Photo movie Released on March – 15th. 150ರೂಪಾಯಿ ಇದ್ರೆ ಫೋಟೋ ಸಿನಿಮಾ ನೋಡಬಹುದು…ಮಾ.15ಕ್ಕೆ ಬರ್ತಿದೆ ಲಾಕ್ ಡೌನ್ ಕಥೆ

150ರೂಪಾಯಿ ಇದ್ರೆ ಫೋಟೋ ಸಿನಿಮಾ ನೋಡಬಹುದು…ಮಾ.15ಕ್ಕೆ ಬರ್ತಿದೆ ಲಾಕ್ ಡೌನ್ ಕಥೆ

ಮಾರ್ಚ್.15ಕ್ಕೆ ಪ್ರಕಾಶ್ ರಾಜ್ ಮೆಚ್ಚಿದ ಫೋಟೋ ರಿಲೀಸ್..ಮಲ್ಟಿಪ್ಲೆಕ್ಸ್ ನಲ್ಲಿ ಟಿಕೆಟ್ ಬೆಲೆ ಎಷ್ಟು ಗೊತ್ತಾ?

ಫೋಟೋ ಅಂತರಂಗ ತೆರೆದಿಟ್ಟ ನಿಮ್ಮ ಸಂಗ ಹಾಡು

ಫೋಟೋ ಸಿನಿಮಾದ ಜನಪದ ಶೈಲಿಯ ಹಾಡು ರಿಲೀಸ್…ಮಾ.15ಕ್ಕೆ ತೆರೆಗೆ ಬರ್ತಿದೆ ಕೊರೋನಾ ನೋವಿನ ಕಥೆ

ಪ್ರಕಾಶ್ ರಾಮ್ ಪ್ರೆಸೆಂಟ್ ಮಾಡ್ತಿರುವ ಫೋಟೋ ಅಂಗಳದಿಂದ ಬಂತು ಜನಪದ ಶೈಲಿಯ ಹಾಡು

ಮಾ.15ಕ್ಕೆ ‘ಫೋಟೋ’ ಬೆಳ್ಳಿತೆರೆಗೆ ಎಂಟ್ರಿ…

ಕೋವಿಡ್‌ನ ಆರಂಭ ಘಟ್ಟದಲ್ಲಿ ಯಾವುದೇ ಮುನ್ಸೂಚನೆ ಇಲ್ಲದೇ ಕೇಂದ್ರ ಸರ್ಕಾರವು ಘೋಷಿಸಿದ ಲಾಕ್‌ಡೌನ್‌ನ ಪರಿಣಾಮ ವಲಸೆ ಕಾರ್ಮಿಕರು ಅನುಭವಿಸಿದ ಕಷ್ಟಗಳನ್ನು ಬಿಚ್ಚಿಡುವ ‘ಫೋಟೋ’ ಸಿನಿಮಾ ಮಾರ್ಚ್ 15ರಂದು ಥಿಯೇಟರ್‌ಗೆ ಬರ್ತಿದೆ. ಟ್ರೇಲರ್‌ ಮೂಲಕ ಪ್ರೇಕ್ಷಕರಿಗೆ ಆಮಂತ್ರಣ‌ ಕೊಟ್ಟಿರುವ ಚಿತ್ರತಂಡವೀಗ ನಿಮ್ಮ ಸಂಗ ಎಂಬ ಹಾಡನ್ನು ಅನಾವರಣ ಮಾಡಿದೆ. ಖಾಸಗಿ ಹೋಟೆಲ್ ನಲ್ಲಿ ಫೋಟೋ‌ ಹಾಡು ಬಿಡುಗಡೆ ಮಾಡಲಾಯಿತು. ಈ ಚಿತ್ರ ಪ್ರೆಸೆಂಟ್ ಮಾಡುತ್ತಿರುವ ಪ್ರಕಾಶ್ ರಾಜ್ ಹಾಗೂ ನಿರ್ದೇಶಕ ಉತ್ಸವ ಸಿನಿಮಾ ಬಗ್ಗೆ ತಮ್ಮ ಅನಿಸಿಕೆ‌ ಹಂಚಿಕೊಂಡಿದ್ದಾರೆ.

ಪ್ರಕಾಶ್ ರಾಜ್ ಮಾತನಾಡಿ, ನಾನು ಏನು ದೊಡ್ಡ ಕೆಲಸ ಮಾಡಿಲ್ಲ. ಈ ತರ ಕೆಲಸ‌ ಮಾಡಿಸಿಕೊಳ್ಳುವ, ಈ ತರ ಸಾಥ್ ಕೊಡುವ ಅರ್ಹತೆ ಆ ಸಿನಿಮಾಗೆ ಇದೆ. ನಾನು ಸಿನಿಮಾ ನೋಡಿದೆ. ಬಹಳ ದಿನಗಳಿಂದ ನೋಡಬೇಕಿತ್ತು.‌ಹಲವಾರು ಕಾರಣಗಳಿಂದ ನೋಡಲು ಆಗಿರಲಿಲ್ಲ. ಉತ್ಸವ್ ಹಾಗೂ ಅವರ ತಂಡದವರು ಪ್ರಕಾಶ್ ರೈಗೆ ತೋರಿಸಬೇಕು ಅಂದಾಗ. ನಮಗೆ ಸಾರ್ಥಕ ಅನಿಸುತ್ತದೆ. ಸಿನಿಮಾ ನೋಡಿದ ಬಳಿಕ ಹದಿನೈದು ನಿಮಿಷ ಮಾತು ಬರಲಿಲ್ಲ. ಕೆಲವೊಮ್ಮೆ ಯಾಕೆ ಅಳುತ್ತೇವೆ ಅಂತಾ ಗೊತ್ತಿಲ್ಲ. ಪ್ರಾಮಾಣಿಕ ಪ್ರಯತ್ನಕ್ಕೆ ಹೇಗೆ ರಿಯಾಕ್ಟ್ ಮಾಡಬೇಕು ಅನ್ನುವುದು ಗೊತ್ತಿರಲಿಲ್ಲ.

ಈ ಸಿನಿಮಾ ಥಿಯೇಟರ್ ಗೆ ಬರ್ತಿದೆ. ಒಬ್ಬ ಯುವಕರ ತಂಡ ಮಾಡಿರುವ ಸಿನಿಮಾ. ಈ ರೀತಿ ಯುವಕರು ಹಾಗೂ ಈ ರೀತಿ ಸಿನಿಮಾಗಳು ಬೆಳೆಯಬೇಕು. ವರ್ಲ್ಡ್ ಸಿನಿಮಾದಲ್ಲಿ ಕಂಟೆಂಟ್ ಮುಖ್ಯವಾಗಿದೆ. ಸಿನಿಮಾ ಇದೇ 15ಕ್ಕೆ ಬಿಡುಗಡೆಯಾಗುತ್ತಿದೆ. ಎಲ್ಲಾ ಮಲ್ಟಿಪ್ಲೆಕ್ಸ್ ನಲ್ಲಿ ಚಿತ್ರ ಬಿಡುಗಡೆ ಮಾಡುತ್ತೇವೆ. ಸಿಂಗಲ್ ಥಿಯೇಟರ್ ನಲ್ಲಿ ಅಲ್ಲ. 22ರ ನಂತರ ಉತ್ತರ ಕರ್ನಾಟಕದ ಸಿಂಗಲ್ ಥಿಯೇಟರ್ ನಲ್ಲಿ ರಿಲೀಸ್ ಮಾಡುತ್ತೇವೆ. ಫೋಟೋ ಸಿನಿಮಾ ಎಲ್ಲರಿಗೆ ತಲುಪಲು 150ರೂ ಟಿಕೆಟ್ ರೇಟ್ ಫಿಕ್ಸ್ ಮಾಡಿದ್ದೇವೆ ಎಂದರು.

ನಿರ್ದೇಶಕ ಉತ್ಸವ್ ಮಾತನಾಡಿ, ಫೋಟೋ ಸಿನಿಮಾ ರಿಲೀಸ್ ಮಾಡುವುದು ಹೇಗೆ ಎಂಬ ಪ್ರಶ್ನೆ ಇತ್ತು. ಪ್ರಕಾಶ್ ಸರ್ ಬಂದಿದ್ದು ನಮಗೆ ದೊಡ್ಡ ಶಕ್ತಿ. ಉತ್ಸವ್ ಗೆ ಶಕ್ತಿ ಆಗಲ್ಲ. ನನ್ನ ತರ ಸಿನಿಮಾ ಮಾಡುವವರಿಗೆ ನಂಬಿಕೆ. ಮುಂದಿನ ಸಿನಿಮಾ ಮಾಡಲು ಪ್ರಕಾಶ್ ಸರ್ ಧೈರ್ಯ ಕೊಟ್ಟಿದ್ದಾರೆ ಎಂದರು.

ನಿಮ್ಮ ಸಂಗ ಎಂಬ ಜನಪದ ಶೈಲಿಯ ಹಾಡು ಫೋಟೋ ಸಿನಿಮಾದ ಅಂತರಂಗವನ್ನು ಬಿಚ್ಚಿಟ್ಟಿದೆ. ನಿರ್ದೇಶಕ ಉತ್ಸವ್ ಸಾಹಿತ್ಯ ಬರೆದಿರುವ ಹಾಡಿಗೆ ಶಿಲ್ಪಾ ಮುಡ್ಬಿ ಧ್ವನಿಯಾಗಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ಎದುರಿಸಿ ಕಷ್ಟಗಳನ್ನು ಹಾಡಿನಲ್ಲಿ ಕಟ್ಟಿಕೊಡಲಾಗಿದೆ.

150ರೂಪಾಯಿಗೆ ಸಿಗಲಿದೆ ಫೋಟೋ ಟಿಕೆಟ್

ಫೋಟೋದಂತಹ ಸಾಮಾಜಿಕ ಕಳಕಳಿಯುಳ್ಳ ಸಿನಿಮಾ ಪ್ರೇಕ್ಷಕರಿಗೆ ತಲುಪಿಸಬೇಕು ಎಂಬ ಉದ್ದೇಶದಿಂದ ಚಿತ್ರದ ಟಿಕೆಟ್ ಬೆಲೆಯನ್ನು ಕಡಿಮೆ ಮಾಡಲಾಗಿದೆ.
ಮಲ್ಟಿಪ್ಲೆಕ್ಸ್​ನಲ್ಲಿ ಹಾಯಾಗಿ ಸಿನಿಮಾ ನೋಡಬೇಕು ಎಂಬುದು ಪ್ರೇಕ್ಷಕರ ಆಸೆ. ಆದರೆ ದುಬಾರಿಯಾದ ಸಿನಿಮಾಗಳ ಟಿಕೆಟ್​ ದರ ನೋಡಿ ಎಷ್ಟೋ ಜನರು ಮಲ್ಟಿಪ್ಲೆಕ್ಸ್​ ಕಡೆಗೆ ತಲೆ ಹಾಕುವುದಿಲ್ಲ. ಕುಟುಂಬ ಸಮೇತರಾಗಿ ಸಿನಿಮಾ ನೋಡಲು ಹೋದರೆ ಜೇಬಿಗೆ ಹೊರೆಯಾಗುತ್ತದೆ ಎಂದು ಚಿಂತಿಸುವ ವರ್ಗ ಕೂಡ ದೊಡ್ಡದಿದೆ. ಅಂಥವರಿಗೆಲ್ಲ ಫೋಟೋ ತಂಡ ಗುಡ್​ ನ್ಯೂಸ್​ ಕೊಟ್ಟಿದೆ. ಕೇಲವ 150 ಟಿಕೆಟ್ ಬೆಲೆಯನ್ನು ನಿಗದಿ ಮಾಡಿದೆ.

ಫೋಟೋ ಸಿನಿಮಾವನ್ನು ‘ನಿರ್ದಿಗಂತ’ದ ಮೂಲಕ ಪ್ರಕಾಶ್ ರಾಜ್ ಪ್ರೆಸೆಂಟ್ ಮಾಡುತ್ತಿದ್ದಾರೆ. ಈ ಚಿತ್ರದ ಮೂಲಕ ಉತ್ಸವ್ ಗೋನವಾರ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ‘ಮಸಾರಿ ಟಾಕೀಸ್’ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣ ಆಗಿದೆ.

ಮಹಾದೇವ ಹಡಪದ್, ಜಹಾಂಗೀರ್, ಸಂಧ್ಯಾ ಅರಕೆರೆ, ಮತ್ತು ವೀರೇಶ್ ಗೊನ್ವಾರ್ ಈ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ದಿನೇಶ್ ದಿವಾಕರನ್ ಛಾಯಾಗ್ರಹಣ, ರವಿ ಹಿರೇಮಠ್ ಶಬ್ದ ವಿನ್ಯಾಸ, ಶಿವರಾಜ್ ಮೆಹೂ ಸಂಕಲನ ಮಾಡಿದ್ದಾರೆ. ಮಾರ್ಚ್ 15ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor