Pepe movie review. ಸಂಪ್ರದಾಯದ ಸಂಘರ್ಷಗಳ ನಡುವೆ ತೊಳೆಯಲಾರದ ರಕ್ತ ತೊರೆಯ ಚರಿತ್ರೆ
ಚಿತ್ರ: ಪೆಪೆ
ನಿರ್ಮಾಣ: ಉದಯಶಂಕರ್ ಎಸ್ ಮತ್ತು ಬಿ.ಎಂ. ಶ್ರೀರಾಮ್ (ಕೋಲಾರ)
ನಿರ್ದೇಶನ: ಶ್ರೀಲೇಶ್ ಎಸ್. ನಾಯರ್
ತಾರಾಗಣ: ವಿನಯ್ ರಾಜಕುಮಾರ್, ಮಯೂರ್ ಪಟೇಲ್, ಕಿಟ್ಟಿ, ಕಾಜಲ್ ಕುಂದರ್, ಯಶ್ ಶೆಟ್ಟಿ, ಮೇದಿನಿ ಕೆಳಮನೆ, ರವಿಪ್ರಸಾದ್ ಮಂಡ್ಯ, ಬಲ ರಾಜವಾಡಿ, ಅರುಣ ಬಾಲರಾಜ್, ಸಂಧ್ಯಾ ಅರೆಕೆರೆ, ನವೀನ್ ಡಿ. ಪಡೀಲ್ ಮುಂತಾದವರು.
ಸಂಪ್ರದಾಯದ ಸಂಘರ್ಷಗಳ ನಡುವೆ ತೊಳೆಯಲಾರದ ರಕ್ತ ತೊರೆಯ ಚರಿತ್ರೆ
ಆ ತೊರೆಯಲ್ಲಿ ಒಬ್ಬ ರಾಕ್ಷಸನ ಒಂದು ವಸ್ತು ಬಿದ್ದಿದೆ ಅದನ್ನು ಹೊರಗೆ ತೆಗೆಯೊವರೆಗೂ ಅದರಲ್ಲಿ ರಕ್ತ ಹರಿತಲೇ ಇರುತ್ತೆ ಅನ್ನೋದು ಪೆಪೆ ಚಿತ್ರದ ಮೂಲ ತಿರುಳು.

ಇಲ್ಲಿ ಸಂಪ್ರದಾಯಕ್ಕಾಗಿ ತಲೆ ಉರುಳಿಸುವ ಒಬ್ಬ ಅಪ್ಪ,
ತನ್ನ ಪ್ರತಿಷ್ಟೆಯ ಅಸ್ತಿತ್ವಕ್ಕಾಗಿ ಮಗಳನ್ನೇ ತಲೆ ಹಿಡಿಯುವ ಅಪ್ಪ,
ಕೇರಿಯ ಜನರಿಗಾಗಿ , ತೊರೆಯ ನೀರಿಗಾಗಿ ತಲೆ ಕೊಟ್ಟು ಪ್ರಾಣ ಬಿಡುವ ಅಪ್ಪ,
ಕಣ್ಮುಂದೆ ಮಗಳ ಮೇಲೆ ನಡೆಯುವ ಅನಾಚಾರಕ್ಕೆ ಅಪ್ಪನನ್ನೇ ಕೊಲ್ಲುವ ಮತ್ತೊಬ್ಬ ಅಪ್ಪ ಹೀಗೇ ನಾನಾ ರೀತಿಯ ಅಪ್ಪಂದಿರನ್ನು ಪೆಪೆ ಚಿತ್ರದಲ್ಲಿ ಕಾಣಬಹುದು.
ಅದೊಂದು ತೊರೆ ಅದರಲ್ಲಿ ನೀರಿಗಿಂತ ಹೆಚ್ಚಾಗಿ ಹರಿದಿದ್ದು ರಕ್ತ, ಹರಿಯುವ ನೀರಿಗೆ ಮೂತ್ರ ಬೆರೆಸಿ ಕುಡಿಸುವ ವಿಕೃತ ಮನಸ್ಸಿನ ಜನರಿದ್ದಾರೋ ಅಥವಾ ನಿರ್ದೇಶಕನ ಮನಸ್ಸಿನ ವಿಕೃತ ಕಲ್ಪನೆಯೋ ಗೊತ್ತಿಲ್ಲ.

ಇಲ್ಲಿ ಚಿತ್ರದ ಮೊದಲ ದೃಶ್ಯದಿಂದ ಕೊನೆಯವರೆಗೂ ಕಣ್ಣಿಗೆ ರಾಚುವುದು ರಕ್ತ.
ಇಲ್ಲಿ ಮಳೆಯಲ್ಲಿ ನೆಂದರು, ತೊರೆಯಲ್ಲಿ ಮಿಂದರೂ ಮೈಗಂಟಿದ ರಕ್ತ ತೊಳೆಯಲಾಗುವುದಿಲ್ಲ.
ಚಿತ್ರದಲ್ಲಿ ಹೇಳುವಂತೆ ತೊರೆಗಾಗಿ ಕೈಗಂಟಿದ ರಕ್ತ ಯಾವ ಸಮುದ್ರದ ನೀರಿನಲ್ಲಿ ತೊಳೆದರು ಹೋಗುವುದಿಲ್ಲ ಅಂತ ನಿಜ ನಿರ್ದೇಶಕ ಶ್ರೀಲೇಶ್ S ನಾಯರ್ ಇಂಥಹ ಕ್ರೌರ್ಯದ ರಕ್ತ ಸಿಕ್ತ ಕಥೆಯನ್ನು ತೆರೆಯ ಮೇಲೆ ಲೆಕ್ಕವಿಲ್ಲದಷ್ಟು ತಲೆಗಳ ಉರುಳಿಸಿ ರಕ್ತದೋಕುಳಿಯಲ್ಲಿ ಕಥಾ ನಾಯಕನನ್ನು ನೆನೆಸಿದ್ದಾರೆ.

ನಾಲ್ಕು ಕುಟುಂಬಗಳ ನಡುವೆ ನಡೆಯುವ ಸಂಪ್ರದಾಯ ಮತ್ತು ತೊರೆ ನೀರಿನ ದ್ವೇಷ ಈಡೀ ಚಿತ್ರವನ್ನು ಆವರಿಸಿದೆ.
ಚಿತ್ರದ ನಾಯಕ ನಟ ಪ್ರದೀಪ ಉರುಫ್ “ಪೆಪೆ” ಕೇರಿಯ (ಏರಿಯ) ಕುಟುಂಬದ ದ್ವೇಶವನ್ನು ವಂಶಪರಂಪರೆಯಾಗಿ ಮುನ್ನಡೆಸುವ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತು ಅದರ ಭಾರವನ್ನು ಮಚ್ಚಿನ ಹರಿತದಿಂದ ಇಳಿಸುವಲ್ಲಿ ಸುಸ್ತಾಗುತ್ತಾನೆ.
ಈ ಪಾತ್ರದಲ್ಲಿ ವಿನಯ್ ರಾಜಕುಮಾರ್ ತಮ್ಮ ಅಭಿನಯದ ಕೌಶಲ್ಯವನ್ನು ಧಾರೆ ಎರೆದಿದ್ದಾರೆ. ಇಡೀ ಚಿತ್ರದಲ್ಲಿ ಒಂದೇ ಭಾವ, ಒಂದೇ ಧ್ಯೇಯ ಎಂಬಂತೆ ಕೈಗೆ ಸಿಕ್ಕಿದ್ದನ್ನು ಬೀಸಿದ್ದಾರೆ. ವಿನಯ್ ಸಿನಿ ಪಯಣದಲ್ಲಿ ಮೊದಲ ಬಾರಿಗೆ ಈ ರೀತಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಬಬಹಳ ವರ್ಷಗಳ ನಂತರ ಮಯೂರ್ ಪಟೇಲ್ ಬಣ್ಣ ಹಚ್ಚಿದ್ದಾರೆ ಪೆಪೆಯ ಮಾವನಾಗಿ ಅಭಿನಯಿಸಿರುವ ಮಯೂರ್ ಚಿತ್ರದ ಮತ್ತೊಬ್ಬ ನಾಯಕ ಎನ್ನಬಹುದು. ಮಯೂರ್ ಈ ಪಾತ್ರದ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.

ಬರೀ ಲವ್ವರ್ ಬಾಯ್ ಅಷ್ಟೇ ಅಲ್ಲ
ಆಕ್ಷನ್ ಚಿತ್ರವನ್ನು ಮಾಡಬಲ್ಲೆ ಎನ್ನುವುದನ್ನು ಸಾಭೀತು ಪಡಿಸಲು ಶತಾಯಗತಾಯ ಹೋರಾಡಿದ್ದಾರೆ.
ಇದು ಕ್ರೌರ್ಯ ರಾರಾಜಿಸುವ “ರಾ” ಚಿತ್ರ ಪೆಪೆ.
ತಾಂತ್ರಿಕಥೆಯ ಕೌಶಲ್ಯ ವನ್ನು ನಿರ್ದೇಶಕರು ಸಣ್ಣ ಸಣ್ಣ ವಿಷಯಗಳನ್ನು ದೃಶ್ಯಗಳ ಮೂಲಕ ಚನ್ನಾಗಿ ತೋರಿಸಿದ್ದಾರೆ. ಇಲ್ಲಿ ಛಾಯಾಗ್ರಹಣ ಹಾಗೂ ಸಂಕಲನದ ಜೊತೆಗೆ ಹಿನ್ನೆಲೆ ಸಂಗೀತ ತುಂಬಾ ಚನ್ನಾಗಿ ಅನ್ಯೋನ್ಯತೆಯಿಂದ ಹೊಂದಿಕೊಂಡಿವೆ.
ಮಲಬಾರಿ ಎನ್ನುವವನು ಆ ತೊರೆಯಿಂದ ಮರಳು ತೆಗೆಯುವ ಮಾಡುತ್ತಿರುತ್ತಾನೆ ಈ ಕೆಲಸಕ್ಕೆ ಬಂದ ಕೆಳಜಾತಿಯ ರಾಯಪ್ಪನಿಗೂ ಮೇಲ್ಜಾತಿಯ ಮಲಬಾರಿಗೂ ಸಂಘರ್ಷ ಏರ್ಪಡುತ್ತದೆ. ಆ ಸಂಘರ್ಷದಲ್ಲಿ ಒಂದಿಷ್ಟು ಹೆಣಗಳು ಉರುಳುತ್ತವೆ. ರಾಯಪ್ಪನ ಮೊಮ್ಮೊಗ ಪೆಪೆ ತೊರೆಯನ್ನು ಪಡೆಯುಲು ಏನೆಲ್ಲಾ ಮಾಡುತ್ತಾನೆ, ತೊರೆಯ ಸುತ್ತ ಏನೆಲ್ಲ ನಡೆಯುತ್ತೆ,
ಇಲ್ಲಿ ತಾಯಿ, ಮಗಳು, ಪ್ರೇಯಸಿಯರಾಗಿ ಹೆಣ್ಣು ಮಕ್ಕಳ ತ್ಯಾಗವೇನು ಎನ್ನುವುದು ತಿಳಿಯಬೇಕಾದರೆ ಪೆಪೆ ಚಿತ್ರ ನೋಡಬೇಕಾಗುತ್ತದೆ.