ಗಂಡ ಹೆಂಡತಿ ಸಂಬಂಧ ಪರಿಶುದ್ಧವಾದುದು
ವಿಭಿನ್ನ ಕಥಾಹಂದರ ಹೊಂದಿರುವ ’ಪರಿಶುದ್ಧಂ’ ಚಿತ್ರಕ್ಕೆ ಆರೋನ್ ಕಾರ್ತಿಕ್‌ವೆಂಕಟೇಶ್ ಕಥೆ, ಸಾಹಿತ್ಯ, ಸಂಗೀತ ಜತೆಗೆ ನಿರ್ದೇಶನದ ಜವಬ್ದಾರಿಯನ್ನು ಹೊತ್ತುಕೊಂಡಿದ್ದು, ನಿರ್ಮಾಣದಲ್ಲಿ ಪಾಲುದಾರನಾಗಿದ್ದೇನೆ. ಮದುವೆ ಅನ್ನುವ ಪದ್ದತಿ ಪರಿಶುದ್ದವಾದದು. ಗಂಡಹೆಂಡತಿ ಸಂಬಂಧದಲ್ಲಿ ಮೂರನೇ ವ್ಯಕ್ತಿ ಪ್ರವೇಶ ಆಗಬಾರದೆಂದು ಸಂದೇಶದಲ್ಲಿ ಹೇಳಲಾಗಿದೆ. ಇದನ್ನು ಕಮರ್ಷಿಯಲ್ ರೀತಿಯಲ್ಲಿ ತೋರಿಸಲಾಗಿದೆ. ನಟಿ ಕಲ್ಪನಾರಂತೆ ಸ್ಪರ್ಶಾರೇಖಾ ತೂಕದ ಪಾತ್ರವನ್ನು ನಿರ್ವಹಿಸಿದ್ದಾರೆ. ಅತಿಥಿಯಾಗಿ ಎಂ.ಡಿ.ಕೌಶಿಕ್ ಕೊನೆ ದೃಶ್ಯದಲ್ಲಿ ಬರಲಿದ್ದು, ಭಾಗ-2ರಲ್ಲಿ ಇವರಿಂದಲೇ ಸಿನಿಮಾವು ಶುರುವಾಗುತ್ತದೆ. ಬೆಂಗಳೂರು, ಮಂಗಳೂರು, ತುಮಕೂರು, ಬ್ಯಾಂಕಾಕ್ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಚಿತ್ರದಲ್ಲಿ ಇಂಗ್ಲೀಷ್ ಗೀತೆಯೊಂದು ಇರಲಿದ್ದು, ಇದನ್ನು ಗ್ರ್ಯಾಮಿ ಪ್ರಶಸ್ತಿಗೆ ಕಳುಹಿಸಲಾಗಿದೆ. ಎರಡೇ ಸ್ವರದಲ್ಲಿ ’ಕ’ ಅಕ್ಷರದೊಂದಿಗೆ ಹಾಡನ್ನು ಬರೆಯಲಾಗಿದ್ದು ಎಂ.ಡಿ.ಪಲ್ಲವಿ ಧ್ವನಿಯಾಗಿದ್ದಾರೆ.

ರೋಹನ್‌ಕಿಡಿಯಾರ್ ಬಂಡವಾಳ ಹೂಡುವ ಜತೆಗೆ ಸ್ವರ್ಶಾರೇಖಾ ಅವರಿಗೆ ಜೋಡಿಯಾಗಿ ನಟಿಸಿದ್ದಾರೆ. ಕುಮಾರ್‌ರಾಥೋಡ್ ನಿರ್ಮಾಪಕರಲ್ಲಿ ಒಬ್ಬರಾಗಿದ್ದಾರೆ. ಮತ್ತೋಂದು ಮುಖ್ಯ ಪಾತ್ರದಲ್ಲಿ ದಿಶಾಪೂವಯ್ಯ ಉಳಿದಂತೆ ಯತಿರಾಜ್,ಭಾರ್ಗವ್, ಅರ್ಚನಾ, ವಿಕ್ಟರಿವಾಸು, ಕುರಿರಂಗ, ಮೈಸೂರುರಮಾನಂದ್, ರಾಜ್‌ಚರಣ್, ದುಬೈರಫೀಕ್ ಮುಂತಾದವರು ಅಭಿನಯಿಸಿದ್ದಾರೆ. ಸಂಕಲನ ನಿಖಿಲ್, ಸಂಭಾಷಣೆ ವಿನಯ್‌ಮೂರ್ತಿ, ಸಾಹಸ ರಾಮ್‌ದೇವ್, ನೃತ್ಯ ಕಿಶೋರ್ ಅವರದಾಗಿದೆ. ಸಿನಿಮಾವು ಸೆಪ್ಟಂಬರ್ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.
