PRANAYAM MOVIE REVIEW. ಪ್ರಣಯಂ’ ಚಿತ್ರ ರೊಮ್ಯಾಂಟಿಕ್‍, ಮತ್ತು ಥ್ರಿಲ್ಲರ್ ಚಿತ್ರ .

ಚಿತ್ರ: ಪ್ರಣಯಂ
ನಿರ್ದೇಶನ: ದತ್ತಾತ್ರೇಯ
ನಿರ್ಮಾಣ: ಪರಮೇಶ್‍
ತಾರಾಗಣ: ರಾಜವರ್ಧನ್‍, ನೈನಾ ಗಂಗೂಲಿ, ಗೋವಿಂದೇಗೌಡ ಮುಂತಾದವರು.

Rating – 3/5

ಪ್ರಣಯಂ’ ಚಿತ್ರ ಟೈಟಲ್ ಕೇಳುತ್ತಿದ್ದಂತೆ ಇದೊಂದು ಶುದ್ಧ ರೊಮ್ಯಾಂಟಿಕ್‍ ಸಿನಿಮಾ ಎನ್ನುವುದು ಅರ್ಥವಾಗುತ್ತದೆ. ಹಾಗೆ ಚಿತ್ರದಲ್ಲಿ ಥ್ರಿಲ್ಲರ್ ಅಂಶಗಳಿವೆ.

ಚಿತ್ರದ ನಾಯಕ ನಾಯಕಿ ಇಬ್ಬರಿಗೂ ಮದುವೆಯಾಗುತ್ತದೆ. ಇಬ್ಬರೂ ಹನಿಮೂನಿಗೆ ಹೊರಡುತ್ತಾರೆ. ಆದರೆ ಹನಿಮೂನ್ಹೊ ಯಾರೊಂದಿಗೆ ಆಗುತ್ತದೆ ಎನ್ನುವುದು ಕುತೂಹಲ ಮತ್ತು ನಿಗೂಡ. ಮೊದಲ ರಾತ್ರಿ ರೂಂ ಲಾಕ್ ಆಗುತ್ತದೆ ಚಿಲಕ ತೆಗೆದು ನೋಡಿದರೆ, ಮದುಮಗ ಒಳಗೆ ಲಾಕ್‍ ಆಗಿರುತ್ತಾನೆ. ಹಾಗಿರುವಾಗ, ಮದುಮಗಳು ಹನಿಮೂನ್‍ಗೆ ಹೋಗಿದ್ದು ಯಾರ ಜೊತೆಗೆ? ಇದೇ ಚಿತ್ರದ ಮೂಲ ತಿರುವು.


ಇಲ್ಲಿಂದ ತಣ್ಣಗೆ ಸಾಗುವ ‘ಪ್ರಣಯಂ’ ಚಿತ್ರ ಮತ್ತೊಂದು ಮಗ್ಗಲಿನಿಂದ ಬೇರೆಯದೇ ರೀತಿಯಲ್ಲಿ ವೇಗ ತೆಗೆದು ಕೊಳ್ಳುತ್ತದೆ.
ಈ ಘಟನೆಯಿಂದ ಪ್ರೇಕ್ಷಕ ನಿಗೆ ಸೀಟಿನ ಅಂಚಿಗೆ ಬಂದು ಕೂರುವಂತಾಗುತ್ತದೆ.
‘ವಿದೇಶದಲ್ಲಿ ನೆಲೆಸಿರುವ ಯುವಕನೊಬ್ಬ ಸ್ವದೇಶಕ್ಕೆ ಬಂದು ತನ್ನ ಮಾವನ ಮಗಳನ್ನೇ ಮದುವೆಯಾಗುತ್ತಾನೆ. ನಂತರ ಮೊದಲ ರಾತ್ರಿ ಆಗುವ ಘಟನೆಯಿಂದ ನಾಯಕಿಯನ್ನು ಕರೆದೊಯ್ದಿದ್ದು ಯಾರು? ಆಕೆ ಹೋಗಿದ್ದು ಎಲ್ಲಿಗೆ? ನಂತರ ನಾಯಕ ಏನು ಮಾಡುತ್ತಾನೆ? ಮುಂತಾದ ಹಲವು ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದ್ದರೆ ‘ಪ್ರಣಯಂ’ ಚಿತ್ರ ನೋಡಬೇಕು.

ಬಿಚ್ಚುಗತ್ತಿ’ ಎಂಬ ಐತಿಹಾಸಿಕ ಚಿತ್ರದ ನಂತರ ರಾಜವರ್ಧನ್‍ ತುಂಬಾ ರೊಮ್ಯಾಂಟಿಕ್ ಆಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರಿಗೆ ಇದು ಬೇರೆ ತರಹದ ಸಿನಿಮಾ. ಇಲ್ಲಿ ಅವರು ಎರಡು ಶೇಡ್‍ಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿ ನೈನಾ ಗಂಗೂಲಿ ತಮ್ಮ ಅಭಿನಯಕ್ಕಿಂತ ಗಮನಸೆಳೆಯುವುದು ಬಹಳ ಗ್ಲಾಮರಸ್‍ ಆಗಿ. ಬಹುಶಃ ಕನ್ನಡದ ಯಾವ ನಟಿಯೂ ಇಷ್ಟೊಂದು ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಆ ತರಹದ್ದೊಂದು ಪಾತ್ರದಲ್ಲಿ ನೈನಾ ಇಲ್ಲಿ ಅಭಿನಯಿಸಿದ್ದಾರೆ. ಸಿನಿಮಾದಲ್ಲಿ ನಾಯಕ ಮತ್ತು ನಾಯಕಿ ಅಭಿನಯಕ್ಕೆ ಮತ್ತಷ್ಟು ಗಮನ ಹರಿಸಿದರೆ ಒಳಿತು ಎನ್ನುವುದು ಚಿತ್ರ ನೋಡಿದವರ ಅಭಿಪ್ರಾಯ.

ಒಂದೆರಡು ಹಾಡುಗಳು, ಫೈಟುಗಳು, ಕಾಮಿಡಿ, ನಾಯಕ-ನಾಯಕಿಯ ನಡುವೆ ಪ್ರಣಯ ದೃಶ್ಯಗಳು ಪ್ರೇಕ್ಷಕನ ಮೈ ನವಿರೇಳಿಸುತ್ತದೆ. ನಾಯಕಿ ಕಿಡ್ನಾಪ್ ಆದಾಗ ಕೈಯಲ್ಲಿ ಮೊಬೈಲ್ ಇರುವುದು ನಿರ್ದೇಶಕ ಮರೆತಂತಿದೆ. ಮೊಬೈಲ್ ಮೂಲಕ ಯಾರನ್ನಾದರು ಸಂಪರ್ಕಿಸ ಬಹುದು ಅವರಿಗೆ ಗೊತ್ತಾಗಿಲ್ಲ ಪಾಪ. ಕಥೆಯಲ್ಲಿ ಹಲವು ಓರೆಕೋರೆಗಳಿದ್ದರೂ ಅವೆಲ್ಲವನ್ನೂ ಬದಿಗಿಟ್ಟು ಮರೆಸುವುದು ಮನೋಮೂರ್ತಿ ಯವರ ಮೊಹಕ ಹಾಡುಗಳು ಮತ್ತು ನಾಗೇಶ್‍ ಆಚಾರ್ಯ ಅವರ ಛಾಯಾಗ್ರಹಣ.


ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಗಮನಸೆಳೆಯುತ್ತದೆ.
‘ಮಿಕ್ಕಂತೆ ಹಲವು ಪೋಷಕ ನಟರಿದ್ದಾರೆ ಮತ್ತು ಎಲ್ಲರೂ ತಮ್ಮ ಕೆಲಸ ಮಾಡಿದ್ದಾರೆ. ಗೋವಿಂದೇಗೌಡರ ಕಾಮಿಡಿಯಂತೂ 80ರ ದಶಕದ ಎನ್‍.ಎಸ್‍. ರಾವ್‍ ಮತ್ತು ಉಮಾಶ್ರೀ ಅವರ ಹಾಸ್ಯಮಯ ದೃಶ್ಯಗಳನ್ನು ನೆನಪಿಸುತ್ತವೆ. ಒಟ್ಟಿನಲ್ಲಿ ಒಂದು ಕಮರ್ಷಿಯಲ್ ಗ್ಲಾಮರಸ್ ಆದಂತ ಚಿತ್ರವನ್ನು ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಚಿತ್ರ ಮಂದಿರಕ್ಕೆ ಬರಲೇ ಬೇಕು.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor