Parmvha movie Review ಪರವಾಗಿಲ್ಲ ಗುರು ಹೊಸಬರು ಪರಂವಃ ಅನ್ನೋ ಒಳ್ಳೆ ಸಿನಿಮಾ ಮಾಡಿದ್ದಾರೆ.
ಇತ್ತೀಚೆಗೆ ಸಿನಿಮಾಗಳು ಒಂದೊಂದೆ ಮಖಾಡೆ ಮಲಕ್ಕೊಂತಿವೆ ಎಷ್ಟೇ ಒಳ್ಳೆ ಸಿನಿಮಾಗಳು ಬಿಡುಗಡೆಯಾದ್ರು ಜನ ಥಿಯೇಟರ್ ಗಳಿಗೆ ಬರುತ್ತಿಲ್ಲ ಎಂಬ ಕೂಗೂ ಸಿನಿಮಾ ತಯಾರಿಕರ, ತಂತ್ರಜ್ಞನರ ಹಾಗೂ ಕಲಾವಿದರಿಂದ ಬರುತ್ತಿದೆ.
ಈಗ ಇಂದು ಹೊಸಬರ ಚಿತ್ರವೊಂದು ತೆರೆ ಕಂಡಿದೆ. ಚಿತ್ರದ ಹೆಸರು ಪರಂವಃ ಪ್ರಾರಂಭದಲ್ಲಿ ಎಲ್ಲ ಸಿನಿಮಾಗಳಂತೆ ಇದೊಂದು ಸಿನಿಮಾ ಅಂತ ಕುಳಿತು ನೋಡಿದರೆ ನಿಜಕ್ಕುಒಂದು ಒಳ್ಳೆಯ ಕಂಟೆಂಟ್ ಇರೋ ಸಿನಿಮಾ ಅನ್ನಿಸುತ್ತದೆ.
ಅಪ್ಪ ಮಗನ ಭಾಂದ್ಯವದೊಂದಿಗೆ ಶುರುವಾಗುವ ಚಿತ್ರ ಕೊನೆಗೆ ಅಪ್ಪ ಮಗನ ಸಂಬಂಧದೊಂದಿಗೆ ಚಿತ್ರ ಪ್ರೇಕ್ಷಕನ ಕಣ್ಣೀರಿನೊಂದಿಗೆ ಮುಕ್ತಾಯ ವಾಗುತ್ತದೆ.
ಇದರ ಮದ್ಯೆ ನಡೆಯುವ ಪರಂ ಬದುಕಿನ ಚಿತ್ರಣವನ್ನು ನಿರ್ದೇಶಕ ಸಂತೋಷ್ ಕೈದಾಳ ವಿಭಿನ್ನವಾಗಿ ಪ್ರೇಕ್ಷಕರ ಮುಂದಿಟ್ಟಿದ್ದಾರೆ.
ಇದೊಂದು ಬೇರೆಯದೇ ರೀತಿಯಲ್ಲಿ ಚಿತ್ರ ಮೂಡಿ ಬಂದಿದೆ.
ಚಿತ್ರದ ನಾಯಕ ಪ್ರೇಮ್ ತನ್ನ ಅಭಿನಯದ ಖದರನ್ನು ಬೇರೆ ಬೇರೆಯ ಶೇಡ್ ಗಳಲ್ಲಿ ಪ್ರೇಕ್ಷಕರ ಮುಂದಿಟ್ಟಿದ್ದಾರೆ. ಮೊದಲ ಬಾರಿಗೆ ನಾಯಕನಾಗಿ ಅಭಿನಯಿಸಿರೋ ಈತ ಒಬ್ಬ ಒಳ್ಳೆಯ ನಟ ಎಂಬುದನ್ನು ತನ್ನೊಳಗಿರುವ ಪ್ರತಿಭೆಯನ್ನು ಹೊರ ಹಾಕುವ ಮೂಲಕ ಸಾಬೀತು ಪಡಿಸಿದ್ದಾರೆ.
ಇನ್ನು ಚಿತ್ರದ ನಟಿ ಮೈತ್ರಿ ಜೆ. ಕಶ್ಯಪ್ ತುಂಬಾ ನ್ಯಾಚುರಲ್ ಆಗಿ ಅಭಿನಯಿಸಿ ಪಾತ್ರಕ್ಕೆ ಜೀವ ತುಂಬಿದ್ದಾರೆ.
ಚಿತ್ರದ ಕಥೆ, ಸಾಹಿತ್ಯ, ಸಂಗೀತ, ಛಾಯಾಗ್ರಹಣ ನಿಜಕ್ಕೂ ಚನ್ನಾಗಿದೆ. ಹಾಗಂತ ಇಲ್ಲಿ ತಪ್ಪುಗಳಿಲ್ಕ ಅಂತಲ್ಲ ಸಣ್ಣ ಪುಟಟ ತಪ್ಪುಗಳಿವೆ ಆದರೆ ಪ್ರೇಕ್ಷಕ ಪೂರ್ಣ ಚಿತ್ರ ನೋಡಿದ ನಂತರ ಅವುಗಳನ್ನು ಮರೆತು ಬಿಡುತ್ತಾನೆ.
ಪ್ರೇಕ್ಷಕ ಪ್ರಭುಗಳು ಈ ಹೊಸಬರ ಚಿತ್ರವನ್ನು ನೋಡಿ ಈ ತಂಡದ ಒಂದು ಪ್ರಾಮಾಣಿಕ ಪ್ರಯತ್ನಕ್ಕೆ ಬೆನ್ನು ತಟ್ಟಿ.
ತಪ್ಪದೇ ಸಿನಿಮಾ ನೋಡಿ ಈ ಸುದ್ದಿಯನ್ನು ನಿಮ್ಮ ಸ್ನೇಹಿತರ ಕಿವಿಗಳಿಗೂ ಹರಡಿ.