Pramvha “ಪರಂವಃ ಚಿತ್ರದ ಹಾಡು ಮೆಚ್ಚಿ ಚಿತ್ರತಂಡಕ್ಕೆ ಶುಭಕೋರಿದ ಅಶ್ವಿನಿ ಪುನೀತ್ ರಾಜಕುಮಾರ್”

*ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರಿಂದ ಬಿಡುಗಡೆಯಾಯಿತು “ಪರಂವಃ” ಚಿತ್ರದ ಮೂರನೇ ಹಾಡು* .

*ಹಾಡು ಮೆಚ್ಚಿ ಚಿತ್ರತಂಡಕ್ಕೆ ಶುಭಕೋರಿದ ಅಶ್ವಿನಿ ಪುನೀತ್ ರಾಜಕುಮಾರ್* .

ಪೀಪಲ್ ವರ್ಲ್ಡ್ ಫಿಲಂಸ್ ಲಾಂಛನದಲ್ಲಿ 200 ಜನ ಸ್ನೇಹಿತರು ಸೇರಿ ನಿರ್ಮಿಸಿರುವ, ಪ್ರೇಮ್ ಸಿಡೇಗಲ್, ಮೈತ್ರಿ ಜೆ ಕಶ್ಯಪ್, ಗಣೇಶ್ ಹೆಗ್ಗೋಡು ಮುಂತಾದವರು ಮುಖ್ಯ ಭೂಮಿಕೆಯಲ್ಲಿ ನಟಿಸಿರುವ,
ಈ ಮಣ್ಣಿನ ಹೆಮ್ಮೆಯ ಕಲೆಯಾದ ವೀರಗಾಸೆಯ ಕುರಿತಾದ ಜೊತೆಗೆ ತಂದೆ ಮಗನ ನಡುವಿನ ಭಾವನಾತ್ಮಕ ಪಯಣದ ಕುರಿತು ಮೂಡಿಬಂದಿರುವ ಸಂತೋಷ್ ಕೈದಾಳರವರ ನಿರ್ದೇಶನದ “ಪರಂವಃ” ಚಲನಚಿತ್ರದ ‘ಕಿರುದೀಪ ನೀ’ ಎಂಬ ಮೂರನೇ ಲಿರಿಕಲ್ ಹಾಡು ‘Saregama Kannada’ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ.ಈ ಹಾಡನ್ನು ಗಾಯಕ ಮೆಹಬೂಬ್ ಸಾಬ್ ಹಾಡಿದ್ದು, ನಾಗೇಶ್ ಕುಂದಾಪುರ, ಸಂಕೇತ್ ಅಂಬಲಿ ಹಾಗೂ ಕಿರಣ್ ಎನ್ ಆರ್ ಪುರ ಸೇರಿ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ.

ಮಾನ್ಯ ಮಾಜಿಮುಖ್ಯಮಂತ್ರಿಗಳಾದ ಹೆಚ್ ಡಿ ಕುಮಾರಸ್ವಾಮಿಯವರು ಈ ಲಿರಿಕಲ್ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಈ ಹಾಡನ್ನು ವೀಕ್ಷಿಸಿದ ಶ್ರೀಮತಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ರವರು ಹಾಡನ್ನು ಮೆಚ್ಚಿ,ಚಿತ್ರತಂಡಕ್ಕೆ ಶುಭವಾಗಲೆಂದು ಹಾರೈಸಿದ್ದಾರೆ.
ಈ ಹಾಡಿಗೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈಗಾಗಲೇ ಬಿಡುಗಡೆಯಾಗಿ ಜನರಿಂದ ಮನ್ನಣೆಗಳಿಸುತ್ತಿರೊ ಟೀಸರ್ ಹಾಗೂ ಮೊದಲೆರಡು ಲಿರಿಕಲ್ ಹಾಡುಗಳಿಗೆ ಮಾಧ್ಯಮ ಮಿತ್ರರಾದ ನೀವುಗಳು ಪ್ರೀತಿಯಿಂದ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹಿಸಿದಂತೆ,ಈ ಹಾಡನ್ನು ಸಹ ಹೆಚ್ಚಿನ ಹೃದಯಗಳಿಗೆ ತಲುಪಿಸಲು ಸಹಕರಿಸಬೇಕೆಂದು ಚಿತ್ರತಂಡ ವಿನಂತಿ ಮಾಡಿದೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor