರ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಬಿ.ಜಿ.ನಂದಕುಮಾರ್ ಹಾಗೂ
ವಿ.ಕುಮಾರ್ ಸೇರಿ ನಿರ್ಮಾಣ ಮಾಡಿರುವ ಚಿತ್ರ ಪ್ರೀತಿಯ ಹುಚ್ಚ ಈ ವಾರ ರಾಜ್ಯಾದ್ಯಂತ ತೆರೆಕಾಣುತ್ತಿದೆ.


90ರ ಕಾಲಘಟ್ಟದಲ್ಲಿ ಅರಸೀಕೆರೆ ಶ್ರವಣಬೆಳಗೊಳದ ಮಧ್ಯೆ ನಡೆದಂಥ ನೈಜ ಘಟನೆಯಿದಾಗಿದ್ದು, ದಲಿತ ಯುವತಿಯೊಬ್ಬಳನ್ನು ಗೌಡ್ರ ಮನೆಯವರು ಹೇಗೆ ನಡೆಸಿಕೊಳ್ತಿದ್ದರು‌. ಮದುವೆಯಾದ ಮೊದಲ ರಾತ್ರಿಯೇ ದುಷ್ಟರ ಜಾಲಕ್ಕೆ ಸಿಕ್ಕ ಆ ಯುವತಿ, ಮುಂದೆ ಮುಂಬೈ ರೆಡ್‌ಲೈಟ್ ಏರಿಯಾಗೆ ಮಾರಾಟವಾಗಿ ಏನೆಲ್ಲ ಸಂಕಷ್ಟಗಳನ್ನು ಎದುರಿಸಬೇಕಾಯ್ತು.ಪತ್ನಿ ಕಳೆದುಕೊಂಡ ನಾಯಕ ಯಾವ ಸ್ಥಿತಿ ತಲುಪಿದ ಎಂದು ಈ ಚಿತ್ರದಲ್ಲಿ ಹೇಳಲಾಗಿದೆ.

ವಿ.ಕುಮಾರ್ ಅವರೇ ಈ ಚಿತ್ರದ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ.‌
ವಿಜಯ್, ಕುಂಕುಮ್ ಹರಿಹರ, ದಶಾವರ ಚಂದ್ರು, ದುಬೈ ರಫೀಕ್, ಉಮೇಶ್ ಪುಂಗ, ಅಲಿಶಾ, ಆರ್.ಚಂದ್ರು, ಪುಷ್ಪಲತಾ, ಜೋಗಿ ನಾಗರಾಜ್, ಪೂರ್ಣಿಮಾ, ವಿ.ಭಾಸ್ಕರರಾಜ್, ಮಹದೇವಸ್ವಾಮಿ. ಗೀತಾ, ಸುನಿತಾ, ಪ್ರಮೋದ್, ಮಹದೇವ, ಆನಂದ್
ಐಟಂ ಡಾನ್ಸರ್ ಅಲಿಶಾ‌ ಮುಂತಾದವರಿದ್ದಾರೆ.


ತಶಿ ರಂಗರಾಜನ್ ಅವರ ಸಂಗೀತ, ಸುನಿಲ್ ಕೆ.ಆರ್‌.ಎಸ್. ಅವರ ಛಾಯಾಗ್ರಹಣ, ಸುಪ್ರೀಂ ಸುಬ್ಬು ಅವರ ಸಾಹಸ, ಪಾಪುನ್ ಸಾಹು ಅವರ ಸಂಕಲನ, ಮನು ಸಂತೋಷ್ ಅವರ ನೃತ್ಯ,‌ಸತ್ಯ ಸಾಮ್ರಾಟ್ ಅವರ ಸಾಹಿತ್ಯ ಈ ಚಿತ್ರಕ್ಕಿದೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor