Prabhutva movie Review. ನೋಟು ಓಟುಗಳ ಗದ್ದಲದಲ್ಲಿ ಪ್ರಭುತ್ವ.
ಚಿತ್ರ ವಿಮರ್ಶೆ
ಚಿತ್ರ – ಪ್ರಭುತ್ವ
ನಿರ್ಮಾಪಕರು -ರವಿರಾಜ್, MD Dr, ಶಿವಕುಮಾರ್
ಕಥೆ –
ನಿರ್ದೇಶನ –
ಛಾಯಾಗ್ರಹಣ – ಕೆ.ಎಸ್. ಚಂದ್ರಶೇಖರ್
ಸಂಗೀತ – ಎಮಿಲ್ ಮೊಹಮದ್
ಸಂಕಲನ – ಕೆ.ಎಮ್. ಪ್ರಕಾಶ್
ಕಲಾವಿದರು – ಚೇತನ್ ಚಂದ್ರ, ಪಾವನ, ಅವಿನಾಶ್, ಅನಿತಾಭಟ್, ಶಶಿಕುಮಾರ್, ಧರ್ಮ, ನಾಜಿರ್, ಆದಿ ಲೋಕೆಶ್, ಶರತ್ ಲೋಹಿತಾಶ್ವ, ರೂಪಾದೇವಿ, ಅಂಬಿಕ, ರಾಜೇಶ್ ನಟರಂಗ, ಶಂಕರ್ ಅಶ್ವತ್, ಹೊನ್ನಾವಳ್ಳಿ ಕೃಷ್ಣ, ಪೂಜಾ ಲೋಕೇಶ್, ಸಂಗೀತಾ, ಅನಿತಾಭಟ್. ಮುಂತಾದವರು.

ಪ್ರಭುತ್ವ ಚಿತ್ರ ವಿಮರ್ಶೆ
ಬ್ರಿಟಿಷ್ ನವರು ಭಾರತ ಬಿಟ್ಟು ತೊಲಗಿದಾಗ ನಮಗೆ ಸ್ವಾತಂತ್ರ ಬರಲಿಲ್ಲ. ನಮ್ಮ ರಾಜಕರಣಿಗಳಿಂದ ನಮ್ಮ ದೇಶಕ್ಕೆ ಸ್ವಾತಂತ್ರ ಸಿಗಬೇಕು ಎನ್ನುವುದೇ ಪ್ರಭುತ್ವ ಚಿತ್ರದ ಮೂಲ ತಿರುಳು.
ಪ್ರಜಾ ಪ್ರಭುತ್ವದ ದೇಶವಾದ ಭಾರತದಲ್ಲಿ ಪ್ರಜೆಗಳೇ ಪ್ರಭುಗಳು ಎನ್ನುವ ಮಾತಿ ಬರೀ ಪುಸ್ತಕದಲ್ಲಿದೆ. ರಾಜಕರಣಿಗಳು ಜನರಿಗೆ ಹೇಗೆ ಮೋಸ ಮಾಡಿ ದೇಶವನ್ನು ಹೇಗೆ ಲೂಟಿ ಮಾಡುತ್ತಿದ್ದಾರೆ, ಜನರ ಪಾತ್ರವೇನು, ನೋಟಿಗಾಗಿ ಓಟು ಮಾರಿಕೊಂಡರೆ ಮುಂದೆ ಜನರಿಗಾಗುವ ವಂಚನೆಗಳೇನು ಎನ್ನುವುದನ್ನು ಪ್ರಭುತ್ವ ಚಿತ್ರದಲ್ಲಿ ಚನ್ನಾಗಿ ತೋರಿಸಿದ್ದಾರೆ.

ಚೇತನ್ ಚಂದ್ರ ಇಡೀ ಚಿತ್ರ ಆವರಿಸಿಕೊಂಡಿದ್ದಾರೆ.
ಸಿನಿಮಾದಲ್ಲಿ ಚೇತನ್ ಚಂದ್ರ ಸುಸ್ತಾಗುವಷ್ಟು ಡೈಲಾಗ್ ಹೊಡೆದಿದ್ದಾರೆ.
ಚೇತನ್ ಚಂದ್ರ ಒಬ್ಬ ಪ್ರತಿಭಾವಂತ ನಟ, ಯಾವುದೇ ಪಾತ್ರವಿದ್ದರೂ ಪ್ರಾಮಾಣಿಕವಾಗಿ ನ್ಯಾಯ ಒದಗಿಸುತ್ತಾರೆ. ಅದೇ ನಿಟ್ಟಿನಲ್ಲಿ ಚೇತನ್ ಪ್ರಭುತ್ವ ಚಿತ್ರದಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಇಡೀ ಚಿತ್ರದಲ್ಲಿ ಚೇತನ್ ಚಂದ್ರ ತುಂಬಾ ಸರ್ಕಸ್ ಮಾಡಿದ್ದಾರೆ.
ನಾಯಕಿಯಾಗಿ ಪಾವನಿ ಕೂಡ ಪಾತ್ರಕ್ಕೆಷ್ಟು ಬೇಕೋ ಅಷ್ಟು ತಮ್ಮನ್ನ ತೊಡಗಿಸಿಕೊಂಡಿದ್ದಾರೆ.
ಈ ಚಿತ್ರದಲ್ಲಿ ಮೂರು ಚಿತ್ರಕ್ಕಾಗುವಷ್ಟು ಕಲಾವಿದರ ದಂಡೇ ಇದೆ.

ನಿರ್ಮಾಪಕರು ಈ ಚಿತ್ರಕ್ಕೆ ಅಗತ್ಯಕ್ಕಿಂತಲೂ ಹೆಚ್ಚೇ ಹಣ ಸುರಿದಿರುವುದು ಕಾಣುತ್ತದೆ.
ಎಲ್ಲಕ್ಕಿಂತಲೂ ಮುಖ್ಯವಾಗಿ ನಿರ್ಮಾಪಕರು ಇಲ್ಲಿ ಗೆಲ್ಲಬೇಕು, ನಿರ್ಮಾಪಕರ ಹಣಕ್ಕೆ ನ್ಯಾಯ ಸಿಗಬೇಕು. ಮೊದಲು ಯಾರನ್ನು ನಂಬಿ ನಿರ್ಮಾಪಕರು ಹಣ ಹಾಕುತ್ತಾರೋ ಅದನ್ನು ಉಳಿಸಿಕೊಳ್ಳಬೇಕು. ಆಗಲೇ ಒಂದು ಒಳ್ಳೆಯ ಚಿತ್ರ ಹೊರಗೆ ಬರುತ್ತದೆ ಎನ್ನಬಹುದು.
ಚಿತ್ರದಲ್ಲಿ ಛಾಯಾಗ್ರಹಣ ಚನ್ನಾಗಿ ಮೂಡಿಬಂದಿದೆ. ಹಾಡುಗಳಲ್ಲಿ ಸುಂದರ ದೃಶ್ಯಗಳು ಕಣ್ತುಂಬಿಕೊಳ್ಳುತ್ತದೆ. ಅಷ್ಟು ಚನ್ನಾಗಿ ಛಾಯಾಗ್ರಾಹಕ ಕೆಲಸ ಮಾಡಿದ್ದಾರೆ.
ಮೊದಲೇ ಹೇಳಿದಂತೆ ಪ್ರಭುತ್ವದಲ್ಲಿ ಹಲವಾರು ಹಿರಿಯ ಹಾಗೂ ದೊಡ್ಡ ನಟ ನಟಿಯರಿದ್ದಾರೆ.