“Powder” movie first song “mission ghama ghama” release on July 5th. ಬಹು ನಿರೀಕ್ಷಿತ ಹಾಸ್ಯ ಚಿತ್ರ “ಪೌಡರ್” , “ಮಿಷನ್ ಘಮ ಘಮ” ಎಂಬ ತನ್ನ ಮೊದಲ ಗೀತೆಯನ್ನು ಜುಲೈ 5 ರಂದು ಬಿಡುಗಡೆ ಮಾಡಲಿದೆ.
“ಮಿಷನ್ ಘಮ ಘಮ” ಶುರು: ವಾಸುಕಿ ವೈಭವ್, ಎಂ.ಸಿ.ಬಿಜ್ಜು ಜೋಡಿ ಮೋಡಿ
ಬಹು ನಿರೀಕ್ಷಿತ ಹಾಸ್ಯ ಚಿತ್ರ “ಪೌಡರ್” , “ಮಿಷನ್ ಘಮ ಘಮ” ಎಂಬ ತನ್ನ ಮೊದಲ ಗೀತೆಯನ್ನು ಇದೇ ಜುಲೈ 5 ಬಿಡುಗಡೆ ಮಾಡುವಂತೆ ಘೋಷಿಸಿದೆ.
ಈ ಗೀತೆಯು ಹೆಸರಾಂತ ಗಾಯಕರು ಮತ್ತು ಸಂಯೋಜಕರಾದ ವಾಸುಕಿ ವೈಭವ್ ಮತ್ತು ಎಂ.ಸಿ.ಬಿಜ್ಜು ಅವರ ಸಹಯೋಗದಲ್ಲಿ ಮೂಡಿ. ಬರಲಿದ್ದು, ಈಗಾಗಲೇ ಎಲ್ಲರ ಗಮನ ಸೆಳೆದಿದೆ.
“ಪೌಡರ್” ಒಂದು ಹಾಸ್ಯಭರಿತ ಚಿತ್ರವಾಗಿದ್ದು, ಇದನ್ನು ಜನಾರ್ದನ್ ಚಿಕ್ಕಣ್ಣ ನಿರ್ದೇಶಿಸಿರುತ್ತಾರೆ. ದಿಗಂತ್ ಮಂಚಾಲೆ, ಧನ್ಯ ರಾಮ್ ಕುಮಾರ್, ಅನಿರುದ್ಧ್ ಆಚಾರ್ಯ, ಶರ್ಮಿಳಾ ಮಾಂಡ್ರೆ, ರಂಗಾಯಣ ರಘು ಮತ್ತು ಇನ್ನಿತರರು ನಟಿಸಿರುವ ಈ ಚಿತ್ರವು ಕೆ.ಆರ್.ಜಿ ಸ್ಟೂಡಿಯೋಸ್ ಮತ್ತು ಟಿ.ವಿ.ಎಫ್. ಮೋಷನ್ ಪಿಕ್ಚರ್ಸ್ ನ ಚೊಚ್ಚಲ ಸಹಯೋಗವಾಗಿದೆ. ಚಿತ್ರವನ್ನು ಕಾರ್ತಿಕ್ ಗೌಡ, ಯೋಗಿ ಜಿ ರಾಜ್, ವಿಜಯ್ ಸುಬ್ರಹ್ಮಣ್ಯಂ ಕೆ.ಆರ್.ಜಿ ಸ್ಟೂಡಿಯೋಸ್ ಬ್ಯಾನರ್ ಅಡಿಯಲ್ಲಿ ಹಾಗೂ ಅರುನಭ್ ಕುಮಾರ್ ಟಿ.ವಿ.ಎಫ್. ಮೋಷನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಿದ್ದಾರೆ.
“ಪೌಡರ್” ಇದೇ ಆಗಸ್ಟ್ 15ಕ್ಕೆ ತೆರೆ ಕಾಣಲಿದೆ.